ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಲಿಖಿತ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದ ಮತ್ತೊಬ್ಬ ಅಭ್ಯರ್ಥಿಯನ್ನು ಗುರುವಾರ ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ಅರ್ಧ ಶತಕವಾಗಿದೆ.
ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ಶಿವರಾಜ್ ಲಕ್ಷ್ಮೀಪುತ್ರ ಪೊಲೀಸ್ ಪಾಟೀಲ್ (28) ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈವರೆಗೆ ಒಟ್ಟು 50 ಜನರನ್ನು ಬಂಧಿಸಿದಂತಾಗಿದೆ.
7 ಆಗಸ್ಟ್ 2022ರಂದು ನಡೆದಿದ್ದ ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ಬಳಸಿದ್ದನು. ಆರೋಪಿಯಿಂದ ಇಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮೋರಿ ನಿರ್ಮಾಣ ಕಾಮಗಾರಿ: ಮಂಜೇಶ್ವರ – ಉಕ್ಕುಡ ರಸ್ತೆಯಲ್ಲಿ ಭಾಗಶಃ ಸಂಚಾರ ನಿಷೇಧ