Advertisement

ಕೋಟ ಹಂದೆ ದೇವಸ್ಥಾನ :ಪುಷ್ಕರಣಿ ಅಭಿವೃದ್ಧಿ

09:44 PM Mar 31, 2019 | sudhir |

ಕೋಟ: ಹಂದಟ್ಟಿನ ಹಂದೆ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಪ್ರಾಚೀನ ಪುಷ್ಕರಣಿ ಅಭಿವೃದ್ಧಿಗೊಳಿಸುವ ಸಲುವಾಗಿ ರವಿವಾರ ಭಕ್ತರಿಂದ ಕರಸೇವೆ ಜರಗಿತು.

Advertisement

ಒಂದು ತಿಂಗಳ ಕಾಲ ನಿರಂತರ ಶ್ರಮದಾನ ಹಾಗೂ ಕಾಮಗಾರಿ ಕೈಗೊಳ್ಳುವ ಮೂಲಕ ಪುನರ್‌ ನಿರ್ಮಾಣ ಮಾಡುವ ಉದ್ದೇಶವನ್ನು ಪುಷ್ಕರಣಿ ನವೀಕರಣ ಸಮಿತಿ ಹೊಂದಿದೆ.ಧರ್ಮಸ್ಥಳ ಗ್ರಾÅಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪುನರ್‌ ನಿರ್ಮಾಣ ಕಾರ್ಯ ನೆರವೇರಲಿದೆ. ದೇವತಾ ಪ್ರಾರ್ಥನೆಯೊಂದಿಗೆ ಕರಸೇವೆಗೆ ಚಾಲನೆ ನೀಡಲಾಯಿತು.

ಹಂದೆ ದೇವಳದ ಆನುವಂಶಿಕ ಮೊಕ್ತೇಸರ ಎಚ್‌.ಅಮರ್‌ ಹಂದೆ, ಯಶೋದ ಹಂದೆ, ಪುಷ್ಕರಣಿ ನವೀಕರಣ ಕಾರ್ಯದ ಸಂಚಾಲಕ ಬನ್ನಾಡಿ ಪದ್ಮನಾಭ ಭಟ್‌, ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್‌ ಸಿ.ಕುಂದರ್‌, ಸ್ಥಳೀಯರಾದ ಜಾನಕಿ ಹಂದೆ, ಸುದರ್ಶನ ಉರಾಳ, ಜೀರ್ಣೋದ್ಧಾರ ಸಮಿತಿಯ ರಾಜಾರಾಮ ಹಂದೆ, ದಿನೇಶ್ಚಂದ್ರ ಹಂದೆ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ, ಕಟ್ಟೆ ಬಳಗದ ಸದಸ್ಯರು, ಪಾಂಚಜನ್ಯದ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

ಪುರಾತನ ಪುಷ್ಕರಣಿ
ಹೊಯ್ಸಳರ ಕಾಲದಲ್ಲಿ ಈ ಪುಷ್ಕರಣಿ ನಿರ್ಮಿಸಲಾಗಿದೆ ಮತ್ತು ಸುಮಾರು 600ವರ್ಷ ಇತಿಹಾಸವಿದೆ ಎನ್ನಲಾಗಿದೆ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ವಾರ್ಷಿಕ ರಥೋತ್ಸವದ ಮರುದಿನ ಅಲ್ಲಿನ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಈ ದೇಗುಲಕ್ಕೆ ಬಂದು ಇದೇ ಪುಷ್ಕರಣಿಯಲ್ಲಿ ಅವಭƒತ ಸ್ನಾನ ನೆರವೇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next