Advertisement

ಜಿಲ್ಲೆಗೆ ಜೆಡಿಎಸ್‌ ಶಾಸಕರ ಕೊಡುಗೆ ಶೂನ್ಯ

10:16 AM Jan 24, 2023 | Team Udayavani |

ಮಳವಳ್ಳಿ: ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್‌ ಶಾಸಕರ ಕೊಡುಗೆ ಶೂನ್ಯ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ. ಎಂ.ನರೇಂದ್ರಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಜ.27ರಂದು ಮಂಡ್ಯದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತೆ ಬಾರ ಬಾರದು ಎಂದು ಕೆಲವರು ಮಾಡಿದ ಕುತಂತ್ರವನ್ನು ಅರಿಯಲು ವಿಫಲರಾಗಿ ಸೋತವು. ಕ್ಷೇತ್ರ ದಲ್ಲಿ ನಮ್ಮ ಜೊತೆಯಲ್ಲಿದ್ದವರು ಬೆನ್ನಿಗೆ ಚೂರಿ ಹಾಕಿದರು. ಜೆಡಿಎಸ್‌ ನಾಯಕರು ಕಾಂಗ್ರೆಸ್‌ನಲ್ಲಿ ಬಂಡಾಯ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ಜನರು ಜೆಡಿಎಸ್‌ ಪಕ್ಷವನ್ನು ಧೂಳೀಪಟ ಮಾಡಲು ನಿಂತಿದ್ದು, ನಿಜವಾದ ಬಂಡಾಯ ಅವರ ಪಕ್ಷದಲ್ಲಿದೆ. ಶೀಘ್ರವಾಗಿ ಅವೆಲ್ಲವೂ ಹೊರ ಬರಲಿವೆ. ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಜನರ ಆಶೀರ್ವಾದವಿದೆ. ಅಧಿಕಾರಕ್ಕೆ ಬರುವುದು ಖಚಿತ ಎಂದರು.

ನನ್ನ ವಿರುದ್ಧ ಜನಾಭಿಪ್ರಾಯವಿಲ್ಲ: 2013ಕ್ಕಿಂತ 2018ರಲ್ಲಿ 15 ಸಾವಿರ ಹೆಚ್ಚುವರಿ ಮತ ಪಡೆದಿದ್ದೆ. ಎಲ್ಲೂ ಜನಾಭಿಪ್ರಾಯ ನನ್ನ ವಿರುದ್ಧವಾಗಿರಲಿಲ್ಲ. ಕ್ಷೇತ್ರದಲ್ಲಿನ ರಾಜಕೀಯ ಕುತಂತ್ರದ ಹೊಂದಾ ಣಿಕೆ ಯಿಂದ ನಾನು ಸೋತೆ. ಇದಲ್ಲದೇ ಹಳೆ ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಈ ರೀತಿ ಒಳ ಒಪ್ಪಂದದಿಂದ ಕಳೆದುಕೊಂಡವು. ಇದಕ್ಕೆ ಕಾರಣ ಯಾರು ಎನ್ನುವುದು ಗೊತ್ತಿದೆ. ನೆಪ ಮಾತ್ರಕ್ಕೆ ಬಿಜೆಪಿಯ ವಿರುದ್ಧ ವಾಗ್ಧಾಳಿ ನಡೆಸಿ ಒಳ ಒಳಗೆ ಒಪ್ಪಂದ ಮಾಡಿಕೊಳ್ಳುವ ಜೆಡಿಎಸ್‌ ಕುತಂತ್ರ ರಾಜಕಾರಣದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಜನರಲ್ಲಿ ಜಾಗೃತಿ: ಭ್ರಷ್ಟ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಪ್ರಜಾಧ್ವನಿ ಯಾತ್ರೆ ಗುಡುಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವ ದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗು ತ್ತಿದೆ. ಜ.27ರಂದು ಮಂಡ್ಯದಲ್ಲಿ ನಡೆಯುವ ಪ್ರಜಾ ಧ್ವನಿ ಯಾತ್ರೆಗೆ ತಾಲೂಕಿನಿಂದ ಕನಿಷ್ಠ 15 ರಿಂದ 20 ಸಾವಿರ ಕಾರ್ಯಕರ್ತರು ಭಾಗಿಯಾಗ ಬೇಕು ಎಂದು ತಿಳಿಸಿದರು.

