Advertisement
ಏಕೆಂದರೆ, ಅವರು ಬಂಧನ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಸಂಭವನೀಯ ಗಡೀಪಾರಿನಿಂದ ಪಾರಾಗಿದ್ದಾರೆ. ಗೃಹ ಕಚೇರಿ ಮುಂದೆ ನಿಯಮಿತವಾಗಿ ಹಾಜರಾಗಬೇಕಿಲ್ಲ. ಲಾಕ್‌ಡೌನ್‌ನ ಈ ಅವಧಿ ಅವರಿಗೆ ಒಂದು ಬಗೆಯ ನೆಮ್ಮದಿಯನ್ನು ತಂದಿದೆ. ನಾಗರಿಕ ಹಕ್ಕುಗಳನ್ನು ತೀವ್ರವಾಗಿ ನಿರ್ಬಂಧಿಸಿದಾಗ ಬದುಕುವುದು ಎಷ್ಟು ಕಷ್ಟವೆಂದು ಸಾಮಾನ್ಯ ಜನರಿಗೆ ಮನವರಿಕೆಯಾಗತೊಡಗಿದ ಸಂದರ್ಭದಲ್ಲಿ ಇದು ಸಂಭವಿಸಿದೆ.
Related Articles
Advertisement
ಅಕ್ರಮ ವಲಸಿಗರ ವಿರುದ್ಧ ಶೂನ್ಯ ಸಹನೆಯ ಇಂಗ್ಲೆಂಡ್‌ನ ನೀತಿಯನ್ನು ಈಗ ಮರುಪರಿಶೀಲಿಸಲಾದೀತೆಂದು ಅವರು ಹಾರೈಸುತ್ತಿದ್ದಾರೆ. ಕೋವಿಡ್-19ರಿಂದಾಗಿ ಸದ್ಯದ ಮಟ್ಟಿಗೆ ಅವರನ್ನು ಗಡೀಪಾರು ಮಾಡಲು ಸಾಧ್ಯವಿಲ್ಲ ಮತ್ತು ಬಂಧನ ಕೇಂದ್ರಗಳಲ್ಲಿ ಒತ್ತೂತ್ತಾಗಿ ಇರಿಸಲು ಸಾಧ್ಯವಿಲ್ಲ.
ಬಂಧನದಲ್ಲಿರಿಸುವುದಕ್ಕೆ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ವಲಸೆ ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದು ಸೂಕ್ತ ಆಯ್ಕೆಯೆನಿಸುತ್ತದೆ ಎಂದು ಗೃಹ ಕಚೇರಿಯ ವಕ್ತಾರರೋರ್ವರು ಹೇಳಿದ್ದಾರೆ.
ದಶಕಗಳಿಂದ ನಡೆಸಿದ ಹೋರಾಟಕ್ಕೆ ಯಶಸ್ಸು ಸಿಗದಿರುವಾಗ ಕೋವಿಡ್ ಪ್ರತ್ಯಕ್ಷವಾಗಿ ಅಲ್ಪಾವಧಿಯಲ್ಲಿ ಉಂಟಾಗಿರುವ ಬದಲಾವಣೆ ಆಶ್ರಯ ಕೋರುವವರ ಪಾಲಿಗೆ ಆಶಾದಾಯಕವಾಗಿ ಕಾಣಿಸಿದೆ. ಇಲ್ಲದಿದ್ದರೆ ಗೃಹ ಕಚೇರಿ ಮುಂದೆ ಹಾಜರಾಗುವುದನ್ನು ರದ್ದುಗೊಳಿಸಿರುವುದು, ನೂರಾರು ಮಂದಿಯ ಬಿಡುಗಡೆ ಮತ್ತು ವೀಸಾಗಳ ವಿಸ್ತರಣೆ, ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ಅಕ್ರಮ ವಲಸಿಗರ ಪರ ಹೋರಾಡುತ್ತಿರುವ ಕೆಲವರು ಹೇಳಿದ್ದಾರೆ.