Advertisement

ಕೊರಟಗೆರೆ: ಸರಕಾರಿ ಗೋಮಾಳದ ಜಮೀನಿನ ದಾರಿಗೆ ಹಗ್ಗಜಗ್ಗಾಟ

04:14 PM Jul 10, 2023 | Team Udayavani |

ಕೊರಟಗೆರೆ:ಸರಕಾರಿ ಗೋಮಾಳದ ಜಮೀನಿನ ದಾರಿಗಾಗಿ ಮಾಲೀಕರ ನಡುವೆ ಪ್ರತಿನಿತ್ಯ ಹಗ್ಗಜಗ್ಗಾಟ.. ಜಮೀನು ಮತ್ತು ದಾರಿಗಾಗಿ ಕೊರಟಗೆರೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಉಭಯ ಮಾಲಕರ ತಂಡ.. ಗೋಶಾಲೆಗೆ ತೆರಳುವ ಮಾರ್ಗವೇ ಬಂದ್ ಮಾಡಿದ ಸರಕಾರಿ ಗೋಮಾಳದ ಜಮೀನು ಮಾಲಕ.. ಕಳೆದ ವಾರದಿಂದ ಮೇವು ನೀರಿಲ್ಲದೇ ಪ್ರತಿನಿತ್ಯ ನರಳಾಡಿ ಮೃತ ಪಡುತ್ತಿರುವ ರಾಸುಗಳ ರಕ್ಷಣೆಯ ಜವಾಬ್ದಾರಿ ಯಾರು?.

Advertisement

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ರೆಡ್ಡಿಹಳ್ಳಿಯ ಸಮೀಪದ ಗೋಮುಖ ಗೋಶಾಲೆಯಲ್ಲಿ ದುರ್ಘಟನೆ ನಡೆಯುತ್ತಿದೆ. ಮಧುಗಿರಿ ಪುರುವಾರ ಹೋಬಳಿ ಸುಣ್ಣವಾಡಿ ಗ್ರಾಮದ ಸರಕಾರಿ ಗೋಮಾಳದ ಜಮೀನಿನಲ್ಲಿ ದಾರಿಯಿದೆ. ಕೊರಟಗೆರೆ ತಾಲೂಕಿನ ರೆಡ್ಡಿಯಲ್ಲಿ ಗ್ರಾಮದಲ್ಲಿ 1 ಎಕರೆ 31 ಗುಂಟೆ ಜಮೀನಿನಲ್ಲಿ ಗೋಮುಖ ಗೋಶಾಲೆ ಇದೆ.

ಗೋಮುಖ ಗೋಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತು ರೆಡ್ಡಿಯ ರೈತ ವೆಂಕಟೇಶಯ್ಯ ನಡುವಿನ ಸರಕಾರಿ ಗೋಮಾಳದ ದಾರಿಯ ಪ್ರತಿಷ್ಠೆಯ ತಿಕ್ಕಾಟದಿಂದ ರಾಸುಗಳಿಗೆ ಕಂಟಕ ಎದುರಾಗಿದೆ. ತುರ್ತು ಸಮಸ್ಯೆಯನ್ನುಅರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ತಂಡವು ಮೌನಕ್ಕೆ ಶರಣಾದ ಪರಿಣಾಮವೇ ರಾಸುಗಳ ಸಾವು ಹೆಚ್ಚಾಗಲು ಕಾರಣವಾಗಿದೆ.

ತುಮಕೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿನೀಡಿ ತತ್ ಕ್ಷಣ ತುರ್ತುಕ್ರಮ ಕೈಗೊಳ್ಳಬೇಕಿದೆ.

