ಜಾಲತಾಣ ಹಾಗೂ ಖಾಸಗಿ ವಾಹಿನಿಗಳಲ್ಲಿ ಗುರುವಾರ ವೈರಲ್ ಆಗಿದೆ. ಸ್ವಾಮೀಜಿಯ ಅಕ್ರಮ ಚಟುವಟಿಕೆ ಕಂಡು ಮಠದ ಭಕ್ತರು ಸ್ವಾಮಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
20 ವರ್ಷಗಳ ಹಿಂದೆ ಕೊಟ್ಟೂರೇಶ್ವರ ಸ್ವಾಮಿಗಳನ್ನು ಕಲ್ಮಠ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸ್ಥಳೀಯ ವೀರಶೈವ ಸಮಾಜದ ಮುಖಂಡರನ್ನು ಸ್ವಾಮೀಜಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಠ ಹಾಗು ವಿದ್ಯಾಸಂಸ್ಥೆ ವ್ಯವಹಾರ ನಡೆಸುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಮಠದಲ್ಲಿ ಮಹಿಳೆಯರನ್ನು ಕೆಲಸಗಳಿಗೆ ನೇಮಕ ಮಾಡಿಕೊಂಡು ಅನೈತಿಕ ಕಾರ್ಯ ಮಾಡುತ್ತಿದ್ದಆರೋಪಗಳಿವೆ. ಎರಡು ದಿನಗಳ ಹಿಂದೆ ಧಾರವಾಡದ ಖಾಸಗಿ ಲಾಡ್ಜ್ವೊಂದರಲ್ಲಿ ಸ್ವಾಮೀಜಿ ಮಹಿಳೆಯರ ಜೊತೆ ಅಶ್ಲೀಲವಾಗಿರುವ ವಿಡಿಯೋ ಸಾಮಾಜಿಕ ಜಾಲ ತಾಣ ಹಾಗೂ ಖಾಸಗಿ ಸುದ್ದಿವಾಹಿನಿಗಳಲ್ಲಿ ಗುರುವಾರ ಪ್ರಸಾರವಾಗಿದೆ. ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ವಾಮೀಜಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ.