Advertisement

ಕೊರಟಗೆರೆ: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯ ನಾಶ

07:11 PM Mar 06, 2023 | Team Udayavani |

ಕೊರಟಗೆರೆ: ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು, ಮಾರ್ಚ್ 6, ಸೋಮವಾರ ಪಟ್ಟಣ ಪಂಚಾಯತ್ ಗೆ ಸೇರಿದ ಬೋಡ ಬಂಡೇನಹಳ್ಳಿ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಮಾಡಲಾಯಿತು.

Advertisement

ಮಧುಗಿರಿ ಉಪ ವಿಭಾಗದ ಅಬಕಾರಿ ಉಪ ಅದೀಕ್ಷಕರಾದ ಚಂದ್ರಪ್ಪನವರ‌ ನೇತೃತ್ವದಲ್ಲಿ,ಕೊರಟಗೆರೆ ವಲಯದ ಅಬಕಾರಿ ನೀರೀಕ್ಷಕರಾದ ಶ್ರೀ ಲತಾ .ಬಿ,ಕಂದಾಯ ಇಲಾಖೆಯ ಗ್ರೇಡ್-2 ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ತುಮಕೂರಿನ ಕೆಎಸ್ ಬಿ ಸಿಎಲ್ ಡಿಪೋದ ಪ್ರಥಮ ದರ್ಜೆ ಸಹಾಯಕ ನಾರಯಣ್ .ಕೆ ರವರ ಸಮ್ಮುಖದಲ್ಲಿ ಮದ್ಯವನ್ನು ನಾಶಪಡಿಸಲಾಯಿತು.

ಮಧುಗಿರಿ ಉಪ ವಿಭಾಗದ ಅಬಕಾರಿ ಉಪ ಅದೀಕ್ಷಕ ಚಂದ್ರಪ್ಪ ಮಾತನಾಡಿ ಕೊರಟಗೆರೆ ವಲಯದ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಿವಿಧ ಘೋರ ಪ್ರಕರಣಗಳಲ್ಲಿ ವಶಪಡಿಸಿಕೊಂಡು, ಸರ್ಕಾರಕ್ಕೆ‌ಮುಟ್ಟುಗೋಲು ಹಾಕಿಕೊಂಡಿರುವ 139.34 ಲೀ ಮದ್ಯ,13.408ಲೀ‌ ಬಿಯರ್ ಹಾಗೂ 9ಲೀ ಸೇಂದಿಯನ್ನು ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶಪಡಿಸಲಾಯಿತು.

ಈ ಸಂಧರ್ಭದಲ್ಲಿ ಉಪವಿಭಾಗದ ಅಬಕಾರಿ ನಿರೀಕ್ಷಕ ನಾಗರಾಜು.ಹೆಚ್ ಕೆ,ಅಬಕಾರಿ ನಿರೀಕ್ಷಕಿ ಶ್ರೀ ಲತಾ .ಬಿ, ಗ್ರೇಡ್ -2 ತಹಶೀಲ್ದಾರ್ ನರಸಿಂಹಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಪ್ರಭಾಕರ್ ಗ್ರಾಮ ಲೆಕ್ಕಿಗ ಬಸವರಾಜು ಪೇದೆ ಮಂಜುಳಾ, ಮಲ್ಲಿಕಾರ್ಜುನ ಮೊರಾಖಂಡಿ, ವಾಹನ ಚಾಲಕ ಮಧು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next