ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿ ಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ದಕ್ಕೆಗೆ ಕೋಟ ಪೊಲೀಸರು ಮಾ.20ರಂದು ಬೆಳಗಿನ ಜಾವ 5.30ಕ್ಕೆ ಕೋಟ ಠಾಣಾಧಿಕಾರಿ ಎಂ.ರಫೀಕ್ ಅವರು ಕಂದಾಯ ಇಲಾಖೆ ಅಧಿಕಾರಿಗಳ ಜತೆಯಲ್ಲಿ ದಾಳಿ ನಡೆಸಿದ್ದರು. ಅಲ್ಲಿಂದ ಮರಳು ಹಾಗೂ ಟೆಂಪೋವನ್ನು ವಶಪಡಿಸಿಕೊಂಡು,ಸಂತೋಷ ಮತ್ತು ಟೆಂಪೋ ಚಾಲಕ ಮಂಜುವನ್ನು ಬಂಧಿಸಿದ್ದರು.ಬಳಿಕ ಮಂಜು ಠಾಣೆಯಿಂದ ತಪ್ಪಿಸಿಕೊಂಡಿದ್ದ.
Advertisement
ಪೇದೆಯನ್ನು ದೂಡಿ ಪರಾರಿಮಂಜುವನ್ನು ಕಸ್ಟಡಿಯಲ್ಲಿ ಇರಿಸಿ ಪೊಲೀಸರು ಸಂತೋಷನೊಂದಿಗೆ ದೋಣಿ ವಶಪಡಿಸಲು ತೆರಳಿದ್ದರು. ಈ ಸಂದರ್ಭ ಕರ್ತವ್ಯದಲ್ಲಿದ್ದ ಪೇದೆ ರಾಮ ದೇವಾಡಿಗರನ್ನು ತಳ್ಳಿ ಮಂಜು ಪರಾರಿಯಾಗಿದ್ದ.ಈತ ಮೂಲತಃ ಶಿಕಾರಿಪುರ ತಾಲೂಕು ಕೆಂಗಟ್ಟೆ ಗ್ರಾಮದವನಾಗಿದ್ದು,ಹಂಗಾರಕಟ್ಟೆ ಕೆಮಿಕಲ್ ಫ್ಯಾಕ್ಟರಿ ಬಳಿ ವಾಸವಿದ್ದ.