Advertisement
ಕೊಟ್ಟೂರಿನಲ್ಲಿ ತರಳುಬಾಳು ಹುಣ್ಣಿಮೆ ಮಹೋತ್ಸವಕ್ಕೆ ಶ್ರೀಗಳು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸಮುದಾಯದ ನಾಗರಕಟ್ಟೆ ರಾಜಣ್ಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳು ಸೇರಿದಂತೆ ಹಗರಿಬೊಮ್ಮನಹಳ್ಳಿಯಿಂದ ವಿವಿಧ ಸಮುದಾಯದ ಪ್ರಮುಖರು ಮತ್ತು ಶಾಸಕ ಭೀಮಾನಾಯ್ಕ ಮತ್ತು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹಾಗೂ ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ತಿಪ್ಪೇಸ್ವಾಮಿ ವೆಂಕಟೇಶ, ಸಾಹಿತಿ ಕುಂ.ವೀರಭದ್ರಪ್ಪ ಒಳಗೊಂಡಂತೆ ಅನೇಕ ಇತರೆ ಮುಖಂಡರು ಸಿರಿಗೆರೆ ತೆರಳಿ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.
Related Articles
Advertisement
ಹಿರಿಯ ವಕೀಲ ಹೋ.ಮ. ಪಂಡಿತಾರಾಧ್ಯ ಮಾತನಾಡಿ, ಹಿಂದಿನ ಕಾಲದಲ್ಲಿ ರಾಜರು, ಪಾಳೇಗಾರರು ಜನರಿಗಾಗಿ ಕೆರೆ, ಕಟ್ಟೆಗಳನ್ನು ಕಟ್ಟಿಸಿ ಹೋಗಿದ್ದಾರೆ. ಅವುಗಳಿಗೆ ನೀರು ತುಂಬಿಸುವ ಕಾರ್ಯವನ್ನು ಡಾ. ಶಿವಮೂರ್ತಿ ಶಿವಾಚಾರ್ಯರರು ಕೈಗೊಳ್ಳುವ ಮೂಲಕ ರೈತರ ಪಾಲಿಗೆ ಶ್ರೀಗಳು ಶಾಶ್ವತವಾಗಿ ಜಲಕಂಠೇಶ್ವರರಾಗಲಿ ಎಂದರು.
ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ತಿಪ್ಪೇಸ್ವಾಮಿ ವೆಂಕಟೇಶ ಮಾತನಾಡಿ, 1994ರಲ್ಲಿ ಜಗಳೂರು ನಳಂದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿರುವಾಗ ಕಾಲೇಜಿನಲ್ಲಿ ನಡೆದ ತರಳುಬಾಳು ಮಹೋತ್ಸವ ಸ್ಮರಿಸಿದ ಅವರು, ಅಂತಹ ವೈಭವವಾದ ತರಳುಬಾಳು ಹುಣ್ಣಿಮೆ ಈ ಬಾರಿ ಕೊಟ್ಟೂರಿನಲ್ಲಿ ನಡೆಯುವ ಮೂಲಕ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂದರೆ, ಈ ಭಾಗದ ರೈತರ ಬದುಕು ಹಸನಾಗಲಿದೆ ಎಂದರು.
ಪಂಚಮಸಾಲಿ ಮುಖಂಡ ಕೆ.ಎಸ್. ಈಶ್ವರಗೌಡ ಮುಂತಾದವರು ಮಾತನಾಡಿದರು. ರಾಜ್ಯ ಬೀಜ ನಿಗಮದ ನಿರ್ದೇಶಕ ನಾಗರಕಟ್ಟಿ ರಾಜೇಂದ್ರ ಪ್ರಸಾದ್, ವರ್ತಕ ದೇವರಮನಿ ಶಿವಚರಣ, ವೀರೇಶ ಬಿ.ಎಸ್., ಡಾ.ಬಿ.ಸಿ. ಮೂಗಪ್ಪ, ಪ.ಪಂ ಮಾಜಿ ಅಧ್ಯಕ್ಷ ಕಾಮಶೆಟ್ಟಿ ಕೊಟ್ರೇಶ, ವರ್ತಕರಾದ ಚಾಪಿ ಚಂದ್ರಪ್ಪ, ಕರಡಿ ಕೊಟ್ರಯ್ಯ, ಕೆ.ಕೊಟ್ರೇಶ, ಪ.ಪಂ ಸದಸ್ಯ ಬೋರ್‌ವೆಲ್ ತಿಪ್ಪೇಸ್ವಾಮಿ, ತಾ.ಪಂ ಹರಾಳು ಗುರುಮೂರ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಿ. ಮಾರುತಿ, ಬೋರ್‌ವೆಲ್ ಮಂಜಣ್ಣ, ಶೇಷಣ್ಣ ಕುಮಾರ್, ನಾರಪ್ಪ ಸೇರಿದಂತೆ ಎಲ್ಲಾ ಸಮುದಾಯದ ಪ್ರಮುಖರು ಹಾಜರಿದ್ದರು.