Advertisement

ಕೊಟ್ಟಿಗೆಹಾರ: ಹಗಲಿನಲ್ಲಿ ಕಾಡುಕೋಣಗಳ ದರ್ಶನ; ಜೀವಭಯದಲ್ಲಿ ಸಾರ್ವಜನಿಕರು

09:07 AM Sep 20, 2022 | Team Udayavani |

ಕೊಟ್ಟಿಗೆಹಾರ: ಮಲೆನಾಡಿನಾದ್ಯಂತ ಕಾಡು ಪ್ರಾಣಿಗಳ ಉಪಟಳ ಮಿತಿಮೀರಿದ್ದು, ಹಾಡುಹಗಲೇ ಕಾಡು ಪ್ರಾಣಿಗಳು ಎಲ್ಲೆಂದರಲ್ಲಿ ವಾಹನಗಳಿಗೆ ಅಡ್ಡ ಬರುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.

Advertisement

ಇಂದು ಬೆಳಿಗ್ಗೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಕಾಡುಕೋಣಗಳ ಹಿಂಡು ಹೆದ್ದಾರಿಗೆ ಅಡ್ಡ ಬಂದಿದ್ದು, ಇದನ್ನು ಆಟೋ ಚಾಲಕರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.

ಹೆದ್ದಾರಿಯೂ ಹೊರನಾಡಿಗೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಸಾವಿರಾರು ವಾಹನಗಳು ದಿನಂಪ್ರತಿ ಸಂಚರಿಸುತ್ತವೆ. ಇತ್ತೀಚೆಗೆ ಕಾಡುಕೋಣ ಒಂದು ಆಟೋ ರಿಕ್ಷಾವನ್ನು ಪಲ್ಟಿ ಮಾಡಿದ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು. ಇಂದು ಮತ್ತೇ ಕಾಡುಕೋಣಗಳ ಗುಂಪು ಆಟೋ ರಿಕ್ಷಾಕ್ಕೆ ಅಡ್ಡ ಬಂದಿರುವುದರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next