Advertisement

ಕೊರಟಗೆರೆ : ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಢಿಕ್ಕಿ: ವೃದ್ದ ಸಾವು

08:05 PM Aug 08, 2022 | Team Udayavani |

ಕೊರಟಗೆರೆ : ತಾಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Advertisement

ಮೃತ ದುರ್ದೈವಿ ಕಲ್ಲುಗುಟ್ಟರಹಳ್ಳಿ ಗ್ರಾಮದ ರಾಮಕೃಷ್ಣಪ್ಪ(65) ಎನ್ನುವವರಾಗಿದ್ದು, ಪಟ್ಟಣಕ್ಕೆ ಹೋಗಲು ಬಸ್ ಗಾಗಿ ಕಾಯುತ್ತಿದ್ದಾಗ ತೋವಿನಕೆರೆ ಮಾರ್ಗದಿಂದ ಅತಿ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರನೋರ್ವ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೆ ಏಕಾಏಕಿ ವಿಶ್ರಾಂತಿ ರಾಮಕೃಷ್ಣಪ್ಪನಿಗೆ ಗುದ್ದಿದ್ದಾನೆ.

ದ್ವಿಚಕ್ರ ವಾಹನ ಗುದ್ದಿದ ರಭಸಕ್ಕೆ ರಾಮಕೃಷ್ಣಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ರಾಮಕೃಷ್ಣಪ್ಪರ ಜತೆಯಲ್ಲಿದ್ದ ಸಂಬಂಧಿ ವಿಜಯ್ ಕುಮಾರ್ ದೂರು ನೀಡಿದ್ದು, ಸಿಪಿಐ ಸುರೇಶ್ ಹಾಗೂ ಪಿಎಸ್ ಐ ನಾಗರಾಜು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ದ್ವಿಚಕ್ರವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದು ಆತನ ವಿರುದ್ಧ ಹಿಟ್&ರನ್ ಕೇಸ್ ದಾಖಲಿಸಲಾಗಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next