Advertisement

ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ ಪ್ರಕರಣ: ತರಬೇತಿ ಕೇಂದ್ರದ ಮಾಲೀಕನ ಸೆರೆ

09:32 PM Nov 25, 2022 | |

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ದರ್ಜೆ ಸಹಾಯಕರ ಹುದ್ದೆ ಲಿಖೀತ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿ ಸಿದಂತೆ ಗೋಕಾಕನ ಕೋಚಿಂಗ್‌ ಸೆಂಟರ್‌ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ, ಗೋಕಾಕನ ಅಗಸ್ತ್ಯ ಕೋಚಿಂಗ್‌ ಸೆಂಟರ್‌ ಮಾಲೀಕ ಬಾಳೇಶ ಕೆಂಚಪ್ಪ ಕಟ್ಟಿಕಾರ(26) ಎಂಬಾತನನ್ನು ಬಂ ಧಿಸಲಾಗಿದೆ. ಕೆಪಿಟಿಸಿಎಲ್‌ ಕಿರಿಯ ದರ್ಜೆ ಸಹಾಯಕರ ಹುದ್ದೆ ಪರೀಕ್ಷೆ ವೇಳೆ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್‌ ಡಿವೈಸ್‌, ಮೈಕ್ರೋಚಿಪ್‌ ಕೊಟ್ಟು ಉತ್ತರಗಳನ್ನು ಹೇಳಿ ಬರೆಯಿಸುತ್ತಿದ್ದ ಆರೋಪದ ಮೇಲೆ ಬಾಳೇಶನನ್ನು ಬಂಧಿಸಲಾಗಿದೆ.

ಪರೀಕ್ಷೆ ಬರೆದ 17ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಸಂಜೀವ ಭಂಡಾರಿ, ಮಂಜುನಾಥ ಮಾಳಿ ಹಾಗೂ ಶ್ರೀಧರ ಕಟ್ಟಿಕಾರ್‌ ಇತರರೊಂದಿಗೆ ಸೇರಿ ಬಾಳೇಶ ಎಲೆಕ್ಟ್ರಾನಿಕ್‌ ಡಿವೈಸ್‌, ಮೈಕ್ರೋಚಿಪ್‌ ಕೊಟ್ಟು ಅಭ್ಯರ್ಥಿಗಳಿಗೆ ಉತ್ತರಗಳನ್ನು ಹೇಳಿ ಬರೆಯಿಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ. ತನಿಖಾಧಿಕಾರಿ ಡಿಸಿಆರ್‌ಬಿ ಡಿಎಸ್‌ಪಿ ವೀರೇಶ ದೊಡಮನಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಸೂಪರ್‌ ಪವರ್‌ ರ್‍ಯಾಂಕಿಂಗ್‌ ವ್ಯವಸ್ಥೆಯಲ್ಲಿ ಭಾರತಕ್ಕೆ ನಂಬಿಕೆ ಇಲ್ಲ: ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next