Advertisement

ಕೋಟಿಲಿಂಗ ಆಸ್ತಿ ಕಬಳಿಕೆ ಅರ್ಜಿಗೆ ತಡೆ

09:26 AM Mar 04, 2019 | Team Udayavani |

ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಕೆ.ವಿ. ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಡುವೆ ಭುಗಿಲೆದ್ದ ವಿವಾದದಿಂದ ಬೇಸತ್ತಿರುವ ಜಿಲ್ಲಾಡಳಿತ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕೇ? ಇಲ್ಲವೇ? ಎಂಬ ಗೊಂದಲದಲ್ಲಿದೆ.  ಈ ನಡುವೆ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಮಾತ್ರ ಗೌಪ್ಯವಾಗಿ ದೇಗುಲದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಳ್ಳಲು ತೆರೆಮೆರೆಯಲ್ಲಿ ಕಸರತ್ತು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಬದಲಾವಣೆಗೆ ಕಸರತ್ತು:ಕಳೆದ ಡಿ.14ರಂದು ಕಮ್ಮಸಂದ್ರದ ಶ್ರೀಕೋಟಿ ಲಿಂಗೇಶ್ವರ ದೇಗುಲದ ಧರ್ಮಾಧಿಕಾರಿ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ಲಿಂಗೈಕ್ಯರಾಗಿ ದ್ದರು. ದೇಗುಲದ ಸಮಸ್ತ ಆಸ್ತಿಯನ್ನು 2002ರಲ್ಲಿ ರಾಜ್ಯಪಾಲರಿಗೆಹಾಗೂ 2004ರಲ್ಲಿ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಉತ್ತರಾಧಿಕಾರಿಯಗಿ ಕೆಲಸ ಮಾಡಲು ವಿಲ್‌ ಬರೆದಿದ್ದರೂ ಇದನ್ನು ಲೆಕ್ಕಿಸದೇ ಶ್ರೀಗಳ ಪುತ್ರ ಶಿವಪ್ರಸಾದ್‌ ತನ್ನ ಹೆಸರಿಗೆ ಆಸ್ತಿ ಖಾತೆ ದಲಾವಣೆ
ಮಾಡಿಕೊಳ್ಳಲು ವಿವಿಧ ಕಸರತ್ತು ನಡೆಸಿದ್ದಾರೆ.

ಅನುಮಾನ: ಸಂಸದ ಕೆ.ಎಚ್‌.ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ಬಾರಿ ಸಂಧಾನ ಸಭೆಯಲ್ಲಿ ಡಾ.ಶಿವಪ್ರಸಾದ್‌ 30 ವರ್ಷಗಳಿಂದ ತನ್ನ ತಂದೆ ಸ್ವಾಮೀಜಿ ಗಳ ಬಳಿ ಬಂದಿಲ್ಲ. ಪ್ರಸ್ತುತ ತನಗೆ ಯಾವು ದೇ ಆಸ್ತಿ-ಅಂತಸ್ತು, ಅಧಿಕಾರ ಬೇಕಿಲ್ಲ. ಕೇವಲ ಶ್ರೀಗಳ ನಂತರ ದೇಗುಲದ ಸಮಗ್ರ ಅಭಿವೃದ್ಧಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಡುವುದಾಗಿ ಹೇಳಿದ್ದರು. ಆದರೆ, ಪ್ರತಿಯೊಂದು ಸಂಧಾನ ಸಭೆಯಲ್ಲಿ ನಿರ್ಣಯದಂತೆ ನಡೆದುಕೊಳ್ಳದ ಶ್ರೀಗಳ ಪುತ್ರ ಇದ್ದಕ್ಕಿದ್ದಂತೆಯೇ ಶ್ರೀಗಳ ಹೆಸರಿನಲ್ಲಿದ್ದ ಆಸ್ತಿಯನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಳ್ಳಲು ಮುಂದಾಗಿರುವುದರಿಂದ ಸಾರ್ವಜನಿಕವಾಗಿ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.

ಕಾಣದ ಕೈಗಳು:ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದ ಆಸ್ತಿ ಯನ್ನು ಕಾರ್ಯದರ್ಶಿ ಕೆ.ವಿ.ಕುಮಾರಿ ಉತ್ತರಾಧಿಕಾರಿ ಯಾಗಿ ನಡೆಸಲು ವಿಲ್‌ಬರೆದಿರುವುದು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಗೊತಿ ¤ದ್ದರೂ ಕೆಜಿಎಫ್ಕಂ ದಾಯ ಇಲಾಖೆ ಕೆಲವು ಅಧಿಕಾರಿ ಸಿಬ್ಬಂದಿ ಕುಮ್ಮಕ್ಕಿನಿಂದ ಡಾ.ಶಿವಪ್ರಸಾದ್‌ರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿವಾದದಲ್ಲಿರುವ ಆಸ್ತಿಗಳನ್ನು ಖಾತೆ ಬದಲಾವಣೆ ಮಾಡಲು ದೊಡ್ಡಜಾಲವೇ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಎಚ್ಚರಿಕೆ:ಮಹಾಶಿವರಾತ್ರಿ ಜಾತ್ರೆ ನಡೆಯುತ್ತಿರುವುದರಿಂದ ಕೆ. ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ನಡುವೆ ವಿವಾದ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ತೊಂದರೆಯಾಗುವ ಮುನ್ಸೂಚ ನೆಯಿಂದ ಪೊಲೀಸ್‌ ಇಲಾಖೆ ಈಗಾಗಲೇ ಸೆಕ್ಷನ್‌ 107 ಪ್ರಕರಣ ದಾಖಲಿಸಿದೆ. ಈ ಮೂಲಕ ಗಲಭೆ ನಡೆಸಿದರೆ ಜಿಲ್ಲೆಯಿಂದ ನಾಲ್ವರನ್ನೂ ಬಹಿಷ್ಕಾರಹಾಕುವುದಾಗಿಯೂ ಎಚ್ಚರಿಕೆ ನೀಡಿದೆ.

