ಕುಂದಾಪುರ: ಕೋಟೇಶ್ವರದಲ್ಲಿದ್ದ ತಮ್ಮ ಪೂರ್ವಿಕರ ಕೃಷಿ ಭೂಮಿಯನ್ನು ಸೀತಾರಾಮ ತವಳ ಹಾಗೂ ಪುತ್ರ ಸುಧೀಂದ್ರ ಅವರು ನನ್ನ ನಕಲಿ ಸಹಿ ಹಾಕಿ, ಕ್ರಯ ಪತ್ರ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದು, ಕೆ. ಉಪೇಂದ್ರ ಕುಮಾರ್ ಹಾಗೂ ಅನುರಾಧಾ ಎಂ. ಪುರಾಣಿಕ್ ಮತ್ತೂಂದು ಮೋಸದ ಕ್ರಯ ಪತ್ರ ಮಾಡಿ, ತನ್ನ ಸಹಿ ಬಳಸಿ, ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿ ಮೂಲತಃ ಕೋಟೇಶ್ವರದ, ದಾವಣಗೆರೆಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement