Advertisement

Koratagere: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

09:53 PM Aug 10, 2023 | Team Udayavani |

ಕೊರಟಗೆರೆ: ವೈದ್ಯರು ಸಮಯಕ್ಕೆ ಬಾರದೇ ಪ್ರತಿದಿನ ಚಿಕಿತ್ಸೆ ಪಡೆದುಕೊಳ್ಳಲಾಗದೇ ಯಾರ ಬಳಿಯೂ ಈ ಸಮಸ್ಯೆಯನ್ನು ಹೇಳಲಾಗದೇ ನೋವಿನಿಂದಲೇ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿರುವುದು ಬಡವರ ಪಾಲಿಗೆ ಕಷ್ಟಕರವಾಗಿದೆ ಎಂದು ಸಾರ್ವಜನಿಕರ ಆರೋಪ ಬಹುದೊಡ್ಡದಾಗಿ ಕೇಳಿ ಬರುತ್ತಿದೆ.

Advertisement

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮಸ್ಯೆ ಸಾರಮಾಲೆ ಎದ್ದು ಕಾಣುತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಢನಿದ್ರೆಗೆ ಜಾರಿರುವುದು ವಿಪರ್ಯಾಸವೇ ಸರಿ…

ತಮ್ಮ ಪ್ರತಿನಿತ್ಯದ ಕರ್ತವ್ಯಕ್ಕೆ ಸುಮಾರು10.30 ಕ್ಕೆ ಹಾಜರಾಗುವ ವೈದ್ಯರು ಕೆಲ ಗಂಟೆಗಳ ಕಾಲ ರೋಗಿಗಳಿಗೆ ಚಿಕಿತ್ಸೆ ನೀಡುವುದು ಸರಿಯಷ್ಟೇ.
ಆದರೆ ಊಟ ಸಮಯ 2ಗಂಟೆಗೆ ತಮ್ಮ ಕೊಠಡಿಯಿಂದ ತೆರಳಿ ಸಂಜೆ 4ರ ಸಮಯವಾದರೂ ವೈದ್ಯರು ಬರುವುದಿಲ್ಲ. ನಾವು ಅವರ ಈಗ ಬರುವರು ಎಂದು 4-5 ತಾಸು ಕಾಯುತ್ತಿದ್ದರು ಬರುವುದಿಲ್ಲ.

ವೈದ್ಯೋನಾರಾಯಣೋ ಹರಿ ಎಂಬಂತೆ ನಾವು ಅವರಿಗೆ ಗೌರವ ನೀಡಿ ನಮ್ಮ ಖಾಯಿಲೆ ಗುಣಪಡಿಸುವವರು ಎಂದು ನೋವಿನಿಂದ ಬಳಲುತ್ತಿದ್ದರೂ ಡಾಕ್ಟರ್ ಮಾತ್ರ ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ವಹಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಪ್ರತಿ ವಾರಕ್ಕೊಮ್ಮೆ ವೈದ್ಯರಿಗೆ ಸಾಮಾನ್ಯ ಸಭೆ ಇರುವುದು ಸರಿ. ಇದನ್ನೇ ದುರ್ಬಳಕೆ ಮಾಡಿಕೊಂಡ ಕೆಲ ವೈದ್ಯರು ತಮ್ಮ ಕರ್ತವ್ಯ ಪ್ರಜ್ಞೆ ಮರೆತು ಮಾನವೀಯ ಮೌಲ್ಯಗಳನ್ನು ಹಳ್ಳಕ್ಕೆ ತಳಿರುವುದಂತು ಬಹಳ ರೋಗಿಗಳಿಗೆ ತೊಂದರೆಯಾಗಿದೆ.

Advertisement

ಒಬ್ಬ ವೈದ್ಯರಿಗೆ ನೂರಾರು ರೋಗಿಗಳು ತಮ್ಮ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬಂದರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮಾತ್ರ ನಮಗೇನು ಬೇರೆ ಕೆಲಸಗಳಿಲ್ಲವಾ, ನಿಮ್ಮನ್ನ ನೋಡೋದು ಬಿಟ್ಟರೆ ಬೇರೆ ಕೆಲಸಗಳಿಲ್ಲವಾ ಎಂಬ ಉಡಾಫೆ ಉತ್ತರ ನೀಡುತ್ತಾರೆ‌ ಎಂಬ ಮಾತುಗಳು ಕೇಳಿಬರುತ್ತಿವೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಸಾರ್ವಜನಿಕರಿಗೆ ಕಿರಿಕಿರಿ…

ಆಸ್ಪತ್ರೆಗೆ ಬರುವ ರೋಗಿಗಳು ತಮ್ಮ ದ್ವಿಚಕ್ರ ವಾಹನದ ಮೂಲಕ ದೂರದೂರುಗಳಿಂದ ಬರುವವರಿಗೆ ಈ ಸಮಸ್ಯೆ ತಲೆನೋವಾಗಿದೆ.

