Advertisement

ಕೊಟ್ಟಿಗೆಹಾರ: ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಅಧ್ಯಯನ ಚಾರಣ

10:25 PM Nov 13, 2022 | sudhir |

ಕೊಟ್ಟಿಗೆಹಾರ: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ನಿಸರ್ಗ ರಮಣೀಯ ತಾಣ ಬಲ್ಲಾಳರಾಯನ ದುರ್ಗಕ್ಕೆ ಪರಿಸರ ಅಧ್ಯಯನ ಚಾರಣ ಕಾರ್ಯಕ್ರಮ ನಡೆಯಿತು.

Advertisement

ಮೈಸೂರು, ಕೊಡಗು, ಚಿಕ್ಕಮಗಳೂರು, ಬಂಟ್ವಾಳ, ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಯಿಂದ ಚಾರಣಿಗರು ಚಾರಣದಲ್ಲಿ ಭಾಗವಹಿಸಿದ್ದರು. ರಾಣಿಝರಿಯಿಂದ ಪ್ರಾರಂಭವಾದ ಚಾರಣ ಅರಣ್ಯದ ನಡುವೆ ಸಾಗಿ ಬಲ್ಲಾಳರಾಯನ ತಲುಪಿತು. ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿಯಾಗಿದ್ದ ಚಾರಣದಲ್ಲಿ ಚಾರಣಿಗರು ಅರಣ್ಯದ ನಡುವೆ ಸಾಗುತ್ತಾ ಅಪರೂಪದ ಸಸ್ಯ ಸಂಕುಲ, ಕೀಟ, ಚಿಟ್ಟೆ ಮುಂತಾದವುಗಳನ್ನು ವೀಕ್ಷಿಸುತ್ತಾ ಹೆಜ್ಜೆ ಹಾಕಿದರು. ಬಲ್ಲಾಳರಾಯನದುರ್ಗ ಐತಿಹಾಸಿಕ ಸ್ಥಳಗಳು ಹಾಗೂ ನಿಸರ್ಗ ರಮಣೀಯ ಪ್ರದೇಶಗಳಲ್ಲಿ ಚಾರಣ ಸಾಗಿತು.

ಈ ಸಂದರ್ಭದಲ್ಲಿ ತೇಜಸ್ವಿ ಒಡನಾಡಿಗಳಾದ ಬಾಪು ದಿನೇಶ್, ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದನ್ ಕುಪ್ಪಳ್ಳಿ, ನಂದೀಶ್ ಬಂಕೇನಹಳ್ಳಿ, ಪೂರ್ಣೆಶ್ ಮತ್ತಾವರ, ಪ್ರತಿಷ್ಠಾನದ ಸಿಬ್ಬಂದಿ ಸತೀಶ್, ಸಂಗೀತಾ ಹಾಗೂ ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಚಾರಣಿಗರು ಹಾಜರಿದ್ದರು.

ಇದನ್ನೂ ಓದಿ: ಭಾರತದ ಶೇ.99 ರಷ್ಟು ಮುಸ್ಲಿಮರು ಹಿಂದೂಸ್ಥಾನಿಗಳು : ಇಂದ್ರೇಶ್ ಕುಮಾರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next