ಸಾಮಾಜಿಕ ಜಾಲತಾಣದಲ್ಲಿ ಕೊರಿಯನ್ ವಿಡಿಯೋ ಬ್ಲಾಗರ್ ಒಬ್ಬರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಭಾರತಕ್ಕೆ ಬರುತ್ತಿದ್ದಂತೆ ದಕ್ಷಿಣ ಕೊರಿಯಾ ಬ್ಲಾಗರ್ ಮತ್ತು ಕೇಶ ವಿನ್ಯಾಸಕಾರ ಕಿಮ್ ಜೇಹಿಯೋನ್ ಅವರ ಮೊದಲ ಚಟುವಟಿಕೆಗಳು ವಿಡಿಯೋ ಕ್ಲಿಪ್‌ನಲ್ಲಿವೆ.
ವಿಡಿಯೋದಲ್ಲಿ, ವಿಮಾನ ಭಾರತದಲ್ಲಿ ಲ್ಯಾಂಡ್ ಆಗುತ್ತದೆ. ನಂತರ ಆತ ಬಸ್, ಟ್ಯಾಕ್ಸಿ ಮತ್ತು ಬೈಕ್ ಸೇರಿ ಸಾರ್ವಜನಿಕ ಸಾರಿಗೆ ಮೂಲಕ ಸ್ಥಳೀಯ ಅಂಗಡಿ ಒಂದಕ್ಕೆ ಆಗಮಿಸುತ್ತಾನೆ. ಈ ವೇಳೆ ಆತ ಕಬ್ಬಿನ ರಸ ಸವಿಯುತ್ತಾ, “ಭಾರತಕ್ಕೆ ಬಂದ ತಕ್ಷಣ ನಾನು ಮಾಡುವ ಕೆಲಸ ಇದೆ’ ಎಂದು ಹೇಳುತ್ತಾನೆ. “ದಿ ಫಸ್ಟ್ ಥಿಂಗ್ ಐ ಡಿಡ್ ವೆನ್ ಐ ರೀಚ್ ಇಂಡಿಯಾ’ ಎಂಬ ಟೈಟಲ್‌ನ ವಿಡಿಯೋ ಇದೀಗ ವೈರಲ್ ಆಗಿದೆ.