Advertisement

ಧೂಳೆಬ್ಬಿಸಿದ “ಕೋಟಿಗೊಬ್ಬ 3” ಟ್ರೈಲರ್  

02:00 AM Oct 08, 2021 | Team Udayavani |

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

Advertisement

‘ಕೋಟಿಗೊಬ್ಬ 3’   ಟ್ರೇಲರ್​ನಲ್ಲಿ ಆ್ಯಕ್ಷನ್​, ಸ್ಟಂಟ್ಸ್​ ಹಾಗೂ ಅದ್ದೂರಿತನ ಹೈಲೈಟ್​ ಆಗಿದೆ. ಸಿನಿಮಾದ ಬಹುತೇಕ ಕಥೆ ವಿದೇಶದಲ್ಲಿ ನಡೆಯಲಿದೆ. ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಸುದೀಪ್​ ಎರಡು ಶೇಡ್​ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಸಿನಿಮಾದ ಹೈಲೈಟ್​ ಕೂಡ ಆಗಿತ್ತು. ‘ಕೋಟಿಗೊಬ್ಬ 3’ ಸಿನಿಮಾದಲ್ಲೂ ಇದು ಮುಂದುವರಿದಿರುವುದು ಟ್ರೈಲರ್ ನಲ್ಲಿ ತಿಳಿದು ಬಂದಿದೆ.

ಇನ್ನು ಕೋಟಿಗೊಬ್ಬ 3’ ಸಿನಿಮಾದಲ್ಲಿ ಆಶಿಕಾ ರಂಗನಾಥ್​ ವಿಶೇಷ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಅದರ ಒಂದು ತುಣುಕನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಮಡೋನಾ ಸಬಾಸ್ಟಿಯನ್​ ಸಖತ್​ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಸುದೀಪ್ ಅಭಿನಯದ  ‘ಕೋಟಿಗೊಬ್ಬ 3’ ಚಿತ್ರವನ್ನು ಸೂರಪ್ಪಬಾಬು  ನಿರ್ಮಾಣ ಮಾಡಿದ್ದಾರೆ.  ಶ್ರದ್ಧಾ ದಾಸ್​, ರವಿಶಂಕರ್​, ಅಭಿರಾಮಿ ಮುಂತಾದ ಕಲಾವಿದರು ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕಾರ್ತಿಕ್​ ಈ ಚಿತ್ರದ ನಿರ್ದೇಶಕರು. ಇದೆ ಅಕ್ಟೋಬರ್ 14 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಮತ್ತೊಂದು ಗಮನಾರ್ಹ ಅಂಶ ಏನೆಂದರೆ ಅದೇ ದಿನದಂದು ಕನ್ನಡದ ಮತ್ತೊಂದು ಸಿನಿಮಾ ಸಲಗ ಸಹ ರಿಲೀಸ್ ಆಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next