ಕಾಗವಾಡ: ತಾಲೂಕಿನ ಉಗಾರ ಖುರ್ದ ಸಕ್ಕರೆ ಕಾರ್ಖಾನೆಯ ವಿಹಾರ ಸಭಾ ಭವನದಲ್ಲಿ 30 ಬೆಡ್‌ಗಳ ಕೋವಿಡ್ ಸೆಂಟರ್ ಪ್ರಾರಂಭಿಸಲಾಗಿದ್ದು, ಗುರುವಾರ ಚಿಕ್ಕೋಡಿ ಉಪವಿಭಾಗಾಧಿಕಾರಿ ಯುಕೇಶ ಕುಮಾರ ಭೇಟಿ ನೀಡಿ ಪರಿಶೀಲಿಸಿದರು.
ಚಿಕ್ಕೋಡಿ ಎಸಿ ಅವರೊಂದಿಗೆ ಸಕ್ಕರೆ ಕಾರ್ಖಾನೆ ಎಂ.ಡಿ ಚಂದನ ಶಿರಗಾಂವಕರ, ಆರೋಗ್ಯಾ ಧಿಕಾರಿ ಡಾ. ಬಸಗೌಡ ಕಾಗೆ, ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಸೆಂಟರ್ ವೀಕ್ಷಿಸಿ, ಇಲ್ಲಿಗೆ ಅವಶ್ಯಕತೆಯಿರುವ ಆಕ್ಸಿಜನ್, ನೀರು, ಊಟದ ವ್ಯವಸ್ಥೆ ಬಗ್ಗೆ ಸೂಚನೆ ನೀಡಿದರು. ಈಗಾಗಲೇ ಕಾಗವಾಡದಲ್ಲಿಯೂ ಕೋವಿಡ್ ಸೆಂಟರ್ ಪ್ರಾರಂಭಿಸಿದ್ದು ರೋಗಿಗಳ ಸಂಖ್ಯೆ ಹೆಚ್ಚಾದರೆ ಉಗಾರ ಸೆಂಟರ್‌ಗೆ ಸ್ಥಳಾಂತರಿಸುವುದಾಗಿ ತಿಳಿಸಿದರು.
15 ಆಕ್ಸಿಜನ್ ಸಹಿತ ಬೆಡ್: ತಾಲೂಕಾ ವೈದ್ಯಾಧಿಕಾರಿ ಡಾ| ಬಸಗೌಡ ಕಾಗೆ ಮಾತನಾಡಿ, ಕಾಗವಾಡ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೊಂದು ಚಿಂತೆಯ ವಿಷಯವಾಗಿದೆ. ಉಗಾರ ಸಕ್ಕರೆ ಕಾರ್ಖಾನೆಯ ಸಹಾಯದಿಂದ 30 ಬೆಡ್ ಗಳ ಕೋವಿಡ್ ಸೆಂಟರ್ ಪ್ರಾರಂಭಿಸಿದ್ದೇವೆ. ಇದರಲ್ಲಿ 15 ಆಕ್ಸಿಜನ್ ಸಹಿತ ಬೆಡ್‌ಗಳಿವೆ. ಎಲ್ಲ ರೀತಿಯ ಉಪಚಾರ ವ್ಯವಸ್ಥೆ ಇಲ್ಲಿಗೆ ನೀಡಲು ನಾವು ಸಿದ್ಧರಿದ್ದೇವೆ. ಎಲ್ಲ ಇಲಾಖೆ ಅ ಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಉಗಾರ ಖುರ್ದ, ಉಗಾರ ಬುದ್ರುಕ ಮತ್ತು ಶೇಡಬಾಳ ಗ್ರಾಮಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಈವರೆಗೆ ಉಗಾರ ಖುರ್ದ್‍ನಲ್ಲಿ ಮೂರು ಸಾವು: ಕಾಗವಾಡ ತಾಲ್ಲೂಕಿನಲ್ಲಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 140 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ 58 ಜನ ಉಗಾರ ಖುರ್ದ ಗ್ರಾಮದವರು. ಅವರಲ್ಲಿ 3 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈಗ 33 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ಉಗಾರ ಬುದ್ರುಕ 23, ಮೋಳೆ 15, ಕಾಗವಾಡ 13, ಐನಾಪುರ, ಕುಸನಾಳ, ಮಂಗಾವತಿ ತಲಾ 4, ಶೇಡಬಾಳ 7, ಶಿರಗುಪ್ಪಿ, ಮಂಗಸೂಳಿ ತಲಾ 3, ಕೌಲಗುಡ್ಡ 1 ಹೀಗೆ ಕೊರೋನಾ ಸೋಂಕಿತರಿದ್ದಾರೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
ಸಿಡಿಪಿಓ ಸಂಜೀವಕುಮಾರ ಸದಲಗೆ, ತಾಪಂ ಇಒ ವೀರಣಗೌಡ ಎಗಣಗೌಡರ, ಪಿಎಸ್‌ಐ ಹನುಮಂತ ಧರ್ಮಟ್ಟಿ, ಬಸವರಾಜ ಬೋರಗಲ್ಲ, ಉಗಾರ ವೈದ್ಯಾಧಿಕಾರಿ ಡಾ| ವೀಣಾ ಲೋಕುರ, ಸಕ್ಕರೆ ಕಾರ್ಖಾನೆ ಅಧಿ ಕಾರಿಗಳಾದ ಜಯಂತ ಸಾಟೆ, ಎ.ಎ.ಪೆಂಡ್ಸೆ, ಉಗಾರ ಪುರಸಭೆ ಮುಖ್ಯಾ ಧಿಕಾರಿ ಕಮಲವ್ವಾ ಭಾಗೋಜಿ, ಇತರರಿದ್ದರು.