Advertisement

 ಗೋಶಾಲೆಯಲ್ಲಿ 57 ರಾಸು..
ಗೋಮುಖ ಗೋಶಾಲೆಯು 2023 ರ ಮಾ.9 ರಂದು ಪ್ರಾರಂಭ ಆಗಿದೆ. ಗೋಶಾಲೆಯಲ್ಲಿ ಪ್ರಸ್ತುತ ಒಟ್ಟು 35 ಎಮ್ಮೆ ಮತ್ತು 14 ಹಸು ಸೇರಿ ಒಟ್ಟು 49 ರಾಸುಗಳಿವೆ. ಪಾವಗಡ, ಮಧುಗಿರಿ, ಮಡಕಶಿರಾದ ಪೊಲೀಸ್ ಇಲಾಖೆಯಿಂದ ಚಿನ್ನಮಲ್ಲಣ್ಣಹಳ್ಳಿಯ ಸುರಭಿ ಗೋಶಾಲೆ ಮೂಲಕ ರೆಡ್ಡಿಯಲ್ಲಿಯ ಗೋಮುಖ ಗೋಶಾಲೆಗೆ ಹಸ್ತಾಂತರ ಆಗಿವೆ. ಗೋಶಾಲೆಗೆ ಪರವಾಗಿ ನೀಡಬೇಕಾದ ವೇಳೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸದ ಪರಿಣಾಮ ಸಮಸ್ಯೆಯು ದ್ವೀಗುಣವಾಗಲು ಕಾರಣವಾಗಿದೆ.

ದೂರು ನೀಡಿದರೂ ಪ್ರಯೋಜನ ಆಗಿಲ್ಲ
ತುಮಕೂರು ಜಿಲ್ಲಾಧಿಕಾರಿ, ಪೊಲೀಸ್ ಉಪಅಧೀಕ್ಷರ ಕಚೇರಿ, ಮಧುಗಿರಿ ಕಂದಾಯ ಮತ್ತು ಕೊರಟಗೆರೆ ಪೊಲೀಸ್ ಠಾಣೆಗೆ ಜು.೧ರಂದು ಶನಿವಾರವೇ ಗೋಮುಖ ಗೋಶಾಲೆಯ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ದಾರಿಯ ಸಮಸ್ಯೆಯ ವಿಚಾರಕ್ಕೆ ತುರ್ತುಕ್ರಮಕ್ಕೆ ದೂರು ನೀಡಿದ್ದಾರೆ. ಜು.೬ರಂದು ಮಧುಗಿರಿ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಮತ್ತು ಕೊರಟಗೆರೆ ತಹಶೀಲ್ದಾರ್ ಭೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದರೂ ಕೂಡು ದಾರಿಯ ಸಮಸ್ಯೆಯು ಹಾಗೆಯೇ ಉಳಿದು ರಾಸುಗಳಿಗೆ ಕಂಟಕ ಎದುರಾಗಿದೆ.

20ಕ್ಕೂ ಅಧಿಕ ರಾಸುಗಳ ದಾರುಣ ಸಾವು

ಸಮರ್ಪಕ ಪೋಷಣೆ ಮತ್ತು ನಿರ್ವಹಣೆ ಇಲ್ಲದೇ ಅನಾರೋಗ್ಯ ಹೆಚ್ಚಾಗಿ ಕಳೆದ 30ದಿನದಿಂದ 12 ರಾಸುಗಳು ಮೃತಪಟ್ಟಿವೆ. ಕಳೆದ ವಾರದಿಂದ ಗೋಶಾಲೆಗೆ ಆಗಮಿಸಲು ದಾರಿಯಿಲ್ಲದೇ ಮೇವು-ನೀರು ಕೊರತೆಯಿಂದ ೮ರಾಸುಗಳು ದಾರುಣವಾಗಿ ದೊಡ್ಡಿಯಲ್ಲಿಯೇ ಸತ್ತಿವೆ. ಇದಲ್ಲದೇ ಗೋಮುಖ ಗೋಶಾಲೆಯ ಸುತ್ತಲು ಸ್ಥಳೀಯರು ಚರಂಡಿ ತೆಗೆದು ರಾಸುಗಳಿಗೆ ದಿಗ್ಭಂಧನ ಹಾಕಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇನೀಡಿ ಗಡಿರೇಖೆಯ ದಾರಿಗೆ ತುರ್ತಾಗಿ ಪರಿಹಾರ ನೀಡಿ ರಾಸುಗಳ ಸಾವು ತಡೆಯಬೇಕಿದೆ.

