Advertisement

ಕೋಟ: ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ; ಸಾಹಿತ್ಯ ಹೂದೋಟದಲ್ಲಿ ಯುವ ಪುಷ್ಪಗಳು…

06:37 PM Dec 07, 2022 | Team Udayavani |

ಕೋಟ: ಯುವ ಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆಯಾಗುತ್ತಿದೆ. ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸೃಜನಶೀಲತೆ ಬೆಳೆಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಓದುವ, ಬರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ ಹೂದೋಟದಲ್ಲಿ ಯುವ ಪುಷ್ಪಗಳು ಕಂಗೊಳಿಸಬೇಕು ಎಂದು ಸ.ಪ್ರೌ. ಪೆರ್ವಾಜೆಯ ವಿದ್ಯಾರ್ಥಿನಿ ಅವನಿ ಉಪಾಧ್ಯ ಅಭಿಪ್ರಾಯಪಟ್ಟರು.

Advertisement

ಡಾ| ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ, ಕೋಟ ವಿದ್ಯಾಸಂಸ್ಥೆ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಕ.ಸಾ.ಪ. ಜಿಲ್ಲಾ ಘಟಕ ಸಹಕಾರದಲ್ಲಿ ಡಿ. 6ರಂದು ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆ ಸ್ವರ್ಣಭವನದಲ್ಲಿ ಜರಗಿದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಅಂಕ ಗಳಿಸುವುದೇ ದೊಡ್ಡ ಸಾಧನೆ ಎಂದು ತಿಳಿಯಬಾರದು, ಜೀವನದಲ್ಲಿ ಇತರ ಚಟುವಟಿಕೆ ಕೂಡ ಅಷ್ಟೇ ಮುಖ್ಯ. ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚಿಸುವ ಪೂರಕ ವಾತಾ ವರಣ ಸೃಷ್ಟಿಯಾಗಬೇಕು ಎಂದರು.

ಸಂದೀಪನ್‌ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಪ್ರಮಥ್‌ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್‌ ಜಗತ್ತಿನಲ್ಲಿ ಕಳೆದು ಹೋಗುತ್ತಿರುವ ಯುವ ಜನಾಂಗವನ್ನು ಹೊಸ ಲೋಕಕ್ಕೆ ತರಲು ಸಾಹಿತ್ಯ ಪೂರಕ ಎಂದರು. ಮಕ್ಕಳ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಡಾ| ನೀ. ವಿಜಯ ಬಲ್ಲಾಳ್‌ ಶುಭ ಹಾರೈಸಿದರು.

ಕೋಟ ವಿದ್ಯಾಸಂಘದ ಖಜಾಂಚಿ ವೆಲೇರಿಯನ್‌ ಮೆನೇಜಸ್‌, ಬ್ರಹ್ಮಾವರ ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ವಿವೇಕ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಗದೀಶ್‌ ಹೊಳ್ಳ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಭಾಸ್ಕರ್‌ ಆಚಾರ್ಯ, ಕಾರ್ಯಕ್ರಮದ ಸಂಘಟಕರಾದ ಮಕ್ಕಳ ಸಾಹಿತ್ಯ ವೇದಿಕೆಯ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಉಪಸ್ಥಿತರಿದ್ದರು. ಕ.ಸಾ.ಪ. ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ವಾಗತಿಸಿ, ಭಾಗ್ಯಶ್ರೀ ನಿರೂಪಿಸಿ, ಮನೋಹರ್‌ ಭಟ್‌ ವಂದಿಸಿದರು.

Advertisement

ಗಮನಸೆಳೆದ ವಿವಿಧ ‌ ಗೋಷ್ಠಿಗಳು
ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಗಾಯನಗೋಷ್ಠಿ, ಕಥಾಗೋಷ್ಠಿ ನೆರವೇರಿತು. ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳಾದ ಉನ್ನತಿ ಕೋಟ, ನಿವೇದಿತ ಚಿತ್ರಪಾಡಿ, ಧನುಷ್‌ ಚಿತ್ರಪಾಡಿ, ವೈಷ್ಣವಿ ಗೋಳಿಯಂಗಡಿ, ಎಚ್‌.ವಿಧಾತ್ರೀ ಸಿದ್ಧಾಪುರ, ಮಾನಸ ಜಿ. ಕೋಟ, ಹರ್ಷಿತ್‌ ಮುದ್ರಾಡಿ, ಚಿರಾಗ್‌ ಹೆಬ್ರಿ, ಧಾರಿಣಿ ಪೆರ್ವಾಜೆ, ಸುದೀಪ್‌ ಬಸ್ರೂರು, ದೀಕ್ಷಿತಾ ತೆಕ್ಕಟ್ಟೆ ಕವಿಗೋಷ್ಠಿ,ಯಲ್ಲಿ ಭಾಗವಹಿಸಿದರು. ರಿಷಿಕಾ ಹಟ್ಟಿಯಂಗಡಿ, ನಂದಿನಿ ಗುಂಡ್ಮಿ, ಶ್ರೀನಿಧಿ ಕಾರ್ಕಡ, ವಾರುಣಿ ಕೋಟ, ಶರ್ಮದ ಕೋಟ, ನಿಧೀಶ ಕೋಟ, ಶ್ರೀವತ್ಸ ಹಟ್ಟಿಯಂಗಡಿ, ರೋಷನ್‌ ಕುಂದಾಪುರ, ಭಾಗ್ಯಶ್ರೀ ಕೋಟ ಗಾಯನಗೋಷ್ಠಿಯಲ್ಲಿ ಹಾಗೂ ಆದಿತ್ಯ ಗೋಳಿಯಂಗಡಿ, ಅನುಶ್ರೀ ಕೋಟ, ಅಮೃತ ಚಿತ್ರಪಾಡಿ, ಆರ್ಯ ಚಿತ್ರಪಾಡಿ, ಪ್ರಿಯ ಕಾರ್ಕಡ, ಅನನ್ಯ ನಾಯಕ್‌ ನಾಲ್ಕೂರು, ಆದಿತ್ಯ ನಾಯಕ್‌ ನಾಲ್ಕೂರು, ಶ್ರೇಯಾ ಕೋಟ, ಭೂಮಿ ಕೋಟ, ಪ್ರಥ್ವೀ ಗೋಳಿಯಂಗಡಿ, ನಿಶಾ ಗೋಳಿಯಂಗಡಿ, ರಚಿತಾ ಕುಲಾಲ್‌ ಮುದ್ರಾಡಿ, ಪ್ರಣಾಮ್‌ ಹೆಬ್ರಿ, ಸಿದ್ಧಿರಾಜ್‌ ಕಾರ್ಕಳ,
ಶೋಭಿತ್‌, ಸಾಂಜಲಿ ಬಜಗೋಳಿ, ಅನಘ ಕೋಟ, ಆದ್ಯಾ ತೆಕ್ಕಟ್ಟೆ, ನಿಧಿ ತೆಕ್ಕಟ್ಟೆ, ಮಾನಸ ಗೋಳಿಯಂಗಡಿ ಗೋಷ್ಠಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next