Advertisement

ಕೋವಿಡ್- 19 ಕಾಂಡ: ಆರ್ಥಿಕತೆ ಮೇಲೆ ದುಷ್ಪರಿಣಾಮ ಖಚಿತ

09:28 AM Apr 06, 2020 | mahesh |

ಕೋವಿಡ್- 19 ಹಾವಳಿಗೆ ಸೋಂಕು ಪೀಡಿತರಾಗುತ್ತಿರುವ ಕಥೆ ನಿಧಾನವಾಗಿ ತೆರೆಗೆ ಸರಿಯುತ್ತಿದೆ. ಈಗ ಪ್ರತಿ ದೇಶಗಳೂ ಆರ್ಥಿಕತೆಯನ್ನು ಸರಿದಾರಿಗೆ ತರಲು ಯೋಚಿಸತೊಡಗಿವೆ.

Advertisement

ಮಣಿಪಾಲ: ಕೋವಿಡ್- 19 ಕಾಟದಿಂದ ಚೀನಾ ಈಗ ಸುಧಾರಿಸಿಕೊಳ್ಳುತ್ತಿದೆ. ಆದರೆ ಮೂರು ತಿಂಗಳ ಕೋವಿಡ್- 19ದಿಂದ ಆಗಿರುವ ನಷ್ಟ, ಸಾವು ನೋವು ಎಲ್ಲದರ ಬಗ್ಗೆಯೂ ಸಾಚಾ ಲೆಕ್ಕವನ್ನು ಇನ್ನು ಚೀನ ನೀಡುತ್ತಿಲ್ಲ ಎಂಬ ಸಂಶಯ ಕಾಡತೊಡಗಿದೆ. ಏಕೆಂದರೆ ಈಗ ಅಲ್ಲಿಯ ಬದುಕು ಹಳಿಗೆ ಬರುತ್ತಿದ್ದರೂ ಚೀನ ಆರ್ಥಿಕತೆಗೆ ಕೊಟ್ಟ ಹೊಡೆತ ಕಡಿಮೆಯೇನಲ್ಲ.
ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 50 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನದ ಹದಿನಾರು ನಗರಗಳು ಸಂಪೂರ್ಣ ಲಾಕ್‌ ಡೌನ ಅಡಿಯಲ್ಲಿದೆ. ಈಗಾಗಲೇ ಜಗತ್ತಿನ ಎಲ್ಲಾ ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸುತ್ತಿವೆ. ಅಮೆರಿಕ ಸೇರಿದಂತೆ ಇತರ ದೇಶಗಳು ತಮ್ಮ ಪ್ರಜೆಗಳಿಗೆ ಚೀನಕ್ಕೆ ಪ್ರಯಾಣಿಸದಂತೆ ಸೂಚಿಸಿವೆ.

ಚೀನದಲ್ಲಿ ಹೊಸ ವರ್ಷದ ರಜಾ ದಿನಗಳನ್ನು ನೀಡಲಾಗುತ್ತಿದೆ. ಅವುಗಳನ್ನು ಮುಗಿಸಿ ಜನರು ಕಚೇರಿಯತ್ತ ಬರಬೇಕಾದ ಸಮಯದಲ್ಲಿ 14 ಪ್ರಾಂತ್ಯಗಳು ಮತ್ತು ನಗರಗಳು ಸ್ತಬ್ದವಾದವು. ಇದರಿಂದ ಆರ್ಥಿಕ ವ್ಯವಹಾರಗಳು ನಿಂತವು. 2019ರಲ್ಲಿ ಚೀನದ ಅಧಿಕೃತ ಜಿಡಿಪಿ ಬೆಳವಣಿಗೆ 1990 ರ ವಿತ್ತೀಯ ಬೆಳವಣಿಗೆ ದರಕ್ಕಿಂತ ಕಡಿಮೆಯಾಗಿತ್ತು. ಜಾಗತಿಕ ಆರ್ಥಿಕತೆಯಲ್ಲೂ ಚೀನ ಪ್ರಮುಖ ಪಾತ್ರ ವಹಿಸಿದೆ. ಚೀನದ ಆರ್ಥಿಕತೆಯು ನಿಧಾನಗೊಂಡರೆ ಜಗತ್ತಿನ ಆರ್ಥಿಕತೆ ಮೇಲೂ ಪರಿಣಾಮ ಬೀರಬಹುದು ಎಂದು ಯು.ಎಸ್‌. ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೋಮ್‌ ಪೊವೆಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಜಾಗತಿಕ ಆರ್ಥಿಕತೆಯ ಪ್ರತಿ ವಲಯದ ಅವಿಭಾಜ್ಯ ಅಂಗ. ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಲ್ಲದೇ, ಇತರ ದೇಶಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಚೀನದ ಪ್ರಜೆಗಳಿಗೆ ಅಂತಾರಾಷ್ಟ್ರೀಯ ಪ್ರವಾಸವೆಂದರೆ ಅಚ್ಚು ಮೆಚ್ಚು. 2018 ರಲ್ಲಿ 277 ಬಿಲಿಯನ್‌ ಡಾಲರ್‌ಮೌಲ್ಯದ 150 ಮಿಲಿಯನ್‌ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ದೇಶದ 1.3 ಬಿಲಿಯನ್‌ ಜನಸಂಖ್ಯೆಯು ಹಲವು ವರ್ಗದ ಗ್ರಾಹಕ ಸರಕುಗಳಾದ ವಾಹನಗಳು, ಐಷಾರಾಮಿ ಸರಕು ಗಳಿಗೆ ವಿಶ್ವದ ದೊಡ್ಡ ಮಾರುಕಟ್ಟೆ.

