Advertisement

ಕೊಟ್ಟಿಗೆಹಾರ: ರಾಜ್ಯ ಹೆದ್ದಾರಿ ರಸ್ತೆ ಸಂಚಾರ ಅಸ್ತವ್ಯಸ್ತ

09:46 AM Sep 09, 2022 | Team Udayavani |

ಕೊಟ್ಟಿಗೆಹಾರ: ಮಲೆನಾಡಲ್ಲಿ ‌ಮಳೆ ಅವಾಂತರಕ್ಕೆ ಧರೆ ಕುಸಿದು, ಹಿರೇಬೈಲ್-ಕೊಟ್ಟಿಗೆಹಾರ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

Advertisement

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಿರೇಬೈಲ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಧರೆ ಕುಸಿತಗೊಂಡಿದ್ದು, ರಸ್ತೆಯಲ್ಲಿದ್ದ ಮಣ್ಣುನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ.

ಧರೆ ಕುಸಿತದಿಂದ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೂರು ವರ್ಷದ ಹಿಂದೆ ಈ ಸ್ಥಳದ ಪಕ್ಕದಲ್ಲಿ ಕುಸಿತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next