ಚಾಮರಾಜನಗರ : ಮೈಸೂರು ಮೇಯರ್ ಚುನಾವಣೆಯಲ್ಲಿ ಸ್ವಲ್ಪಗೊಂದಲ ಆಗಿದೆ.ಇದು ನಮ್ಮ ಮನೆಯಲ್ಲಿ ಆಗಿರುವ ಸಣ್ಣ ಪುಟ್ಟ ವ್ಯತ್ಯಾಸ. ಅದನ್ನು ಬಹಳ ಗಂಬೀರವಾಗಿ ಪರಿಗಣಿಸಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಚಾಮರಾಜನಗರದಲ್ಲಿ ನಡೆದ ಅಭಿನಂದನಾ ಸಮಾರಂಭ ಮಾತಾನಾಡಿದ ಅವರು, ಮೈಸೂರಿನ ಇತಿಹಾಸದಲ್ಲಿ ಬಿಜೆಪಿಯವರು ಮೇಯರ್ ಆಗಿಲ್ಲ. ಈ ಬಾರಿ ಬಿಜೆಪಿ ಪಕ್ಷ ಮೇಯರ್ ಚುಕ್ಕಾಣಿ ಹಿಡಿಯುತ್ತದೆ ಅಂಥ, ಬಿಜೆಪಿ ಕಾರ್ಯಕರ್ತರು ಅತ್ಯಂತ ಖುಷಿಯಲ್ಲಿದ್ದರು. ಅಧಿಕಾರ ಸಿಗದಿದ್ದ ಪರಿಣಾಮ ಸಂಸದ ಪ್ರತಾಪ್ ಸಿಂಹ ನಿರಾಶೆಯಿಂದ ಜನತದಳದವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರಲ್ಲಾ ಎಂಬ ಹೇಳಿಕೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಯರ್ ಹುದ್ದೆಯನ್ನು ನಾವೇ ಪಡೆದುಕೊಳ್ಳಬೇಕೆಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೆ ,ಅಯೂಬ್ ಖಾನ್ ಕಚೇರಿಯಲ್ಲಿ ಜೆಡಿಎಸ್ ಪಕ್ಷದವರೊಂದಿಗೆ ಸಭೆ ನಡೆಸಲಾಯಿತು. ಈ ಬಾರಿ ನಮಗೆ ಮೇಯರ್ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದೆ. ಈ ಬಗ್ಗೆ ನಗರ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದೆ. ಫಲಿತಾಂಶದ ಮುನ್ನ ದಿನ, 11.30ಕ್ಕೆ ಸಿದ್ದರಾಮಯ್ಯ ಕಾಲ್ ಮಾಡಿದರು. ಯಾವುದೇ ಕಾರಣಕ್ಕೂ ಮೇಯರ್ ಸ್ಥಾನ ಬಿಡದಂತೆ ಹೇಳಿದ್ದರು. 12 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ಮಾಡಿ, ಜೆಡಿಎಸ್ ನವರು ಮೇಯರ್ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎಂದರು ಈ ವಿಷಯ ತಿಳಿದು ಬಹಳ ಖುಷಿಯಾಯಿತು ಎಂದು ವಿವರಿಸಿದರು.
ಇದನ್ನೂ ಓದಿ : ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ
ಜೆಡಿಎಸ್ ನವರಿಗೆ ಮೇಸೆಜ್ ತಲುಪಿಸಿ ಎಂದೇ. ಜೆಡಿಎಸ್ ನವರು ನಮಗೆ ಮೇಸೆಜ್ ಬಂದಿಲ್ಲ ಅಂದರು. ತಕ್ಷಣ ನಾನು ಡಿ.ಕೆ.ಶಿವಕುಮಾರ್ ಗೆ ಕರೆ ನಾಡಿ ತಿಳಿಸಿದೆ. ಡಿ.ಕೆ.ಶಿವಕುಮಾರ್ ಸಾ.ರಾ. ಮಹೇಶ್ ಗೆ ಕರೆ ಮಾಡಿದ್ದಾರೆ. ಆ ಸಂಧರ್ಭದಲ್ಲಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದೇ ಸಂಧರ್ಭದಲ್ಲಿ ತನ್ವೀರ್ ಸೇಠ್ ಮುಖಾಂತರ ಪಾಲಿಕೆ ಸದಸ್ಯರು ತೆಗೆದುಕೊಂಡ ನಿರ್ಧಾರದಿಂದ ಸ್ವಲ್ಪ ಗೊಂದಲ ಆಗಿದೆ ಎಂದು ಹೇಳಿದರು.