ಒಂದೆರಡಲ್ಲ ಸಂಸ್ಥೆಗಳು
ವುಹಾನ್‌ನಲ್ಲಿ ವಾಹನಗಳನ್ನು ತಯಾರಿಸುವ ಜನರಲ್‌ ಮೋಟಾ ರ್ಸ್‌ ಮತ್ತು ಹೋಂಡಾ ಮತ್ತೆ ತೆರೆಯಲೇಬೇಕು. ಇದರಿಂದ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಮತ್ತೆ ಉದ್ಯೋಗ ಅವಕಾಶಗಳು ಚಿಗುರಿಕೊಳ್ಳುತ್ತವೆ. ಇನ್ನು ಚೀನದಲ್ಲಿನ ಅಮೆರಿಕದ ಆಪಲ್‌ ಸಂಸ್ಥೆಯೂ ನೌಕರರನ್ನು ಕಡಿತಗೊಳಸಿದೆ. ಐಕೆಇಎ ತನ್ನ ಎಲ್ಲಾ ಮುಖ್ಯ ಮಳಿಗೆಗಳನ್ನು ಮುಚ್ಚಿದೆ. ಟೊಯೋಟಾ ಮೋಟಾರ್‌ಕಾರ್ಪ್‌ ತನ್ನ ಚೀನಾ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಕೆಎಫ್‌ಸಿ ಮತ್ತು ಪಿಜ್ಜಾ ಹಟ್‌ ಸಾವಿರಾರು ಶಾಖೆಗಳನ್ನು ಮುಚ್ಚಿದೆ. ಸ್ಟಾರ್‌ಬಕ್ಸ್‌ ತನ್ನ 4,100 ಅಂಗಡಿಗಳ ಪೈಕಿ ಅರ್ಧದಷ್ಟು ಮುಚ್ಚಿದೆ ಮತ್ತು ಮೆಕ್ಡೊನಾಲ್ಡ್ ನ ವುಹಾನ್‌ ಇರುವ ಹುಬೈ ಪ್ರಾಂತ್ಯದ ಐದು ನಗರಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಿದೆ. ಡಿಸ್ನಿಯ್ನು ಶಾಂಘೈ ಮತ್ತು ಹಾಂಗ್‌ ಕಾಂಗ್‌ನಲ್ಲಿರುವ ತನ್ನ ಶಾಖೆಗಳಿಗೆ ಬೀಗ ಹಾಕಿದೆ. ಇವೆಲ್ಲವೂ ಜಗತ್ತಿನ ಇತರ ರಾಷ್ಟ್ರಗಳಲ್ಲಿದ್ದು, ಆರ್ಥಿಕತೆಗೆ ನೇರವಾಗಿ ಕೊಡುಗೆ ನೀಡುತ್ತಿವೆ.

