Advertisement

ಕೊರಟಗೆರೆ : ಉಪಯೋಗಕ್ಕೆ ಬಾರದೇ ಪಾಳು ಬಿದ್ದ ಪ್ರವಾಸಿ ಮಂದಿರ ಮತ್ತು ವಸತಿಗೃಹ ಕಟ್ಟಡ

07:45 PM Jul 26, 2022 | Team Udayavani |

ಕೊರಟಗೆರೆ : ತಾಲೂಕಿನ ಇತಿಹಾಸ ಪ್ರಸಿದ್ಧಿ ಪಡೆದ ಸಿದ್ದರಬೆಟ್ಟದ ಪ್ರವಾಸಿ ಮಂದಿರ ಮತ್ತು ವಸತಿಗೃಹ ಕಟ್ಟಡಗಳು ಉಪಯೋಗಕ್ಕೆ ಬಾರದಂತಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಪ್ರವಾಸಿ ಮಂದಿರ ಹಾಗೂ ವಸತಿ ಗೃಹಗಳನ್ನು ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅನುದಾನದಲ್ಲಿ ನಿರ್ಮಿಸಲಾಗಿತ್ತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಖಂಡ ರಾಧ್ಯ ಮಾತನಾಡಿ 1954- 55 ರಲ್ಲಿ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಿ ಪ್ರವಾಸಿ ಮಂದಿರವನ್ನು ವಿಐಪಿಗಳಿಗೆ ನಿರ್ಮಿಸಲಾಗಿತ್ತು. ಹಾಗೂ ಸುಮಾರು 30 ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಿಂದ ಭಕ್ತಾದಿಗಳಿಗೆ ಉಳಿದುಕೊಳ್ಳಲು ನಿರ್ಮಿಸಲಾಗಿದ್ದ ವಸತಿಗೃಹಗಳು ಈಗ ಉಪಯೋಗಕ್ಕೆ ಬಾರದೇ ಪಾಳು ಬಿದ್ದಾಗಿದೆ. ಎಂದು ಹೇಳಿದರು.

ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಹೋಗಿದ್ದು ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವ ಎಲ್ಲಾ ಕಟ್ಟಡವನ್ನು ದುರಸ್ತಿ ಮಾಡಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರೆ ಒಳ್ಳೆಯದು ಎಂದು ಊರಿನ ಗ್ರಾಮಸ್ಥರು ಹಾಡುವ ಮಾತಾಗಿದೆ.

Advertisement

ಇನ್ನಾದರೂ ಮುಜರಾಯಿ ಇಲಾಖೆಯವರು ಇಲ್ಲಿರುವ ಕಟ್ಟಡಗಳ ಬಗ್ಗೆ ಗಮನಹರಿಸಿ ಇಲ್ಲಿಗೆ ಬರುವಂತಹ ಭಕ್ತಾದಿಗಳಿಗೆ. ರಾತ್ರಿಯ ಸಮಯದಲ್ಲಿ ಉಳಿದುಕೊಳ್ಳಲು ಈ ಕಟ್ಟಡವನ್ನು ಆದಷ್ಟು ಬೇಗ ಸ್ವಚ್ಛ ಮಾಡಿದರೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ. ಎಂಬುದು ಪ್ರಜ್ಞಾವಂತರ ಹೇಳಿಕೆಯಾಗಿದೆ.

ಅಕ್ರಮ ಚಟುವಟಿಕೆಗಳ ತಾಣ

ಕರೆಂಟ್ ಇಲ್ಲದೆ ಕಟ್ಟಡಗಳು ಕತ್ತಲಾಗಿವೆ. ಗುಟ್ಕಾ ಪ್ಯಾಕೇಟ್, ಚಾಕೋಲೆಟ್ ಕವರ್ ಸರಿಯಾದ ನಿರ್ವಹಣೆಯಿಲ್ಲದೆ ಕಟ್ಟಡದ ಕಿಟಿಕಿ ಬಾಗಿಲುಗಳು ಮುರಿದು ಹೋಗಿದ್ದು ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ. ಕಟ್ಟಡದ ಹಿಂಬದಿಯ ಬಾಗಿಲು ಮತ್ತು ಶೌಚಾಲಯದ ಬಾಗಿಲುಗಳು ಮುರಿದಿದ್ದು , ರಾತ್ರಿ ವೇಳೆಗೆ ಪಾಳು ಬಿದ್ದ ಕಟ್ಟಡದಲ್ಲಿ ಅನೈತಿಕ ಮತ್ತು ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ ಎಂದು ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿದೆ.

– ವಿಜಯ್ ಕುಮಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬೂದಗವಿ ಗ್ರಾಮ ಪಂಚಾಯಿತಿ

ಹಿಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ನಿರ್ಮಾಣ ವಾದಂತಹ ವಸತಿ ಗೃಹಗಳು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲವಾಗಿವೆ. ನಾವು ಸಹ ತಾಲೂಕು ದಂಡಾಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ತಿಳಿಸಿದ್ದೇನೆ. ಆದರೆ ದಂಡಧಿಕಾರಿಗಳಿಂದ ಯಾವುದೇ ಮಾಹಿತಿ ಇನ್ನು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next