Advertisement
ನಗರದ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಳಗಾವಿ ಪ್ಯಾಂಥರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ 19.3 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಯಿತು.
ಬೃಹತ್ ಗುರಿಯನ್ನು ಎದುರಿಟ್ಟುಕೊಂಡು ಹೋರಾಟ ನಡೆಸಿದ ಬೆಂಗಳೂರು ಬ್ಲಾಸ್ಟರ್ಗೆ ಎಂ.ವಿಶ್ವನಾಥ್ (65) ಆಸರೆಯಾದರು. ಆದರೆ ಇವರ ಹೋರಾಟ ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ವಿಶ್ವನಾಥ್ ಅವರು ಶಿಶಿರ್ ಭವಾನೆ ಜೊತೆಗೂಡಿ 85 ರನ್ ಸಂಗ್ರಹಿಸಿದರು. ಏಕಾಂಗಿಯಾಗಿ ಬಿಜಾಪುರ ಬುಲ್ಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ವಿಶ್ವನಾಥ್ 35 ಎಸೆತಗಳಲ್ಲಿ 5 ¸ರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 65 ರನ್‌ಗಳಿಸಿದರು. ಈ ವೇಳೆ ರನೌಟ್ ಬಲೆಗೆ ಬಿದ್ದರು. ಇಲ್ಲಿಂದ ಬೆಳಗಾವಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಬೆಳಗಾವಿಯ ಬಿನ್ನಿ ¸ಭರ್ಜರಿ ಬ್ಯಾಟಿಂಗ್: ಕೇವಲ 32 ರನ್‌ಗಳಿಗೆ ಆರಂಭಿಕ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬೆಳಗಾವಿ ತಂಡಕ್ಕೆ ಭರವಸೆಯ ಆಟಗಾರ ಸ್ಟುವರ್ಟ್ ಬಿನ್ನಿ ಆಸರೆಯಾದರು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಿನ್ನಿ ಎದುರಾಳಿ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡಿದರು. ಆರಂಭದಲ್ಲಿ ನಿಧಾನಗತಿಯಲ್ಲೇ ರನ್ ಗಳಿಸುತ್ತ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ರಾಜೂ ¸ಭಟ್ಕಳ್ ಎಸೆದ ಪಂದ್ಯದ 15ನೇ ಓವರ್‌ನಲ್ಲಿ ರನ್‌ವೇಗ ಹೆಚ್ಚಿಸಿದ ಸ್ಟುವರ್ಟ್, ಒಂದೇ ಓವರ್‌ನಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 23 ರನ್ ಬಾರಿಸುವ ಮೂಲಕ ಅರ್ಧಶತಕ ಸಿಡಿಸಿ ಆರ್ಭಟಿಸಿದರು. ಒಟ್ಟು 3 ಬಾರಿ ಜೀವದಾನ ಪಡೆದ ಬಿನ್ನಿ ಕೊನೆಯ ಮೂರು ಓವರ್‌ಗಳಿವೆ ಎನ್ನುವಾಗ ಭಾರೀ ಪ್ರಮಾಣದಲ್ಲಿ ಏರಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಬೆಳಗಾವಿ ಸ್ಕೋರ್ ನಿರೀಕ್ಷೆಗೆ ಮೀರಿ ಏರಿಕೆ ಕಂಡಿತ. ಕೇವಲ 45 ಎಸೆತ ಎದುರಿಸಿದ ಬಿನ್ನಿ, 8 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್ ಸಹಿತ 87 ರನ್ ಗಳಿಸಿದರು. ಪರಿಣಾಮ ಬೆಳಗಾವಿ 192 ರನ್‌ಗಳವರೆಗೆ ಏರಿಕೆ ಕಂಡಿತು. ಇದುವರೆಗೆ ಬೆಂಗಳೂರಿಗೆ ಸವಾಲೆನಿಸಿತು.
Related Articles
Advertisement
– ಸಿ.ದಿನೇಶ್