ಕುಂದಾಪುರ: ಕೋಟೇಶ್ವರ – ಹಾಲಾಡಿ ಮಾರ್ಗದ ಗುಡ್ಡೆಯಂಗಡಿ ಬಳಿ ಶನಿವಾರ ಬೆಳಗ್ಗೆ 9ರ ಸುಮಾರಿಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿದ ಕಾರಣ 1 ಗಂಟೆ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
Advertisement
ಕುಂದಾಪುರದಿಂದ ಹಾಲಾಡಿ, ಹೆಬ್ರಿ, ಆಗುಂಬೆ, ಅಮಾಸೆಬೈಲು, ತೀರ್ಥಹಳ್ಳಿ ಕಡೆ ಬಸ್‌ಗಳಿಗೆ, ಕಚೇರಿ, ಶಾಲಾ-ಕಾಲೇಜುಗಳಿಗೆ ತೆರಳುವವರಿಗೆ ಅಡ್ಡಿಯಾಯಿತು. ಕೆಲವರು ಪರ್ಯಾಯ ಮಾರ್ಗ ಬಳಸಿದರು. ಅಲ್ಲಿ ರಸ್ತೆ ವಿಸ್ತರಣೆ ವೇಳೆ ಮರದ ಬುಡದ ವರೆಗೆ ಅಗೆಯಲಾಗಿತ್ತು. ನಿರಂತರ ಮಳೆಯ ಕಾರಣ ಮಣ್ಣು ಮೃದುವಾಗಿ ಮರ ಉರುಳಿದೆ. ಅರಣ್ಯ ಇಲಾಖೆ ಸಿಬಂದಿ ಹಾಗೂ ಸ್ಥಳೀಯರು ಮರವನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.