Advertisement

ಕೆಪಿಎಸ್‌ಸಿ ಅನರ್ಹರು ಔಟ್‌;ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಮುದ್ರೆ

06:00 AM Apr 12, 2018 | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ 1998, 1999 ಮತ್ತು 2004ನೇ ಸಾಲಿನಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ “ಅಕ್ರಮ ಫ‌ಲಾನುಭವಿ’ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅರ್ಹರಿಗೆ ಅವಕಾಶ ನೀಡುವಂತೆ ಹೈಕೋರ್ಟ್‌ 2016ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

Advertisement

ಇದರಿಂದಾಗಿ ಈ ಮೂರು ವರ್ಷಗಳಲ್ಲಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಅಕ್ರಮವಾಗಿ ನೇಮಕಗೊಂಡ ಹಲವರು ಹುದ್ದೆ ಕಳೆದುಕೊಳ್ಳಬೇಕಿದ್ದು, ಕೆಲವರ ಸ್ಥಾನಪಲ್ಲಟವಾಗಲಿದೆ. ಅಲ್ಲದೇ, ಈ ಅವಧಿಯಲ್ಲಿ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ನೇಮಕಗೊಂಡು ನಂತರ ಐಎಎಸ್‌ಗೆ ಮತ್ತು ಹಿರಿಯ ಶ್ರೇಣಿಗೆ ಬಡ್ತಿ ಪಡೆದ ಕೆಲವು ಅಭ್ಯರ್ಥಿಗಳು ಹಿಂಬಡ್ತಿ ಪಡೆಯಲಿದ್ದಾರೆ. 

ಹೈಕೋರ್ಟ್‌ ತೀರ್ಪನ್ನು ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿ ಯಾವ ರೀತಿ ಜಾರಿಗೊಳಿಸುತ್ತದೆ ಎಂಬುದರ ಮೇಲೆ ಹುದ್ದೆ ಕಳೆದುಕೊಳ್ಳುವವರು ಮತ್ತು ಸ್ಥಾನಪಲ್ಲಟಗೊಳ್ಳುವ ಅಧಿಕಾರಿಗಳ ಸಂಖ್ಯೆ ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ ಸುಮಾರು 50 ಮಂದಿ ಹುದ್ದೆ ಕಳೆದುಕೊಳ್ಳುವ ಅತಂಕಕ್ಕೆ ಸಿಲುಕಿದ್ದಾರೆ.

ಈ ಕುರಿತಂತೆ 2016ರ ಜೂನ್‌ ತಿಂಗಳಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಐಎಎಸ್‌ ಅಧಿಕಾರಿ ಗೋಪಾಲಕೃಷ್ಣ ಮತ್ತಿತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ( ಎಸ್‌ಎಲ್‌ಪಿ) ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್‌ ಹಾಗೂ ನ್ಯಾಯಮೂರ್ತಿ ರೋಹrನ್‌ ಫಾಲಿ ನಾರಿಮನ್‌ ಅವರಿದ್ದ ಪೀಠ, ಹೈಕೋರ್ಟ್‌ ಆದೇಶವನ್ನು ಯತಾಸ್ಥಿತಿ ಪಾಲಿಸಬೇಕು ಎಂದು ನಿರ್ದೇಶಿಸಿದೆ. ಹೈಕೋರ್ಟ್‌ ಆದೇಶ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಿಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next