Advertisement

ಸಾರ್ಷ್‌ ತಂದ ಅಪಾಯ
SARS ಸೋಂಕಿನ ಪರಿಣಾಮವನ್ನು ಜಗತ್ತಿನ ಬಹುತೇಕ ರಾಷ್ಟ್ರ ಗಳು ಎದುರಿಸಿವೆ. ಆರ್ಥಿಕ ಪರಿಣಾಮವನ್ನು ಹೆಚ್ಚಾಗಿ ಚೀನ ಅನುಭವಿಸಿದೆ. ಅಧ್ಯಯನದ ಪ್ರಕಾರ, SARS ಬಿಕ್ಕಟ್ಟು ಚೀನಾದ ಒಟ್ಟು ದೇಶೀಯ ಉತ್ಪನ್ನವನ್ನು 1.1% ಮತ್ತು ಸೇವಾ ವಲಯದ ಆರ್ಥಿಕತೆಯ ಆಧಾರಸ್ತಂಭವಾಗಿರುವ ಹಾಂಗ್‌ ಕಾಂಗ್‌ ಅನ್ನು 2.6% ರಷ್ಟು ಕಡಿತಗೊಳಿದೆಯಂತೆ.

ಚಟುವಟಿಕೆ ಸ್ತಬ್ಧ
ಗ್ರಾಹಕರಲ್ಲಿ ಬೇಡಿಕೆಯನ್ನು ಕುಂಠಿತಗೊಳಿಸಿವೆ. ಇದರಿಂದ ಹಣ ಓಡಾಡುತ್ತಿಲ್ಲ. ವಾಸೋದ್ಯಮ ನೆಲ ಕಚ್ಚಿದೆ. ಹಾಂಗ್‌ ಕಾಂಗ್‌, ತೈವಾನ್‌, ಸಿಂಗಾಪುರ್‌ಮತ್ತು ಫಿಲಿಫೈನ್ಸ್‌, ಹುಬೈ ಪ್ರಾಂತ್ಯಕ್ಕೆ ಭೇಟಿನೀಡಲು ಅವಕಾಶವೇ ಇಲ್ಲ. ರಷ್ಯಾ ಮತ್ತು ಮಂಗೋಲಿಯಾ ಚೀನದೊಂದಿಗಿನ ತಮ್ಮ ಗಡಿಗಳನ್ನು ಮುಚ್ಚಿವೆ. ಮುಂದಿನ 6 ತಿಂಗಳು ವಿದೇಶಿ ಗರ ಆಗಮನವನ್ನು ನಿಷೇಧಿ ಸಿದರೆ 83.1 ಬಿಲಿಯನ್‌ ಡಾಲರ್‌ನಷ್ಟ ಉಂಟಾದೀತು ಎಂಬುದು ಮಾಧ್ಯಮಗಳ ವಿಶ್ಲೇಷಣೆ.

ಹೇಗಿದೆ ಚೀನದ ಆರ್ಥಿಕತೆ?
2003 ರಿಂದ ಚೀನಾ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು 2019 ರಲ್ಲಿ ಸುಮಾರು 5 14.55 ಟ್ರಿಲಿಯನ್‌ ಮೌಲ್ಯದ್ದಾಗಿತ್ತು. ಯು.ಎಸ್‌., ಜಪಾನ್‌ ಮತ್ತು ಭಾರತ ಚೀನಾದಿಂದ ಅತೀ ಹೆಚ್ಚಿನ ಸರಕುಗಳನ್ನು ಆಮದು ಮಾಡಿಕೊಳ್ಳುತ್ತವೆ. ಈ ರಾಷ್ಟ್ರಗಳಿಗೆ ಚೀನ ನಂಬರ್‌1 ರಫ್ತುದಾರ. ಇನ್ನು ಯೂರೋಪ್‌ ಯೂನಿಯನ್‌ ಮತ್ತು ಬ್ರೆಜಿಲ್‌ ಇತರ ದೇಶಗಳಿಗಿಂತ ಚೀನಾಕ್ಕೆ ಹೆಚ್ಚು ಮಾರಾಟದ ಪಾಲನ್ನು ಹೊಂದಿದೆ. ತಜ್ಞರ ಪ್ರಕಾರ ಕೊರೊನಾ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ SARS ಗಿಂತ ಕಠಿಣವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next