ಕೊರಟಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಕೊರಟಗೆರೆ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಶಿಕ್ಷಕ ಕೃಷ್ಣಮೂರ್ತಿ ರವನ್ನು ಜಿಲ್ಲಾ ಅಧ್ಯಕ್ಷ ಕೆ. ಎಸ್. ಸಿದ್ದಲಿಂಗಪ್ಪ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಹೊಳವನಹಳ್ಳಿ ವಾಸಿಯಾದ, ತಂದೆ ವೆಂಕಟರಾಮಯ್ಯ ತಾಯಿ ಆದಿ ಲಕ್ಷ್ಮಮ್ಮನವರ ಮಗನಾದ ಕೃಷ್ಣ ಮೂರ್ತಿ ಇವರು 32 ವರ್ಷಗಳಿಂದ ಶಿಕ್ಷಕರಾಗಿ ಹಾಗೂ ಕ್ಷೇತ್ರ ಸಂಪನ್ಮೂಲ ಶಿಕ್ಷಕರಾಗಿ ಸಲ್ಲಿಸಿದ್ದಾರೆ. ಪ್ರಸ್ತುತ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರನ್ನು ತಾಲ್ಲೂಕಿನಲ್ಲಿ ಸಾಹಿತ್ಯ, ಕಲೆ ಹಾಗೂ ಕನ್ನಡ
ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಬೆಳೆಸುವಂತೆ ಸೂಚಿಸಿದ್ದಾರೆ.
ನೂತನ ಕಸಾಪ ಅಧ್ಯಕ್ಷ ಕೃಷ್ಣಮೂರ್ತಿಯವರು ಕನ್ನಡ ಸಾಹಿತ್ಯ ಸೇವೆಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ, ಶಿಕ್ಷಣ ಇಲಾಖೆಯ ಉತ್ತಮ ಸೇವೆ ಗುರುತಿಸಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, ರಂಗಭೂಮಿ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಸಾರ್ವಜನಿಕರಿಂದ ಬೆಳ್ಳಿ ಕಿರೀಟ ಧಾರಣೆಯೊಂದಿಗೆ ಉತ್ತಮ ರಂಗಭೂಮಿ ಕಲಾವಿದ ಪ್ರಶಸ್ತಿ ನೀಡಿದ್ದು, ಪ್ರಸ್ತುತ ಮುಂಜಾನೆ ಗೆಳೆಯರ ಬಳಗದ ಕಾರ್ಯದರ್ಶಿಯಾಗಿ, ತಾಲ್ಲೂಕು ರಂಗಭೂಮಿ ಸೇವಾ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಎಲ್ಲಾ ಸೇವೆಯನ್ನು ಗಮನಿಸಿ ಪ್ರಸ್ತುತ ತಾಲ್ಲೂಕು ಕಸಾಪ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬಾಲಿವುಡ್ ನಟ ವಿಕ್ಕಿ-ಕ್ಯಾಟ್ ಹಳದಿ ಶಾಸ್ತ್ರದ ಫೋಟೋ ವೈರಲ್