ಕೊಟ್ಟಿಗೆಹಾರ : ಕೂಲಿ ಕಾರ್ಮಿಕರನ್ನೇ ಕೇಂದ್ರಿಕೃತವಾಗಿ ಇಟ್ಟುಕೊಂಡು ಅವರಿಗೆ ವರ್ಷದಲ್ಲಿ ಇಷ್ಟು ದಿನ ಕೂಲಿ ಸಿಗಲಿ, ಜೀವನ ನಡೆಸೋದಕ್ಕೆ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯನ್ನ ಜಾರಿಗೆ ತಂದಿದೆ. ಆದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಕಲವ್ಯ ಶಾಲೆಯ ಮೈದಾನ ಸಮತಟ್ಟು ಮಾಡಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಡೆಯುತ್ತಿದ್ದು ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೇಂದ್ರ ಸರ್ಕಾರದ ಯೋಜನೆಗೆ ಹಾಲು-ತುಪ್ಪಾ ಬಿಟ್ಟಿದ್ದಾರೆ ಎಂದು ಸ್ಥಳಿಯರೇ ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಯಂತ್ರದಲ್ಲಿ ಕೆಲಸ ಮಾಡುವಂತಿದ್ದರೂ ಕೂಲಿ ಕಾರ್ಮಿಕರ ಬದುಕಿನ ಹಿತದೃಷ್ಟಿಯಿಂದ ಯಂತ್ರಗಳಲ್ಲಿ ಕೆಲಸ ಮಾಡುವಂತಿಲ್ಲ. ವಾರ್ಷಿಕ 365 ದಿನದಲ್ಲಿ ಕೂಲಿ ಕಾರ್ಮಿಕರಿಗೆ 252 ದಿನ ಕೂಲಿ ಕೊಡಲೇಬೇಕೆಂದು ಉದ್ಯೋಗ ಖಾತ್ರೆ ಯೋಜನೆಯನ್ನ ಜಾರಿಗೆ ತಂದಿದೆ. ಆದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಯಂತ್ರಗಳಿಂದ ಉದ್ಯೋಗ ಖಾತ್ರಿ ಕೆಲಸವನ್ನು ಮಾಡುತ್ತಿದ್ದಾರೆ ಕೂಲಿ ಕಾರ್ಮಿಕರಿಗೆ ನೀಡಿ, ಅವರ ಕೈನಿಂದಲೇ ಮಾಡಿಸಬೇಕಾದ ಕೆಲಸವನ್ನ ಯಂತ್ರಗಳ ಮೂಲಕ ಮಾಡಿಸುತ್ತಿದ್ದಾರೆ. ಭಾನುವಾರ ರಜಾ ದಿನದಲ್ಲಿ ಶಾಲೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೆಲಸ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಅಲ್ಲಿ ಯಂತ್ರಗಳಲ್ಲಿ ಕೆಲಸ ಮಾಡಿಸಿದ್ದೇವೆಂದು ಬಿಲ್ ಹಾಕಲು ಆಗಲ್ಲ. ಹಾಗೇ ಹಾಕೋಕೆ ಬರೋದಿಲ್ಲ. ಯಂತ್ರಗಳಲ್ಲಿ ಒಂದೇ ದಿನಕ್ಕೆ ಆದ ಕೆಲಸವನ್ನ ಕಾರ್ಮಿಕರ ಕೈನಲ್ಲಿ ಒಂದು ತಿಂಗಳು ಮಾಡಿಸಿದ್ದೇವೆ ಎಂದು ಬಿಲ್ ಹಾಕುತ್ತಾರೆ ಎಂದು ಸ್ಥಳಿಯರೇ ಆರೋಪಿಸಿದ್ದಾರೆ.
ಇದನ್ನೂ ಓದಿ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ನಿಧನ
ಅಧ್ಯಕ್ಷರೇ ಖುದ್ದು ಉದ್ಯೋಗ ಖಾತ್ರಿ ಕೆಲಸವನ್ನು ಯಂತ್ರಗಳ ಮೂಲಕ ಮಾಡಿಸುತ್ತಿರುವುದು ವಿಪರ್ಯಾಸವೇ ಸರಿ. ಹೀಗೆ ಬೇಲಿಯೇ ಎದ್ದು ಹೊಲ ಮೇಯ್ದರೆ ಸರ್ಕಾರದ ಕಾನೂನಿನ ಕಥೆ ಏನು ಅನ್ನೋದೇ ಯಕ್ಷ ಪ್ರಶ್ನೆ. ಚೆಕ್‍ಗಳಿಗೆ ಸಹಿ ಹಾಕುವ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಇದೆ. ಆದರೆ, ಅಧ್ಯಕ್ಷರು ಹೀಗೆ ಹಗಲುದರೋಡೆ ಮಾಡಿದರೇ ಕಾನೂನಿನ ಕಥೆ ಗೋವಿಂದ ಅನ್ನೋದು ಗುಟ್ಟಾಗೇನು ಉಳಿಯಲ್ಲ. ಗ್ರಾಮ ಪಂಚಾಯಿತಿಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸ್ಥಳಿಯರೇ ಆರೋಪಿಸಿ ಅಧ್ಯಕ್ಷರು ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಈ ರೀತಿಯ ಕೆಲಸಗಳು ಇದೇ ಮೊದಲಲ್ಲ. ಈ ಹಿಂದೆ ಕೂಡ ಈ ರೀತಿ ಕಾರ್ಮಿಕರ ಹೆಸರಲ್ಲಿ ಯಂತ್ರಗಳು ಕೆಲಸ ಮಾಡಿದ ರಾಮ-ಕೃಷ್ಣನ ಲೆಕ್ಕ ಇದೆಯಂತೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಅವರನ್ನ ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ಸ್ಥಾನವನ್ನು ವಜಾ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.