Advertisement
ಇಲ್ಲಿನ ಮಾನಸಗಂಗೋತ್ರಿಯ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 6ನೇ ಆವೃತ್ತಿಯ ಮೈಸೂರು ಚರಣದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ 19.4 ಓವರ್‌ಗೆ 154 ರನ್ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಬಳ್ಳಾರಿ ಟಸ್ಕರ್ 20 ಓವರ್‌ಗೆ 9 ವಿಕೆಟ್ ಕಳೆದುಕೊಂಡು 129 ರನ್ ಬಾರಿಸಿ ಸೋಲುಂಡಿತು.
ಆರಂಭಿಕರಾಗಿ ಕಣಕ್ಕೆ ಇಳಿದ ಬಿ.ಆರ್.ಶರತ್ ಮತ್ತು ಸ್ಟಾಲಿನ್ ಹೂವರ್ ಮೊದಲ ವಿಕೆಟ್‌ಗೆ 6.6 ಓವರ್‌ಗೆ 52 ರನ್ ಜತೆಯಾಟ ನೀಡಿದರು. ಈ ಸಂದರ್ಭದಲ್ಲಿ ಶರತ್ (17) ಭವೇಶ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ಕೆ.ಗೌತಮ್(5) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ.
Related Articles
3ನೇ ವಿಕೆಟ್‌ಗೆ ಜತೆಯಾದ ಹೂವರ್ ಮತ್ತು ಮನೀಶ್ ಪಾಂಡೆ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರಿಂದಾಗಿ ಬೆಳಗಾವಿ ತಂಡ ಮೊತ್ತ ಏರುತ್ತಾ ಸಾಗಿತ್ತು. ಈ ಜೋಡಿ 12.3 ಓವರ್‌ಗೆ ತಂಡದ ಮೊತ್ತವನ್ನು 110 ರನ್‌ಗೆ ತೆಗುದೊಂಡು ಹೋದರು. ಈ ಹಂತದಲ್ಲಿ ಬೆಳಗಾವಿ ದೊಡ್ಡ ಮೊತ್ತ ದಾಖಲಿಸುವ ಸೂಚನೆ ನೀಡಿತ್ತು. ಆದರೆ ಆಗಿದ್ದೆ ಬೇರೆ. ಪಾಂಡೆ ಮತ್ತು ಹೂವರ್ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು. ಇದು ಬೆಳಗಾವಿಗೆ ಆಘಾತವಾಯಿತು. ಪಾಂಡೆ 12 ಎಸೆತದಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದಂತೆ 24 ರನ್ ಬಾರಿಸಿದರು. ಹೂವರ್ 43 ಎಸೆತದಲ್ಲಿ 62 ರನ್ ಬಾರಿಸಿದರು. ಅವರ ಆಟದಲ್ಲಿ 4 ಬೌಂಡರಿ, 4 ಸಿಕ್ಸರ್ ಸೇರಿತ್ತು.
Advertisement
ಕೊನೆಯಲ್ಲಿ ಮಾರಕವಾದ ಪ್ರತೀಕ್ ಜೈನ್:ಪಾಂಡೆ ಮತ್ತು ಹೂವರ್ ವಿಕೆಟ್ ಕಳೆದುಕೊಂಡ ಮೇಲೆ ಬಳ್ಳಾರಿ ತಂಡದ ಪ್ರತೀಕ್ ಜೈನ್ ಮಾರಕವಾದರು. ಒಬ್ಬರ ನಂತರ ಒಬ್ಬರ ವಿಕೆಟ್ ಕಬಳಿಸಿದರು. ಇದರಿಂದಾಗಿ ಬೆಳಗಾವಿ ಇನ್ನೂ ಎರಡು ಎಸೆತ ಬಾಕಿ ಇರುವಾಗಲೇ ಆಲೌಟ್‌ಗೆ ತುತ್ತಾಯಿತು. ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಾಯ್ದುಕೊಳ್ಳವಲ್ಲಿ ಮತ್ತು ರನ್ ಏರಿಸುವಲ್ಲಿ ವಿಫಲರಾದರು. ಬಳ್ಳಾರಿ ಪರ ಪ್ರತೀಕ್ ಜೈನ್ 29ಕ್ಕೆ 3 ವಿಕೆಟ್ ಪಡೆದರೆ, ಅಮಿತ್ ವರ್ಮ, ಭವೇಶ್ ಮತ್ತು ಅನಿಲ್ ತಲಾ 2 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್: ಬೆಳಗಾವಿ ಪ್ಯಾಂಥರ್ 19.4 ಓವರ್‌ಗೆ 154/10(ಸ್ಟಾಲಿನ್ ಹೂವರ್ 62, ಮನೀಶ್ ಪಾಂಡೆ 24, ಪ್ರತೀಕ್ ಜೈನ್ 29ಕ್ಕೆ 3). ಸಂಕ್ಷಿಪ್ತ ಸ್ಕೋರ್ ಬಳ್ಳಾರಿ ಟಸ್ಕರ್ 20 ಓವರ್‌ಗೆ 129/9(ಕೆ.ಬಿ.ಪವನ್ 64, ಅಭಿನವ್ ಮನೋಹರ್ 21, ಕೆ.ಗೌತಮ್ 23ಕ್ಕೆ4). – ಸಿ.ದಿನೇಶ್