Advertisement

Kottigehara: ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮವಿತ್ತ ಗರ್ಭಿಣಿ

06:42 PM Jan 07, 2024 | Team Udayavani |

ಕೊಟ್ಟಿಗೆಹಾರ : ತುಂಬು ಗರ್ಭಿಣಿಯೋರ್ವಳು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ನಡೆದಿದೆ. ಸುಲ್ತಾನ್ ಪರ್ವೀನ್ ಆಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ. ಪರ್ವೀನ್ ಸುಲ್ತಾನ್ ಅಸ್ಸಾಂ ಮೂಲದವರು. ಕೂಲಿಗಾಗಿ ಮೂಡಿಗೆರೆ ತಾಲೂಕಿನ ಬಾಳೂರು ಎಸ್ಟೇಟ್ ಗೆ ಆಗಮಿಸಿದ್ದರು. ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಪರ್ವೀನ್ ತುಂಬು ಗರ್ಭೀಣಿಯಾಗಿದ್ದು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು.

Advertisement

ಕೂಡಲೇ ಆಂಬುಲೆನ್ಸ್ ನಲ್ಲಿ ಆಕೆಯನ್ನ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪರ್ವೀನ್ ಗೆ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ಆಂಬುಲೆನ್ಸ್ ಚಾಲಕ ಆರೀಫ್ ಹಾಗೂ ಮಹಿಳೆಯ ಸಂಬಂಧಿ ಜೊತೆ ಸೇರಿ ಆಂಬುಲೆನ್ಸ್ ಚಾಲಕ ಆರೀಫ್ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಡೆಲವರಿ ಬಳಿಕ ತಾಯಿ-ಮಗು ಆರೋಗ್ಯವಾಗಿದ್ದು ಹೆರಿಗೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಕಳೆದ 10 ದಿನದಲ್ಲಿ ಇದು ಆಂಬುಲೆನ್ಸ್ ನಲ್ಲಿ ಹೆರಿಗೆಯಾದ ಮೂರನೇ ಪ್ರಕರಣ.

ಮೂರರಲ್ಲಿ ಎರಡು ಪ್ರಕರಣದಲ್ಲಿ ಆಂಬುಲೆನ್ಸ್ ಚಾಲಕ ಹಾಗೂ ಗರ್ಭಿಣಿಯ ಜೊತೆಗಿದ್ದವರೇ ಹೆರಿಗೆ ಮಾಡಿಸಿದ್ದಾರೆ. ಆದರೆ, ಸ್ಥಳಿಯರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರುತ್ತೆ. ಹೆರಿಗೆ ದಿನಾಂಕದ ಮೊದಲು ಅಂಗನವಾಡಿ ಕಾರ್ಯಕರ್ತರ ಮೂಲಕ ಅವರಿಗೆ ಎಚ್ಚರಿಕೆ ಕೊಡಿಸಬಹುದು. ಆದರೆ, ಮಹಿಳೆಯರು ಹೆರಿಗೆ ನೋವು ಬರುವವರೆಗೆ ಮನೆಯಲ್ಲೇ ಇದ್ದರೆ ನಾಳೆ ಏನಾದ್ರು ಹೆಚ್ಚು-ಕಡಿಮೆಯಾದರೆ ಜವಾಬ್ದಾರಿ ಯಾರು. ಆರೋಗ್ಯ ಅಧಿಕಾರಿಗಳು ಗರ್ಭಿಣಿಯರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next