Advertisement

ಆನೇಕಲ್‌ ಕ್ಷೇತ್ರಕ್ಕೆ ಕೆ.ಪಿ.ರಾಜು ಅಭ್ಯರ್ಥಿ

01:48 PM Jan 25, 2018 | Team Udayavani |

ಆನೇಕಲ್‌: ಜೆಡಿಎಸ್‌ ವರಿಷ್ಠರ ಸೂಚನೆ ಮೇರೆಗೆ ಆನೇಕಲ್‌ ವಿಧಾನಸಭೆ ಚುನಾವಣೆಯಲ್ಲಿ ಕೆ.ಪಿ.ರಾಜು ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಆರ್‌. ಮನೋಹರ್‌ ಹೇಳಿದರು.

Advertisement

ತಾಲೂಕಿನ ಅತ್ತಿಬೆಲೆ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್‌ ಪಕ್ಷ ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭ ಹಾಗೂ ಪಟ್ಟಣದಲ್ಲಿ ನಡೆಯಲಿರುವ ಸಮಾವೇಶದ ಪೂರ್ವಭಾವಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಶೋಕಿಗಾಗಿ ರಾಜಕಾರಣ ಮಾಡುತ್ತಿಲ್ಲ: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೂ ಅವಕಾಶ ನೀಡಲಾಗಿದೆ. ಈ ಬಾರಿ ಕುಮಾರಸ್ವಾಮಿಗೂ ಅವಕಾಶ ನೀಡಬೇಕಿದೆ. ದೇವೇಗೌಡರು, ಕುಮಾರಸ್ವಾಮಿ ಶೋಕಿಗಾಗಿ ರಾಜಕಾರಣ ಮಾಡುತ್ತಿಲ್ಲ. ರಾಜ್ಯದ ಜನತೆ ಒಳತಿಗೆ ಶ್ರಮಿಸುತ್ತಿದ್ದಾರೆ ಎಂದರು.

ಆನೇಕಲ್‌ ಗೆಲುವಿನೊಂದಿಗೆ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲುವು ಪಡೆಯುವುದು ಪಕ್ಷದ ಗುರಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ ತಾನು ವಿಧಾನಸಭೆಗೆ ಸ್ಪರ್ಧಿಸಿದರೂ ಆನೇಕಲ್‌ ನಲ್ಲೂ ಹೆಚ್ಚು ಸಹಕಾರ ನೀಡಲಾಗುವುದು
ಎಂದು ಹೇಳಿದರು. 

ಜೆಡಿಎಸ್‌ ಗೆದ್ದರೆ ಸಾವಿರ ಕೋಟಿ ರೂ. ಅನುದಾನ: ಜೆಡಿಎಸ್‌ ರಾಜ್ಯ ಪ್ರಧಾನ ಕಾಯದರ್ಶಿ ಗೊಟ್ಟೆಗೆರೆ ಮಂಜಣ್ಣ
ಮಾತನಾಡಿ, ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷದದಿಂದ ಜನತೆ ಬೇಸತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಆನೇಕಲ್‌ನಲ್ಲಿ ಜೆಡಿಎಸ್‌ ಗೆದ್ದರೆ ಒಂದು ಸಾವಿರ ಕೋಟಿ ರೂ. ಅಭಿವೃದ್ಧಿಗೆ ಹಣ ತರಲಾಗುವುದು ಎಂದರು.

Advertisement

ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಬೆಸ್ತಮಾನಹಳ್ಳಿ ಯಲ್ಲಪ್ಪ ಹಾಗೂ ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ಜೆಡಿಎಸ್‌ಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದೇವೇಗೌಡ, ಜೆಡಿಎಸ್‌ ಮುಖಂಡರಾದ ರಾಮೇಗೌಡ, ಶ್ರೀನಾಥರೆಡ್ಡಿ, ಆರ್‌.
ದೇವರಾಜ್‌, ಸಿ.ತೋಪಯ್ಯ, ಆನಂದ್‌, ರಾಮಚಾರಿ, ನಾರಾಯಣಸ್ವಾಮಿ, ರವಿಕುಮಾರ್‌, ಜಿಮ್‌ ಸುರೇಶ್‌, ಶುಭಾನಂದ್‌, ಮೆಣಿಸಿಗನಹಳ್ಳಿ ರಘು, ಯಲ್ಲಪ್ಪ, ಪ್ರಭು, ಗೋಪಾಲ್‌ ಮೊದಲಾದ ಮುಖಂಡರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next