Advertisement

Ganesh Chaturthi: ವಿಘ್ನೇಶ್ವರನ ಅದ್ಧೂರಿ ಉತ್ಸವಕ್ಕೆ ಪ್ರಸಿದ್ಧಿಯಾದ ಕೋಟೆ ನಾಡು

12:48 PM Sep 08, 2024 | Team Udayavani |

ಮಹಾ ಗಣಪತಿಯ ಉತ್ಸವವೆಂದರೆ ತಕ್ಷಣ ನೆನಪಾಗುವುದು ಕರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಕೋಟೆ ನಾಡು ಚಿತ್ರದುರ್ಗ.

Advertisement

ಮಹಾಗಣಪತಿ ಉತ್ಸವ ಹತ್ತಿರವಾಗುತ್ತಿದೆ ಎಲ್ಲೆಡೆ ಪೂರ್ವ ತಯಾರಿ ನಡೆಸಲು ತುಂಬಾ ಉತ್ಸುಕವಾಗಿ ಕಾಮಗಾರಿಗಳು ನಡೆಯುತ್ತಿವೆ, ಚಿತ್ರದುರ್ಗ ಹಿಂದೂ ಮಹಾಗಣಪತಿ ಉತ್ಸವಕ್ಕೆ ಖ್ಯಾತಿ ಪಡೆದಿದೆ.  ಇಲ್ಲಿ ವಿಶೇಷವಾಗಿ ಉತ್ಸವವನ್ನು ಆಚರಿಸುವುದು ಮಾತ್ರವಲ್ಲದೆ ಸಾಂಸ್ಕತಿಕ, ಕ್ರೀಡೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನ, ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ.

ಯಕ್ಷಗಾನ ಕೋಲಾಟ ಬಯಲಾಟ ಕುರುಕ್ಷೇತ್ರದಂತಹ ಪೌರಾಣಿಕ ನಾಟಕ ಮನರಂಜನೆ ಕಾರ್ಯಕ್ರಮಗಳಂತಹ ನೃತ್ಯ  ಸಂಗೀತ, ಆರ್ಕೆಸ್ಟ್ರಾ, ಮುಂತಾದ ಅನೇಕ ಸರಣಿ ಕಾರ್ಯಕ್ರಮಗಳು ವಿಘ್ನೇಶ್ವರನ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನ ಉತ್ಸವದ ವರೆಗೂ ಸಹ ನಡೆಯುತ್ತವೆ.

ಬರಿ ಜಿಲ್ಲಾ ಕೇಂದ್ರವಾದ ಚಿತ್ರದುರ್ಗದಲ್ಲಿ ಮಾತ್ರವಲ್ಲದೆ ಆರು ತಾಲೂಕುಗಳಲ್ಲಿಯೂ ಹಮ್ಮಿಕೊಳ್ಳಲಾಗುತ್ತದೆ. ಚಿತ್ರದುರ್ಗದಲ್ಲಿ ಬೃಹತ್‌ ಜನಸಾಗರದ ಜನಸ್ತೋಮದ ಸಮ್ಮುಖದಲ್ಲಿ ತುಂಬಾ ವಿಜೃಂಭಣೆಯಾಗಿ ಡಿಜೆ ಸೌಂಡ್‌ ಗಳಿಂದಲೂ ಬಣ್ಣ ಬಣ್ಣಗಳ ಯಕ್ಷಗಾನ ಕೋಲಾಟದವರೂ  ಉತ್ಸಾಹ ಭರಿತರಾಗಿ ಕುಣಿದು ಕುಪ್ಪಳಿಸುವ ಭಕ್ತಾದಿಗಳ ಮಧ್ಯೆಯು  ಜರಗುತ್ತದೆ.

-ಕೆ.ಎನ್‌. ರಂಗಸ್ವಾಮಿ

Advertisement

ಚಿತ್ರದುರ್ಗ

Advertisement

Udayavani is now on Telegram. Click here to join our channel and stay updated with the latest news.