ಕೆಲ ತಿಂಗಳ ಹಿಂದೆ ಮುತ್ತತ್ತಿಯಲ್ಲಿ ಕುತಂತ್ರಿ ಗಳು ಸಭೆ ನಡೆಸಿದವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಮನೆಗೆ ಹೋಗಿ ನನಗೆ ಟಿಕೆಟ್‌ ಕೊಡಬೇಡಿ ಎನ್ನುವವರು ಹಿಂದೆ ಯಾರು ಇದ್ದಾರೆ ಎನ್ನುವುದು ರಾಜ್ಯ ನಾಯಕರಿಗೆ ಗೊತ್ತಿತೆ. ಇಲ್ಲಿನ ಶಾಸಕರ ಜೊತೆ ಇರುವ ದಾಖಲೆಗಳು ನನ್ನ ಬಳಿ ಇದೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ಬಾರಿ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುವುದಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement

ಯಾತ್ರೆಗೆ ವ್ಯಾಪಕ ಬೆಂಬಲ:ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆಗೆ ರಾಜ್ಯದ ವ್ಯಾಪಕವಾಗಿ ಬೆಂಬಲ ದೊರೆ ಯುತ್ತಿದೆ. ಜ.27ರಂದು ಮಂಡ್ಯದಲ್ಲಿ ನಡೆಯುವ ಯಾತ್ರೆಗೆ ತಾಲೂಕಿನಿಂದ ಕನಿಷ್ಠ 20 ಸಾವಿರ ಮಂದಿ ಭಾಗಿಯಾಗಬೇಕು ಎಂದರು.

ಕ್ಷೇತ್ರದ ಉಸ್ತುವಾರಿ ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೆ.ಜೆ.ದೇವರಾಜು, ಎಸ್‌.ಪಿ.ಸುಂದರ್‌ ರಾಜ್‌, ಕಾರ್ಯಾಧ್ಯಕ್ಷ ಎಂ. ಬಿ.ಮಲ್ಲಯ್ಯ, ಖಜಾಂಚಿ ಮಹದೇವು, ತಾಲೂಕು ಯುವ ಘಟಕದ ಅಧ್ಯಕ್ಷ ಹುಸ್ಕೂರು ಎಚ್‌. ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಕೆ. ಎಸ್‌.ದ್ಯಾಪೇಗೌಡ, ಸದಸ್ಯರಾದ ಕುಳ್ಳಚನ್ನಂಕಯ್ಯ, ಬಸವರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಆರ್‌.ಎನ್‌.ವಿಶ್ವಾಸ್‌, ಶಕುಂ ತಲಾ ಮಲ್ಲಿಕ್‌, ತಾಪಂ ಮಾಜಿ ಅಧ್ಯಕ್ಷ ವಿ.ಪಿ. ನಾಗೇಶ್‌, ಮಾಜಿ ಉಪಾಧ್ಯಕ್ಷ ಸಿ.ಮಾಧು, ಮುಖಂಡರಾದ ಹೈಸ್ಕೂರು ವೆಂಕಟೇಗೌಡ, ನಾಗ ರಾಜು, ಶಾಂತರಾಜ್‌, ಶಿವರಾಜ್‌ ಹಾಜರಿದ್ದರು.

ರಸ್ತೆಗಳು ಗುಂಡಿ ಬಿದ್ದಿವೆ. ಕ್ಷೇತ್ರಕ್ಕೆ ಯಾವುದೇ ಯೋಜನೆ ತರಲು ಇಲ್ಲಿನ ಶಾಸಕರ ವಿಫಲರಾಗಿದ್ದಾರೆ. ನಾನು ತಂದಿರುವ ಡಾ.ಅಂಬೇಡ್ಕರ್‌ ಭವನಕ್ಕೆ ಕಲ್ಲು ಹಾಕಿಸಿಕೊಳ್ಳುತ್ತಾರೆ. ಡಿಸಿಸಿ ಬ್ಯಾಂಕ್‌ನಲ್ಲಿ 4 ಸ್ಥಾನಗಳನ್ನು ಗೆದ್ದು ಬಿಜೆಪಿಯವರಿಗೆ ಹಿಡಿಯಲು ಸಹಕಾರ ನೀಡಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹೊಸ ಯೋಜನೆಗಳನ್ನು ತಂದಿರುವ ಬಗ್ಗೆ ಜನರ ಮುಂದೆ ದಾಖಲೆ ತೆರೆದಿಡಲಿ. ●ಪಿ.ಎಂ.ನರೇಂದ್ರಸ್ವಾಮಿ, ಉಪಾಧ್ಯಕ್ಷ, ಕೆಪಿಸಿಸಿ

Advertisement

Udayavani is now on Telegram. Click here to join our channel and stay updated with the latest news.

Next