Advertisement

ಶ್ರೀಗಳು ಲಿಂಗೈಕ್ಯರಾದ ನಂತರ ವಿಲ್‌ನಲ್ಲಿ ಬರೆದಿರುವಂತೆ ದೇಗುಲದ ಎಲ್ಲಾ ಆಸ್ತಿಗಳನ್ನು ಶ್ರೀಕೋಟಿಲಿಂಗೇಶ್ವರ ದೇಗುಲದ ಹೆಸರಿಗೆ ಖಾತೆ ಬದಲಾವಣೆ ಮಾಡಬೇಕಾಗಿರುವುದರಿಂದ ಮತ್ಯಾರೂ ಹೆಸರಿಗೂ ಬದಲಾವಣೆ ಮಾಡಬಾರದೆಂದು ಒಂದು ತಿಂಗಳ ಹಿಂದೆಯೇ ಕಾರ್ಯದರ್ಶಿ ಕೆ.ವಿ.ಕುಮಾರಿ ದೂರು ನೀಡಿದ್ದರೂ ಕಂದಾಯ ಇಲಾಖೆ ಬದಲಾವಣೆಗೆ ಕೈಹಾಕಿದ್ದಾರೆಂದು ಹೇಳಲಾಗಿದೆ. ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಯಾರಿಗೂ ಗೊತ್ತಿಲ್ಲದೇ ಮಧ್ಯರಾತ್ರಿ ದೇಗುಲದ ಹುಂಡಿ ಹೊಡೆದುಹಣ ತೆಗೆದುಕೊಂಡಿದ್ದಾರೆ. ದೇಗುಲದ ಅತಿಥಿ ಗೃಹದಲ್ಲಿ ಕುಟುಂಬ ಸಮೇತವಾಗಿ ಬಂದು ಪ್ರತಿನಿತ್ಯ ಅಂಗಡಿಗಳಿಂದ ಬರುವ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ವಿವಾದಕ್ಕೆಲ್ಲಾ ಕೆಲವು ರಾಜಕೀಯ ಎದುರಾಳಿಗಳ ಕೈಚಳಕವೇ ಕಾರಣ ಎನ್ನಲಾಗಿದ್ದು, ಇದಕ್ಕೆಲ್ಲಾ ಪರಿಹಾರವಾಗಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸುವುದೇ ಜಿಲ್ಲಾಡಳಿತಕ್ಕೆ ಮುಂದಿನ ಅಸ್ತ್ರವಾಗ ಲಿದೆಯೇ ಎಂಬುದನ್ನು ಕಾದುನೋಡಬೇಕಿದೆ

ಖಾತೆ ಬದಲಾವಣೆ ತಡೆದು ವಿಚಾರಣೆ ನಡೆಸುವೆವು
ಬೇತಮಂಗಲ ಹೋಬಳಿ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದ ಆಸ್ತಿ ಸಾಂಭವಶಿವಮೂರ್ತಿ ಶ್ರೀಗಳ ಹೆಸರಿನಲ್ಲಿರುವುದರಿಂದ ಶ್ರೀಗಳ ಪುತ್ರ ಡಾ.ಕೆ.ಶಿವಪ್ರಸಾದ್‌ ಅವರು ತನ್ನ ಹೆಸರಿಗೆ ಫ‌ವತಿವಾರಸು ಖಾತೆ ಮಾಡುವಂತೆ ಭೂಮಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ 30 ದಿನ ನೋಟಿಸ್‌ ಅವಧಿಯಲ್ಲಿರಲಿದೆ. ಇದರ ಮಧ್ಯೆ ದೇಗುಲದ ಉತ್ತರಾಧಿಕಾರಿ ಕೆ.ವಿ.ಕುಮಾರಿ ತನ್ನ ಹೆಸರಿಗೆ ವಿಲ್‌ ಬರೆದಿದ್ದಾರೆಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಇಲಾಖೆ ಈ ಅರ್ಜಿಯನ್ನೂ ಸ್ವೀಕರಿಸಿದ್ದು ವಿವಾದಿತ ಪ್ರಕರಣ ಆಗಿರುವುದರಿಂದ ಕೇಸು ನಡೆಸಲಾಗುವುದು. ಸದ್ಯಕ್ಕೆ ಖಾತೆ ಬದಲಾವಣೆಯನ್ನು ತಡೆದು ವಿಚಾರಣೆ ನಡೆಸಲಾಗುವುದು ಎಂದು ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next