ಆಗ್ರಾ: ಭಾರತದ ಸಂಸ್ಕೃತಿ, ಸಂಸ್ಕಾರ, ಕಲೆ, ಸಾಹಿತ್ಯ, ಜನಪ್ರೀತಿಗೆ ಮಾರು ಹೋಗದವರೇ ಇಲ್ಲ. ಈ ಪ್ರೀತಿಗೆ ಮನಸೋತು ಭಾರತದಲ್ಲೇ ನೆಲೆಸಿರುವ ಕೊರಿಯಾ ಮೂಲದ ಯುವತಿಯೊಬ್ಬರು ಇತ್ತೀಚೆಗೆ ತಮ್ಮ ತಂದೆ-ತಾಯಿಯನ್ನೂ ಭಾರತಕ್ಕೆ ಕರೆತಂದು ದೇಶ ಸುತ್ತಿಸಿದ್ದಾರೆ.
ಪ್ರೇಮ ಸ್ಮಾರಕವಾದ ತಾಜ್ ಮಹಲ್ ಮುಂದೆ ಪೋಷಕರೊಟ್ಟಿಗೆ ನಿಂತು ಭಾರತದ ಮೇಲಿನ ಪ್ರೀತಿಯ ಬಿಚ್ಚಿಟ್ಟ ಯುವತಿಯ ಬಗ್ಗೆ ಜಾಲ ತಾಣದಲ್ಲಿ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ಹೌದು ಕೊರಿಯಾ ಮೂಲದವರಾದ ಜಿವಾನ್ ತಮ್ಮ ಪೋಷಕರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿ ಆ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೇ “ಕೊರಿಯನ್ ಮಮ್ಮಿ-ಪಾಪಾ ಕೀ ಇಂಡಿಯಾ ಬೇಟಿ’ ಎಂದು ಕ್ಯಾಪ್ಶನ್ ಹಾಕಿ, ನಾನು ಹಿಂದಿ ಮಾತನಾಡುತ್ತೇನೆ, ಗುಲಾಬಿ ಬಣ್ಣದ ಸಲ್ವಾರ್ ಧರಿಸಿ ಸಂಪೂರ್ಣ ಭಾರತೀಯಳೇ ಆಗಿದ್ದೇನೆ’ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.