ಕೋಟ ಸಂತೆ ಮಾರುಕಟ್ಟೆ ಸಮೀಪ ಪ್ರತಿಭಟನಾ ಸಭೆ ನಡೆಯಿತು. ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.
Advertisement
ಆರೋಪಿಗಳ ಬಂಧನಕ್ಕೆ ಆಗ್ರಹಪ್ರಕರಣಕ್ಕೆ ಸಂಬಂಧಿಸಿ ರಾಜಶೇಖರ ರೆಡ್ಡಿ. ಚಂದ್ರಶೇಖರ ರೆಡ್ಡಿ ಹಾಗೂ ಇತರ ನಾಲ್ಕು ಜನರು ಆರೋಪಿಗಳಾಗಿರುವುದಾಗಿ ಪ್ರತ್ಯಕ್ಷದರ್ಶಿ ದೂರು ದಾಖಲಿಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎನ್ನುವ ಆಗ್ರಹ ಪ್ರತಿಭಟನಾ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಈ ಘಟನೆ ನಮ್ಮ ಊರಿಗೆ ಕಪ್ಪು ಚುಕ್ಕೆ. ಇಂತಹ ಘಟನೆಗಳು ಮರುಕಳಿಸಬಾರದು. ಹೀಗಾಗಿ ಈ ಆರೋಪಿಗಳಿಗೆ ಕಠಿನ ಶಿಕ್ಷೆಯಾಗಬೇಕು. ಫೆ. 6ರೊಳಗೆ ಪ್ರಕ ರಣದ ಆರೋಪಿಗಳ ಬಂಧನವಾಗದಿದ್ದಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದರು. ಎಸ್.ಪಿ. ಮನವಿ ಸ್ವೀಕಾರ
ಪ್ರತಿಭಟನ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಭೇಟಿ ನೀಡಿದರು. ಈ ಸಂದರ್ಭ ಪ್ರತಿಭಟನಕಾರರು ಎಸ್‌ಪಿಯವರಿಗೆ ಮನವಿ ಸಲ್ಲಿಸಿ ಕಠಿನ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಎಸ್‌ಪಿಯವರು ಈಗಾಗಲೇ ತನಿಖೆ ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯ ವಿಲ್ಲ. ಸಾರ್ವಜನಿಕರು ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಮೃತ ಯುವಕರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಹುಂಡಿ ಕಾಣಿಕೆ ಸಂಗ್ರಹಿಸಲಾಯಿತು.
Related Articles
Advertisement
ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ತಾ.ಪಂ. ಸದಸ್ಯೆ ಲಲಿತಾ, ಶ್ಯಾಮ್ ಸುಂದರ್ ನಾೖರಿ, ವಿಟuಲ ಪೂಜಾರಿ, ಜಯಂತ್ ಅಮೀನ್, ಮೊಗವೀರ ಯುವ ಸಂಘಟನೆಯ ಚಂದ್ರ ಮೆಂಡನ್, ಕೋಟ ಗ್ರಾ.ಪಂ. ಅದ್ಯಕ್ಷ ವನಿತಾ ಶ್ರೀಧರ್ ಆಚಾರ್ಯ, ಕೋಟತಟ್ಟು ರಘು ತಿಂಗಳಾಯ, ಸ್ಥಳೀಯರಾದ ವಿವೇಕ ಸುವರ್ಣ, ಸಂದೀಪ್ ಕೋಡಿ, ಬಸವ ಮರಕಾಲ ಕಲ್ಲುಗದ್ದೆ, ಸುಬ್ರಾಯ ಆಚಾರ್ಯ, ಪ್ರಸಾದ್ ಬಿಲ್ಲವ ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಸಾಸ್ತಾನ ನಿರೂಪಿಸಿದರು.
ಪ್ರತಿಭಟನೆ ಸಂದರ್ಭ ಉಡುಪಿ ಡಿವೈಎಸ್‌ಪಿ ಜೈಶಂಕರ್, ಕುಂದಾಪುರ ಡಿವೈಎಸ್‌ಪಿ ದಿನೇಶ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.