ದಲಿತ ರೈತರಿಗೆ ಅರ್ಧಹಣ ನೀಡಿ ಖಾಲಿ ಚೇಕ್ ನೀಡಿ ಮೋಸಮಾಡಿ ಜಮೀನು ಪಡೆದಿದ್ದಾರೆ. ರೆಡ್ಡಿಯಲ್ಲಿ ಕೆರೆಯಲ್ಲಿ20 ಕ್ಕೂ ರಾಸುಗಳ ಮೃತದೇಹ ತೇಲುತ್ತಿದೆ. ಪ್ರತಿನಿತ್ಯವು ಐದಾರು ರಾಸುಗಳು ಕಾರಣವೇ ಇಲ್ಲದೇ ಸಾಯುತ್ತಿವೆ. ನಮ್ಮ ಮುತ್ತಾತ ಕಾಲದಿಂದ ಉಳುಮೆ ಮಾಡಿಕೊಂಡು ಬಂದ ಜಮೀನು ನಮ್ಮದು. ನಾನು ಉಳುಮೆ ಮಾಡುತ್ತಿರುವ ಜಮೀನಿಗೆ ಬೌಂಡರಿ ಮಾಡಿಸಿದ್ದು ಸತ್ಯ. ಈ ಗೋಶಾಲೆ ನಮ್ಮೂರಿಗೆ ಅಗತ್ಯವಿಲ್ಲ.- ವೆಂಕಟೇಶಯ್ಯ. ಸ್ಥಳೀಯ ರೈತ. ರೆಡ್ಡಿಹಳ್ಳಿ

ಗೋಮಾಳದ ಜಮೀನಿನ ದಾರಿ ಮುಚ್ಚಿದ ಪರಿಣಾಮ ಗೋಶಾಲೆಯ ರಾಸುಗಳಿಗೆ ¸ ವಾರದಿಂದ ಮೇವು ಮತ್ತು ನೀರು ಪೂರೈಸಲು ಆಗುತ್ತಿಲ್ಲ. ಗೋಮಾಳದ ಜಮೀನಿನ ರಸ್ತೆಗೆ ಹಣ ನೀಡಿದ್ರೇ ದಾರಿ ಬಿಡ್ತಾರಂತೆ. ಜಿಲ್ಲಾಧಿಕಾರಿ ಮತ್ತು ಮಧುಗಿರಿ ತಹಶೀಲ್ದಾರ್‌ಗೆ ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ. ಮೇವು ಮತ್ತು ನೀರು ಸರಬರಾಜು ಇಲ್ಲದೇ ಪ್ರತಿನಿತ್ಯ ರಾಸುಗಳು ಸಾಯುತ್ತಿವೆ. ದಯವಿಟ್ಟು ಸಮಸ್ಯೆ ಸರಿಪಡಿಸಿ ಕೋಡಬೇಕಿದೆ.- ಮಲ್ಲಿಕಾರ್ಜುನ್. ಅಧ್ಯಕ್ಷ. ಗೋಮುಖ ಗೋಶಾಲೆ.

ಗೋಶಾಲೆಗೆ ಮೇವು ಮತ್ತು ನೀರು ಪೂರೈಕೆಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಸರಕಾರಿ ಗೋಮಾಳದ ರಸ್ತೆ ಕಡಿತ ಮಾಡದಂತೆ ರೆಡ್ಡಿಯ ರೈತನಿಗೆ ಎಚ್ಚರಿಕೆ ನೀಡಲಾಗಿದೆ. ಗೋಶಾಲೆಯ ರಾಸುಗಳಿಗೆ ಹೆಚ್ಚಿನ ಚಿಕಿತ್ಸೆಗೆ ನೀಡುವಂತೆ ಪಶು ವೈದ್ಯರಿಗೆ ತಿಳಿಸಲಾಗಿದೆ. ರಾಸುಗಳ ರಕ್ಷಣೆ ಮತ್ತು ಪೋಷಣೆಯ ಬಗ್ಗೆ ಮಾಹಿತಿ ನೀಡುವಂತೆ ಈಗಾಗಲೇ ಟ್ರಸ್ಟ್ ಅಧ್ಯಕ್ಷರಿಗೆ ಸೂಚಿಸಿದ್ದೇನೆ. -ಮುನಿಶಾಮಿರೆಡ್ಡಿ. ತಹಶೀಲ್ದಾರ್. ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next