Advertisement

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟ; ಸಿದ್ದು-ಡಿಕೆಶಿ ಬಣಕ್ಕೆ ಸಮಾನ ಆದ್ಯತೆ

01:08 AM Apr 10, 2022 | Team Udayavani |

ಬೆಂಗಳೂರು: ಎರಡು ವರ್ಷಗಳ ತರುವಾಯ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಹೊರಬಿದ್ದಿದೆ. ಅಳೆದೂ ತೂಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಬಣಗಳಿಗೆ ಸಮಾನ ಅವಕಾಶ ಕಲ್ಪಿಸಿ ಸಮಾಧಾನ ಮಾಡುವ ಪ್ರಯತ್ನ ಮಾಡಲಾಗಿದೆ.

Advertisement

40 ಉಪಾಧ್ಯಕ್ಷರು ಮತ್ತು 109 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಪ್ರಾದೇಶಿಕವಾರು, ಸಮು ದಾಯವಾರು ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಲಾಗಿದ್ದು, 15 ಮಂದಿ ಜಿಲ್ಲಾಧ್ಯಕ್ಷರಿಗೆ ರಾಜ್ಯ ಪ್ರ. ಕಾರ್ಯದರ್ಶಿಗಳಾಗಿ ಭಡ್ತಿ ನೀಡಲಾಗಿದೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇರಿಸಿದ್ದ ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ್‌ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

ಇದನ್ನೂ ಓದಿ:ಕರಾವಳಿಯ ವಿವಿಧೆಡೆ ಉತ್ತಮ ಮಳೆ, ಹಲವೆಡೆ ಹಾನಿ

ನಾಯಕರ ಕುಟುಂಬಕ್ಕೆ ಮಣೆ
ಮಾರ್ಗರೆಟ್‌ ಆಳ್ವ, ರೆಹಮಾನ್‌ ಖಾನ್‌, ಕಾಗೋಡು ತಿಮ್ಮಪ್ಪ, ಮೋಟಮ್ಮ, ಶಾಮನೂರು ಶಿವಶಂಕರಪ್ಪ ಹೀಗೆ ಹಿರಿಯ ನಾಯಕರ ಮಕ್ಕಳಿಗೆ ಪಟ್ಟಿಯಲ್ಲಿ ಮಣೆ ಹಾಕಲಾಗಿದೆ. ತಳಮಟ್ಟದಲ್ಲಿ ದುಡಿದ ಮುಖಂಡರಿಗೆ ಅವಕಾಶ ಇಲ್ಲ ಎಂಬ ಅಸಮಾಧಾನ ಮೂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next