Advertisement

ಕೊರಿಯಾ ಬ್ಯಾಡ್ಮಿಂಟನ್‌: ಮೊದಲ ದಿನವೇ ಭಾರತದ ಸ್ಪರ್ಧೆ ಅಂತ್ಯ

06:50 AM Nov 29, 2018 | |

ಗ್ವಾಂಗ್‌ಜೂ (ದಕ್ಷಿಣ ಕೊರಿಯಾ): ಕೊರಿಯಾ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಪಾರುಪಳ್ಳಿ ಕಶ್ಯಪ್‌ ಹಾಗೂ ಸೌರಭ್‌ ವರ್ಮ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದಿದ್ದಾರೆ ಈ ಟೂರ್ನಿಯಲ್ಲಿ ಭಾರತದ ಕೇವಲ ಇಬ್ಬರು ಆಟಗಾರರು ಮಾತ್ರ ಭಾಗವಹಿಸಿದ್ದರು. ಇವರ ಸೋಲಿನ ಮೂಲಕ ಈ ಕೂಟದ ಮೊದಲ ದಿನವೇ ಭಾರತದ ಆಟ ಅಂತ್ಯವಾಗಿದೆ.

Advertisement

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಪಿ. ಕಶ್ಯಪ್‌ ಅತಿಥೇಯ ನಾಡಿನ ಲೀ ಡಾಂಗ್‌ ಕೆಯುನ್‌ ವಿರುದ್ಧ 17-21, 21-13, 8-21 ಗೇಮ್‌ಗಳಿಂದ ಸೋತರು. ಇದು ಕಶ್ಯಪ್‌-ಕೆಯುನ್‌ ನಡುವಿನ 5ನೇ ಪಂದ್ಯವಾಗಿತ್ತು. 2-2 ಸಮಬಲದೊಂದಿಗೆ ಕಣಕ್ಕಿಳಿದಿದ್ದರು.ಕೇವಲ 3 ಅಂಕಗಳಿಂದ ಮೊದಲ ಗೇಮ್‌ ಕಳೆದುಕೊಂಡ ಕಶ್ಯಪ್‌, 2ನೇ ಗೇಮ್‌ನಲ್ಲಿ ತಿರುಗಿ ಬಿದ್ದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಅತ್ಯುತ್ತಮ ಆಟವಾಡಿದ ಲೀ, ಭಾರತೀಯನಿಗೆ ಹೆಚ್ಚಿನ ಅವಕಾಶ ನೀಡದೆ 21-8 ಅಂಕಗಳ ಅಂತರದಿಂದ ಗೆಲುವು ದಾಖಲಿಸಿದರು. ಇದರೊಂದಿಗೆ ಕಶ್ಯಪ್‌ ವಿರುದ್ಧ ಕೆಯುನ್‌ ಗೆಲುವಿನ ದಾಖಲೆ 3-2ಕ್ಕೆ ವಿಸ್ತರಿಸಲ್ಪಟ್ಟಿತು.

ಪುರುಷರ ವಿಭಾಗದ ಮತ್ತೂಂದು ಪಂದ್ಯದಲ್ಲಿ ಸೌರಭ್‌ ವರ್ಮ 13-21, 21-12, 18-21 ಅಂಕಗಳ ಅಂತರದಿಂದ ಫಿನ್ಲಂಡ್‌ನ‌ ಯೆಟು ಹಿನೊ ವಿರುದ್ಧ ಮುಗ್ಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next