Advertisement
ಮಳೆಗಾಲದಲ್ಲಿ ವಿಪರೀತ ಹಾನಿಮಳೆಗಾಲಕ್ಕೂ ಮೊದಲು ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಈ ಕಲೆ ಇರುತ್ತದೆ. ಮಳೆ ಬಿದ್ದಾಕ್ಷಣ ಗಾತ್ರದಲ್ಲಿ ಹಿಗ್ಗಿಕೊಂಡು ನೆರೆ ನೀರಿನೊಂದಿಗೆ ಸೇರಿ ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ ಹಾಗೂ ಜಲಸಸ್ಯ, ಜಲಚರಗಳಿಗೂ ಕಂಟಕವಾಗುತ್ತದೆ.
ಮಳೆಗಾಲಕ್ಕೆ ಮೊದಲು ನೀರಿನ ಮೂಲದಲ್ಲೇ ಇದನ್ನು ನಾಶಪಡಿಸಿ ನೀರಿನಿಂದ-ನೀರಿಗೆ ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ, ಕಳೆನಾಶಕಗಳಾದ ಡೆ„ಕ್ವಾಟ್, ಪ್ಯಾರಾಕ್ವಾಟ್, ಗ್ಲೆ$ç´ೋಸೆಟ್ ಮುಂತಾದ ರಾಸಾಯನಿಕಗಳನ್ನು ಬಳಕೆ ಮತ್ತು ಸಿರಟೊಬ್ಯಾಗಸ್ ಸಾಲ್ವೆನಿಯಾ ಎಂಬ ದುಂಬಿಯಿಂದ ಇದನ್ನು ನಾಶಪಡಿಸ ಬಹುದು ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ನೀರಿನಿಂದ ಮೇಲೆತ್ತಿ ಗುಂಡಿ ತೆಗೆದು ಮುಚ್ಚುವುದು, ನೀರು ಮಲೀನವಾಗದಂತೆ ತಡೆಯುವುದು, ಹೊಳೆ, ತೋಡುಗಳ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದರ ಮೂಲಕವೂ ಹತೋಟಿಗೆ ತರಬಹುದು. ಆದರೆ ಇದನ್ನು ರೈತರಿಗೆ ಮಾಡಲು ಸಾಧ್ಯವಿಲ್ಲ. ಸ್ಥಳೀಯಾಡಳಿತ, ಕೃಷಿ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿ ಹತೋಟಿಗೆ ಕ್ರಮಕೈಗೊಳ್ಳಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.
Related Articles
ಜೈವಿಕ, ವೈಜ್ಞಾನಿಕ ಹಾಗೂ ಕಾಂಪೋಸ್ಟ್ ವಿಧಾನಗಳ ಮೂಲಕ ಅಂತರಗಂಗೆಯನ್ನು ನಾಶಪಡಿಸಬಹುದು. ಈ ಕುರಿತು ಸಂಶೋಧನೆಗಳು ಚಾಲ್ತಿಯಲ್ಲಿದೆ. ರೈತರಿಗೆ ಅಗತ್ಯ ಮಾಹಿತಿ ಹಾಗೂ ಇನ್ನಿತರ ಸಹಕಾರವನ್ನು ನೀಡಲು ಇಲಾಖೆ ಸಿದ್ಧವಿದೆ.
-ಡಾ| ಎಸ್.ವಿ. ಪಾಟೀಲ್, ಸಹ ಸಂಶೋಧನಾ ನಿರ್ದೇಶಕರು, ಕೃಷಿ ಹಾಗೂ ತೋಟಗಾರಿಕೆ ಕೇಂದ್ರ ಬ್ರಹ್ಮಾವರ
Advertisement
ಕೃಷಿ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿಕೋಟ ಹೋಬಳಿಯ ಮಣೂರು, ಗಿಳಿಯಾರು ಜತೆಗೆ ತೆಕ್ಕಟ್ಟೆ, ಮಲ್ಯಾಡಿ, ಕೆದೂರು, ಉಳೂ¤ರು, ಹಲೂ¤ರು, ಗುಳ್ಳಾಡಿ ಗ್ರಾಮಗಳ ಸಾವಿರಾರು ಎಕ್ರೆ ಕೃಷಿಭೂಮಿಗೆ ಅಂತರಗಂಗೆಯ ಸಮಸ್ಯೆ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ರೈತರು ಇದರ ಹತೋಟಿಗೆ ಕಷ್ಟಪಡುತ್ತಾರೆ. ಕೃಷಿ ಇಲಾಖೆಯವರು ಇದರ ಹತೋಟಿಗೆ ಹಲವು ವಿಧಾನಗಳನ್ನು ಸೂಚಿಸುತ್ತಾರೆ. ಆದರೆ ರೈತರಿಗೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಾರಿ ಕೃಷಿ ಇಲಾಖೆ, ಸ್ಥಳೀಯಾಡಳಿತದೊಂದಿಗೆ ಸೇರಿ ಮಳೆಗಾಲಕ್ಕೆ ಮೊದಲು ಸಾಂಪ್ರದಾಯಿಕ, ವೈಜ್ಞಾನಿಕ ವಿಧಾನದ ಮೂಲಕ ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸಬೇಕಿದೆ. ರೈತ ಧ್ವನಿ ಸಂಘಟನೆಯ ವತಿಯಿಂದ ಈ ಕುರಿತು ರೈತರ ನಿಯೋಗ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ.
– ಜಯರಾಮ್ ಶೆಟ್ಟಿ ಮಣೂರು, ಅಧ್ಯಕ್ಷರು ರೈತಧ್ವನಿ ಸಂಘಟನೆ ಕೋಟ – ರಾಜೇಶ ಗಾಣಿಗ ಅಚಾÉಡಿ