Advertisement

ಕೊರಟಗೆರೆ ;ಅಧಿಕಾರಿಗಳಿಗೆ ಹಣದ ದಾಹ ಬಡವರಿಗೆ ನೀರಿನ ದಾಹ; ಕುಡಿಯುವ ನೀರಿನ ಘಟಕಗಳ ಕರ್ಮಕಾಂಡ

08:37 PM May 14, 2022 | Team Udayavani |

ಕೊರಟಗೆರೆ ; ಅಧಿಕಾರಿಗಳಿಗೆ ಹಣದ ದಾಹ ಬಡವರಿಗೆ ನೀರಿನ ದಾಹ ಶುದ್ಧ ಕುಡಿಯುವ ನೀರಿನ ಘಟಕಗಳ ಕರ್ಮಕಾಂಡ . ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಒಪ್ಪಿಕೊಂಡಿರುವ ಖಾಸಗಿ ಕಂಪನಿಗಳ ಜತೆ ಶಾಮೀಲಾಗಿರುವ ಕೊರಟಗೆರೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು ಹಾಗೂ ಅವರ ಕೆಲ ಸಿಬ್ಬಂದಿಗಳು. ಗ್ರಾಮ ಪಂಚಾಯ್ತಿಯ ಜಾಗ ಗ್ರಾಮ ಪಂಚಾಯಿತಿಯ ನೀರನ್ನು ಬಳಸಿಕೊಂಡು ಲಕ್ಷಾಂತರ ರೂ ಹಣ ಮಾಡಿಕೊಂಡ ಶುದ್ಧ ಕುಡಿಯುವ ನೀರಿನ ಘಟಕಗಳ ಖಾಸಗಿ ಕಂಪೆನಿಗಳು ಬೆಸ್ಕಾಂ ಇಲಾಖೆಯ ಬಿಲ್ ನೀಡಬೇಕಿರುವುದು ಗ್ರಾಮ ಪಂಚಾಯಿತಿಗಳು ಇದು ಯಾವ ನ್ಯಾಯ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವುದು ಎಂದರೆ ಇದೇನಾ.

Advertisement

ತಾಲೂಕಿನಾದ್ಯಂತ ಸುಮಾರು 154 ಶುದ್ಧ ಕುಡಿಯುವ ನೀರಿನ ಘಟಕಗಳಿವೆ 2016 ನೇ ಇಸವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೊಡ್ಡ ಯೋಜನೆ ಇದಾಗಿತ್ತು ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲು ಖಾಸಗಿ ಕಂಪನಿಗಳಿಗೆ ಟೆಂಡರ್ ಕರೆಯಲಾಗಿತ್ತು ಆ ಒಂದು ಗುತ್ತಿಗೆ ದಾರರಿಗೆ 5ವರ್ಷದ ಅವಧಿಗೆ ಗುತ್ತಿಗೆಯನ್ನು ನೀಡಲಾಗಿತ್ತು ಅದರಂತೆಯೇ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳ ಟೆಂಡರ್ ಮುಗಿದರೂ ಕೂಡ ಖಾಸಗಿ ಕಂಪೆನಿಗಳ ಹಣದ ದಾಹಕ್ಕೆ ಕೊನೆಯೇ ಇಲ್ಲದಂತಾಗಿದೆ.

ಎಲ್ಲಿ ನೋಡಿದರೂ ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ ಅದೆಷ್ಟೋ ಘಟನೆಗಳು ನೀರನ್ನು ಶುದ್ಧೀಕರಿಸದೆ ಹಾಗೆ ಹೊರಬರುತ್ತಿವೆ ಅದನ್ನೇ ತೆಗೆದುಕೊಂಡು ಹೋಗುತ್ತಿರುವ ಗ್ರಾಮಸ್ಥರು ಪ್ರತಿ 20 ಲೀಟರ್ ನೀರಿಗೆ 5ರೂ ಗಳಂತೆ ಹಣ ಪಾವತಿಸುತ್ತಾರೆ. ಆದರೆ ಈ ಹಣ ಯಾರ ಪಾಲಿಗೆ ಲಕ್ಷ ಲಕ್ಷ ಕೊಳ್ಳೆ ಹೊಡೆಯುತ್ತಿರುವ ಖಾಸಗಿ ಕಂಪೆನಿಗಳು ಕಂಪೆನಿಗಳಿಗೆ ಕೈಜೋಡಿಸಿರುವ ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರ ಅವಧಿ ಮುಗಿದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕೊಡಬೇಕು ಅವರು ಇಲ್ಲಿ ಕೊಟ್ಟಿಲ್ಲ ಕಾರಣ ಏನು.

154ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಇದುವರೆಗೂ ಯಾವುದೇ ವಿದ್ಯುತ್ ಬಿಲ್ ಪಾವತಿಸಿಲ್ಲ ಬೆಸ್ಕಾಂ ಇಲಾಖೆಗೆ ನೀಡಬೇಕಾದ ಹಣದ ಮೊತ್ತ 81.22.183ರೂಪಾಯಿಗಳಷ್ಟು
ಇದನ್ನ ಯಾರು ಕೊಡುತ್ತಾರೆ.

ಇದನ್ನೂ ಓದಿ :ವಿಕಲಚೇತನ ಯುವಕನ ಬೇಡಿಕೆಗೆ ಸ್ಪಂದನೆ; ಮಾನವೀಯತೆ ಮೆರೆದ ಸಿಎಂ

Advertisement

ವಿಶೇಷ ಬಾಕ್ಸ್ ಬಳಸಿ
ಇದನ್ನು ಪ್ರಶ್ನೆ ಮಾಡಲು ಹೋದ ನಮ್ಮ ಪತ್ರಕರ್ತರಿಗೆ ಸರಿಯಾದ ಮಾಹಿತಿ ಕೊಡದ ಕೊರಟಗೆರೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಿಕ್ಕರಾಜಣ್ಣ ಏನ್ ಸ್ವಾಮಿ ತಾಲ್ಲೂಕು ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ ಎಂದು ಕೇಳಿದ ಪ್ರಶ್ನೆಗೆ ನನಗೆ ಮಾಹಿತಿ ಇಲ್ಲ ಎನ್ನುವ ಅಧಿಕಾರಿ ಜೊತೆಗೆ ನಾವು ಮಾಸ್ತಿ ಪಟ್ಟದ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿ ಖಾಸಗಿ ಕಂಪನಿಗಳ ಅವಧಿ ಮುಗಿದರೂ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮತ್ತೆ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಮುಂದಾಗಿರುವ ಈ ಅಧಿಕಾರಿಯ ಮರ್ಮವೇನು ಇವರ ಹಿಂದೆ ಎಷ್ಟು ಜನ ಗುತ್ತಿಗೆದಾರರಿದ್ದಾರೆ ಯಾವ ಯಾವ ಖಾಸಗಿ ಕಂಪೆನಿಗಳು ಇದ್ದಾವೆ ಎಂಬುದರ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ.

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ತೆಗೆದುಕೊಂಡಿದ್ದ ಖಾಸಗಿ ಕಂಪನಿಗಳ ವಿವರ :

1:-ಪನ್ ಏಷ್ಯಾ ಕಂಪೆನಿ
2:-ಪೆಂಟಾ ಪ್ಯೂರ್
3:-ಶ್ರೀ ಸಾಯಿ ವಾಟರ್
4:-ಕೆ ಆರ್ ಐ ಡಿ ಎಲ್

ಎಷ್ಟು ಕಂಪನಿಗಳು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಹೊತ್ತುಕೊಂಡಿದ್ದರು ಆದರೆ ಈ ಕಂಪೆನಿಗಳು ಟೆಂಡರ್ ಅವಧಿ ಮುಗಿದರೂ ಕೂಡ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ನೋಡು ಕುಳಿತಿದ್ದಾರೆ ಎಂಬುದರ ಮಾಹಿತಿಯೇ ಇಲ್ಲದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿಕ್ಕರಾಜಣ್ಣ ಹಾಗೂ ಸಿಬ್ಬಂದಿಗಳು ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಕೇಳುವರೆ ರಯ್ಯ ಎನ್ನುವ ಆಗಿದೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ..

ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟೆಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ  :

ಕೊರಟಗೆರೆ ತಾಲ್ಲೂಕಿನಲ್ಲಿರುವ 24 ಗ್ರಾಮ ಪಂಚಾಯಿತಿಗಳ ಪೈಕಿ

ಅಗ್ರಹಾರ – 4
ಅಕ್ಕಿರಾಂಪುರ – 7
ಅರಸಾಪುರ – 5
ಬಿ ಡಿ ಪುರ – 7
ಬೂದಗವಿ – 7
ಬುಕ್ಕಾಪಟ್ಟಣ – 7
ಬೈಚಾಪುರ – 8
ಚಿನ್ನಹಳ್ಳಿ – 5
ದೊಡ್ಡಸಾಗ್ಗೆರೆ- 5
ಹಂಚಿಹಳ್ಳಿ ಹೊಳವನಹಳ್ಳಿ- 5
ಹುಲಿಕುಂಟೆ – 7
ಕೋಳಾಲ- 4
ಕುರಂಕೋಟೆ – 5
ಕ್ಯಾಮೇನಹಳ್ಳಿ – 7
ಮಾವತ್ತೂರು- 5
ನೀಲಗೊಂಡನಹಳ್ಳಿ -6
ಪಾತಗಾನಹಳ್ಳಿ -1
ತೀತಾ,- 8
ತೋವಿನಕೆರೆ -6
ತುಂಬಾಡಿ-6
ವಡ್ಡಗೆರೆ -9
ವಜ್ಜನಕುರಿಗೆ -4
ಎಲೆರಾಂಪುರ -7

ಕೊರಟಗೆರೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು -ಇದಿಷ್ಟು ಕಂಪೆನಿಗಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಣೆಯನ್ನು ಒಪ್ಪಿಕೊಂಡಿರುವುದು ಆದರೆ ಬೆರಳೆಣಿಕೆಯಷ್ಟು ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದಾರೆ ಇನ್ನುಳಿದ ಎಷ್ಟೋ ಘಟಕಗಳು ಕೆಟ್ಟು ನಿಂತಿವೆ ಶುದ್ಧೀಕರಿಸುವ ನೀರಿನ ಟ್ಯಾಂಕರ್ ಗಳಲ್ಲಿ ಪಾಚಿ ಎದ್ದು ಕಾಣುತ್ತದೆ.

ಶುದ್ಧ ಕುಡಿಯುವ ನೀರು ಬಳಸುವ ಗೃಹಿಣಿ ನೇತ್ರಾವತಿ ಮಾತನಾಡಿ :

ಪ್ರತಿನಿತ್ಯವೂ ನಾವು ಕುಡಿಯಲು ಶುದ್ಧ ಕುಡಿಯುವ ನೀರನ್ನು ಬಳಸುತ್ತಿದ್ದೇವೆ. ಆದರೆ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಹಲವು ವರ್ಷಗಳಿಂದ ಫಿಲ್ಟರ್ ಬದಲಾಯಿಸಿಲ್ಲ. ಅದೇ ನೀರನ್ನೇ ಜನರಿಗೆ ನೀಡುತ್ತಿದ್ದಾರೆ ಎಷ್ಟು ಬಾರಿ ಹೇಳಿದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು 20 ಲೀಟರ್ ನೀರಿಗೆ 5ರೂ ತೆಗೆದುಕೊಳ್ಳುತ್ತಾರೆ ಒಂದು ಬಾರಿಯೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ವಚ್ಚತೆಗೊಳಿಸಿಲ್ಲ. ಸೊಳ್ಳೆ ಅಲ್ಲಿ ಫಿಲ್ಟರ್ ನೀರಿಗೆ ಬಳಸುವ ಸಂಪ್ ಒಳಗೆ ಓಡಾಡುತ್ತಿರುತ್ತವೆ ನೀವೇ ಗಮನಿಸಬಹುದು ಎಷ್ಟರಮಟ್ಟಿಗೆ ಫಿಲ್ಟರ್ ಇದೆಯೆಂದು ಯಾವ ಅಧಿಕಾರಿಗಳಿಗೆ ಹೇಳಿದರೂ ಅದನ್ನು ಗಮನಹರಿಸುತ್ತಿಲ್ಲ ಎಂದು ತಿಳಿಸಿದರು.

ತುಮಕೂರು ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗೆ ಕರೆ ಮಾಡಿ ಕೇಳಿದರೆ ಆದಷ್ಟು ಬೇಗ ಎಲ್ಲ ಸರಿಪಡಿಸುತ್ತೇವೆ ಎಂದು ತಿಳಿಸುತ್ತಾರೆ. ನಿಮ್ಮ ಕೊರಟಗೆರೆ ಇಲಾಖೆಯ ಅಧಿಕಾರಿಗಳು ಈ ರೀತಿ ಉಡಾಫೆ ಉತ್ತರ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರಿಗೆ ಬುದ್ಧಿ ಮಾತನ್ನು ಹೇಳುತ್ತೇನೆ. ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಬಹುದಿತ್ತು ಯಾಕೆ ಸುಮ್ಮನಾದರು ತಿಳಿಯುತ್ತಿಲ್ಲ ಆದಷ್ಟು ಬೇಗ ಎಲ್ಲ ಬಗೆಹರಿಸುತ್ತೇನೆ ಎಂದು ತಿಳಿಸಿದರು.

– ಸಿದ್ದರಾಜು. ಕೆ.

Advertisement

Udayavani is now on Telegram. Click here to join our channel and stay updated with the latest news.

Next