ಕೊರಟಗೆರೆ: ಕೊರಟಗೆರೆ ಪಟ್ಟಣಕ್ಕೆ ಮಾ.16 ರ ಗುರುವಾರ ಮಧ್ಯಾಹ್ನ3 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ರಥಯಾತ್ರೆ ನಡೆಯಲಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಪವನ್‌ಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿಜಯ ಸಂಕಲ್ಪ ರಥಯಾತ್ರೆ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯಲಿದೆ, ಈ ರಥಯಾತ್ರೆಯಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಸಚಿವರುಗಳಾದ ಮಾಧುಸ್ವಾಮಿ, ಡಾ.ಸುಧಾಕರ್, ಆರ್.ಆಶೋಕ್, ಕೇಂದ್ರದ ಸಚಿವರುಗಳಾದ ಎ.ನಾರಾಯಣಸ್ವಾಮಿ, ಸದಾನಂದಗೌಡ, ಸಂಸದರುಗಳಾದ ಪಿ.ಸಿ.ಮೋಹನ್, ಜಿ.ಎಸ್.ಬಸವರಾಜು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದು ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ಮುಖ್ಯಂತ್ರಿಗಳಿಂದ ಬಹಿರಂಗ ಭಾಷಣವಿದ್ದು ಅವರೊಂದಿಗೆ ಸಚಿವರು ಮಾತನಾಡಲಿದ್ದಾರೆ.ಈ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಕೋರಿದ್ದಾರೆ.
ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮಾತನಾಡಿ, ಗುರುವಾರದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಮಹಿಳೆಯರ ಕಲಶ ಕುಂಭಗಳು ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಳ್ಳುತ್ತವೆ.ಈ ಕಾರ್ಯಕ್ರಮಕ್ಕೆ ಬಿಜೆಪಿ ಎಲ್ಲಾ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಬಿಜೆಪಿ ಪಕ್ಷದ ವಿವಿಧ ಪದಾಧಿಕಾರಿಗಳಾದ ಸುಶೀಲಮ್ಮ, ವಿಜಯಕುಮಾರ್, ವಿಶ್ವನಾಥ್ ಅಪ್ಪಾಜಪ್ಪ, ಗುರುದತ್, ನಟರಾಜು, ಮಮತಾ ಮುಖಂಡರುಗಳಾದ ಜಿ.ವೆಂಕಟಾಚಲಯ್ಯ, ವೆಂಕಟೇಶ್, ಸಂಜೀವರೆಡ್ಡಿ, ಆನಂದ್ ಸೇರಿದಂತೆ ಇತರರು ಹಾಜರಿದ್ದರು.