Advertisement

ಉಳಿತಾಯ ಬಜೆಟ್ ಮಂಡಿಸಿದ ಪಟ್ಟಣ ಪಂಚಾಯತ್ ಅಧ್ಯಕ್ಷೆ ಕಾವ್ಯಶ್ರೀ

07:46 PM Mar 14, 2023 | Team Udayavani |

ಕೊರಟಗೆರೆ; ಪಟ್ಟಣದ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳೊಂದಿಗೆ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಪ.ಪಂ. ಅಧ್ಯಕ್ಷೆ ಕಾವ್ಯಶ್ರೀ ತಿಳಿಸಿದ್ದಾರೆ.

Advertisement

ಕೊರಟಗೆರೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿಯ 2023-24ನೇ ಸಾಲಿನಲ್ಲಿ ನೀರಿಕ್ಷೆ ಮಾಡಲಾದ ಆದಾಯ ಹಾಗೂ ಖರ್ಚುಗಳ ವಿವರದ ಬಜೆಟ್ ಮಂಡಿಸಿದ ಅವರು 2023 ನೇ ಸಾಲಿನ ನಿರೀಕ್ಷಿತ ಆದಾಯ 2,24,44,876 ಹಾಗೂ ಸರ್ಕಾರದಿಂದ ನಿರೀಕ್ಷಿಸುವ ಆನುದಾನ 14,85,72,255 ಆದಾಯ ಸೇರಿದಂತೆ ಒಟ್ಟು 17,10,17,131 ರೂಗಳ ಆದಾಯವಾಗಿದ್ದು ಒಟ್ಟು ನಿರೀಕ್ಷಿತ ಖರ್ಚು 17,05,76,142 ರೂಗಳಾಗಿದ್ದು 4.40.989 ಉಳಿತಾಯವಾಗಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳಲ್ಲಿ ಪುಟ್‌ಬಾತ್ ನಿರ್ಮಾಣ ಕಾವಗಾರಿ ಕೈಗೆತ್ತುಕೊಳ್ಳುವ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ 1,70,00,000 ರೂಗಳನ್ನು ರಸ್ತೆ ಬದಿಯ ಚರಂಡಿ, ಮಳೆ ನೀರು ಚರಂಡಿಗಳ ಕಾಮಗಾರಿಗೆ 2 ಕೋಟಿ, ಸಾರ್ವಜನಿಕ ಶೌಚಾಲಯಗಳ ಕಾಮಗಾರಿಗೆ 30 ಲಕ್ಷ ರೂಗಳಲ್ಲಿ ಕಾಮಗಾರಿಗೆ ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಸಬೆಯಲ್ಲಿದ್ದ ಸದಸ್ಯರು ಮಾತನಾಡಿ ಪಟ್ಟಣದಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳು ಕಳಪೆ ಮಟ್ಟದ್ದು ಎಂಬ ಸಾರ್ವಜನಿಕರ ದೂರು ಕೆಳಿಬರುತ್ತಿದ್ದು ಅಧ್ಯಕ್ಷರು ಉಪಾಧ್ಯಕ್ಷರು ಮುಖ್ಯಾಧಿಕಾರಿಗಳೊಂದಿಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಗುತ್ತಿಗೆ ದಾರರಿಗೆ ಉತ್ತಮ ಗಣಮಟ್ಟಕ್ಕೆ ತಾಕೀತು ಮಾಡಬೇಕೆಂದು ಹಾಗೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲವಾದ ಹಿನ್ನೆಲೆಯಲ್ಲಿ ನಿರ್ವಹಣೆಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

ಬಜೆಟ್ ಮಂಡನೆ ಸಮಯದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭಾಗ್ಯಮ್ಮ ಬಜೆಟ್ ವಿವಿರಗಳನ್ನು ಓದಿ ಮಂಡಿಸಿದ ನಂತರ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುಮೋದಿಸಿದರು. ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಕಾವ್ಯಶ್ರೀ ಸೇರಿದಂತೆ ಉಪಾಧ್ಯಕ್ಷೆ ಕೆ.ವಿ.ಭಾರತಿ, ಸದಸ್ಯರುಗಳಾದ ಎ,ಡಿ.ಬಲರಾಮಯ್ಯ, ಕೆ.ಎನ್.ನಟರಾಜು, ಕೆ.ಆರ್.ಓಬಳರಾಜು, ಕೆ.ಎನ್.ಲಕ್ಷ್ಮೀನಾರಾಯಣ್, ಹೆಚ್.ಎಸ್.ಪ್ರದೀಪ್‌ ಕುಮಾರ್, ಪುಟ್ಟನರಸಪ್ಪ, ನಾಗರಾಜು, ಕೆ.ಎನ್.ನಂದೀಶ್, ಹುಸ್ನಾಫಾರಿಯಾ, ಕೆ.ಓಅನಿತಾ, ಮಂಜುಳಾ, ಎಸ್. ಹೇಮಲತಾ, ನಾಮಿನಿ ಸದಸ್ಯರಾದ ಪ್ರೇಮ್‌ಕುಮಾರ್, ಗೋವಿಂದರಾಜು, ರಂಗನಾಥ್, ಮುಖ್ಯಾಧಿಕಾರಿ ಭಾಗ್ಯಮ್ಮ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: ಹೊಸ ರಾಜ್ಯ ರಚನೆಗೆ ಸರ್ಕಾರದ ಪರಿಗಣನೆಯಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ: ಕೇಂದ್ರ ಸರ್ಕಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next