Advertisement

ಕೋಟ ಹಿರೇಮಹಾಲಿಂಗೇಶ್ವರ ಮನ್ಮಹಾರಥೋತ್ಸವ ಸಂಪನ್ನ

11:59 PM Feb 05, 2023 | Team Udayavani |

ಕೋಟ: ಇಲ್ಲಿನ ಶ್ರೀಮಹ ತೋಭಾರ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮನ್ಮಹಾ ರಥೋತ್ಸವ ರವಿವಾರ ಜರಗಿತು. ಬೆಳಗ್ಗೆ ರಥಾರೋಹಣ, ಸಂಜೆ ಮೆರ ವಣಿಗೆಯೊಂದಿಗೆ ರಥಾವ ರೋಹಣ ಜರಗಿತು. ಹಿರೇಮಹಾ ಲಿಂಗೇಶ್ವರ ಮಿತ್ರವೃಂದದ ನೇತೃತ್ವದಲ್ಲಿ ಅನ್ನಸಂತ ರ್ಪಣೆ ನೆರ ವೇರಿತು. ಸಾವಿ ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

Advertisement

ವಿಶೇಷ ಆಕರ್ಷಣೆ
ರಥೋತ್ಸವದ ಸಂದರ್ಭ ಕೀಲು ಕುದುರೆ, ಡೊಳ್ಳು ಕುಣಿತ, ಚಂಡೆ ವಾದನ, ಸುಡುಮದ್ದು ಪ್ರದರ್ಶನ ನಡೆಯಿತು. ರಾತ್ರಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ, ಪೆರ್ಡೂರು ಮೇಳದವರಿಂದ ಯಕ್ಷಗಾನ ನೆರವೇರಿತು. ದೇಗುಲದ ವ್ಯವಸ್ಥಾಪನ ಸಮಿತಿ, ಮಿತ್ರವೃಂದದ ಪ್ರಮುಖರು, ಅರ್ಚಕರು, ತಂತ್ರಿಗಳು, ಗಣ್ಯರು ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next