Advertisement

ದಿನಗೂಲಿ ಕೆಲಸಕ್ಕಿಳಿದ ಖಾಸಗಿ ಬಸ್‌ ಚಾಲಕರು

07:16 PM Jul 09, 2020 | Naveen |

ಕೊಟ್ಟಿಗೆಹಾರ: ಲಾಕ್‌ಡೌನ್‌ನಿಂದಾಗಿ ಕಳೆದ ಕೆಲ ತಿಂಗಳಿಂದ ಖಾಸಗಿ ಬಸ್‌ ಸಂಚಾರ ಬಂದ್‌ ಆಗಿರುವ ಹಿನ್ನಲೆಯಲ್ಲಿ ಖಾಸಗಿ ಬಸ್‌ ಚಾಲಕರು, ನಿರ್ವಾಹಕ, ಏಜೆಂಟ್‌ ಹಾಗೂ ಸಿಬ್ಬಂದಿ ದಿನಗೂಲಿ ಕೆಲಸಕ್ಕೆ ಇಳಿದಿದ್ದಾರೆ.

Advertisement

ಕೊಟ್ಟಿಗೆಹಾರವು ಹಲವು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಪ್ರದೇಶವಾಗಿದ್ದು ದಿನನಿತ್ಯ 15 ಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಕೊಟ್ಟಿಗೆಹಾರವನ್ನು ಕೇಂದ್ರವಾಗಿಸಿಕೊಂಡು ಹೊರನಾಡು, ಶೃಂಗೇರಿ, ಕಳಸ, ಬಾಳೆಹೊನ್ನೂರು, ಮಂಗಳೂರಿಗೆ ಸಂಚರಿಸುತ್ತಿದ್ದವು. ಕೆಲ ತಿಂಗಳಿಂದ ಬಸ್‌ ಸಂಚಾರ ಇಲ್ಲದೇ ಇರುವುದರಿಂದ ದಿನಗೂಲಿ ಕೆಲಸಕ್ಕೆ ಹೋಗುವಂತಾಗಿದೆ.

ಕೊಟ್ಟಿಗೆಹಾರದ ರಾಮನಗರದ ಚಂದ್ರ ಎಂಬುವವರು ಕಳೆದ ಹಲವಾರು ವರ್ಷಗಳಿಂದ ಖಾಸಗಿ ಬಸ್‌ ಕಂಪನಿಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊಟ್ಟಿಗೆಹಾರ ಹೊರನಾಡು ಶಿವಮೊಗ್ಗ ಮಾರ್ಗದ ಬಸ್‌ನಲ್ಲಿ ಚಾಲಕರಾಗಿದ್ದ ಚಂದ್ರ ಅವರು ಕಳೆದ ಕೆಲ ತಿಂಗಳಿಂದ ಲಾಕ್‌ ಡೌನ್‌ನಿಂದಾಗಿ ಮನೆಯಲ್ಲಿಯೇ ಇದ್ದರು. ಬಸ್‌ ಸಂಚಾರ ಮರು ಆರಂಭವಾಗುವ ನಿರೀಕ್ಷೆಯಲ್ಲಿದ್ದರೂ ಕೂಡ ತಿಂಗಳು ಕಳೆದರೂ ಬಸ್‌ ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ಚಂದ್ರ ಅವರ ಜೀವನ ನಿರ್ವಹಣೆ ಕಷ್ಟವಾಗತೊಡಗಿದ್ದು ಅನಿವಾರ್ಯವಾಗಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚಾಲಕ ಚಂದ್ರ, ಸಂಚಾರ ಸ್ಥಗಿತಗೊಂಡು ಖಾಸಗಿ ಬಸ್ಸನ್ನು ಕೆಲ ತಿಂಗಳಿಂದ ಕೊಟ್ಟಿಗೆಹಾರದಲ್ಲಿಯೇ ನಿಲ್ಲಿಸಲಾಗಿದೆ. ಅನಿವಾರ್ಯವಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ. ಬಸ್‌ ಸಂಚಾರ ಆರಂಭವಾದರೆ ಮತ್ತೆ ಚಾಲಕನಾಗಿ ಕರ್ತವ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next