ಆಸ್ಪತ್ರೆಯ ವೈದ್ಯರ ವಾಹನಗಳ ನಿಲುಗಡೆ ಕಾಂಪೌಂಡ್ ಒಳಾಂಗಣದಲ್ಲಿ ನಿಲ್ಲಿಸುತ್ತಾರೆ. ಅದನ್ನು ಒರೆತುಪಡಿಸಿ ಆಸ್ಪತ್ರೆಗೆ ಬರುವವರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಾಗಿದೆ. ಪ್ರತಿ ಮಂಗಳವಾರ ಬರುವ ವಿಶೇಷ ವೈದ್ಯರಿಗೂ ವಾಹನ ನಿಲುಗಡೆ ಸಾಧ್ಯವಾಗುತ್ತಿಲ್ಲ ಎಂಬುದು ದಟ್ಟವಾದ ಸಮಸ್ಯೆ ಎದುರಿಸುತ್ತಿರುವುದು ಕೆಲ ಪ್ರತ್ಯಕ್ಷದರ್ಶಿಗಳ ಮಾತು.

ಆಸ್ಪತ್ರೆಗೆ ಬರುವ ರೋಗಿಗಳ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ವಿಲ್ಲದೇ ಎಲ್ಲೋ ದೂರದಲ್ಲಿ ವಾಹನ ನಿಲ್ಲಿಸಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ‌ವಾಹನಗಳಿಗೆ ಕಳ್ಳತನವಾಗುವ ದುಗುಡ ಕಾಡುತ್ತಿದೆ. ಆಸ್ಪತ್ರೆ ಆವರಣದಲ್ಲಿ ನಿಲುಗಡೆ ನಿಷೇಧ ಎಂದು ನಾಮಫಲಕ ಹಾಕಿದ್ದು, ಸೆಕ್ಯುರಿಟಿ ವಾಹನಗಳನ್ನು ನಿಲ್ಲಿಸಲು ಬಿಡುತ್ತಿಲ್ಲ.

ಆಸ್ಪತ್ರೆ ಆಡಳಿತಾಧಿಕಾರಿ ಪುಷ್ಪಲತಾ ಮಾತನಾಡಿ ಹೊರಗಡೆ ಔಷಧಿ ಯಾವ ಡಾಕ್ಟರ್ ಬರೆಯುತ್ತಿದ್ದಾರೆ ಎಂದು ದೂರು ನೀಡಿದರೆ ಕ್ರಮ ತಗೆದುಕೊಳ್ಳುತ್ತೇನೆ‌. ನಮ್ಮಲ್ಲಿ ವಾಹನ ನಿಲುಗಡೆಗೆ ಜಾಗ ಕೊರತೆ ಇದೆ ಆಸ್ಪತ್ರೆಯ ಗೇಟಿನ ಮುಂಭಾಗದಲ್ಲೆ ವಾಹನಗಳು ನಿಲುಗಡೆ ಮಾಡುತ್ತಿರುವುದರಿಂದ ಅತ್ಯಂತ ಕಿರಿ ಕಿರಿ ಆದ್ದರಿಂದ ವಾಹನಗಳ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಹುಡುಕಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಕಟ್ಟಡ ನಿರ್ಮಾಣಕ್ಕೆ ಮಾನ್ಯ ಸಚಿವರು ಜಾಗ ಗುರುತಿಸಿಕೊಟ್ಟಿದ್ದಾರೆ. ಆದು ಇನ್ನೂ ಕೆಲ ದಿನಗಳಲ್ಲಿ ಪ್ರಾರಂಭವಾಗಲಿದೆ. ಸ್ಥಳೀಯ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಈ ಪಾರ್ಕೀಂಗ್ ವ್ಯವಸ್ಥೆ ಸರಿ ಇಲ್ಲದಿರುವುದರ ಬಗ್ಗೆ ತಿಳಿಸಿದ್ದೇನೆ. ಸುಮಾರು ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡಿದರೂ ಪ್ರಯೋಜವಾಗಿಲ್ಲ ಇದನ್ನೂ ಹೇಗೆ ನಿಭಾಯಿಸಬೇಕು ಎಂಬುದು ತಿಳಿಯುತ್ತಿಲ್ಲ ಎಂದರು.

ಒಂದು ವಾರದ ಹಿಂದೆ ನಾನು ಆಸ್ಪತ್ರೆಗೆ ಬಂದಿದ್ದೆ. ಊಟಕ್ಕೆ ಹೋದ ಡಾಕ್ಟರ್ 4ಗಂಟೆ ಸಮಯವಾದರೂ ಬರಲಿಲ್ಲ. ಅನೇಕ ರೋಗಿಗಳು ಕ್ಯೂ ನಲ್ಲಿ ನಿಂತು ಡಾಕ್ಟರ್ ಗಾಗಿ ಕಾಯುತ್ತಿದ್ದರು. ನಂತರ ನಾನು ಅವರ ವಿಶ್ರಾಂತಿ ಕೊಠಡಿ ಹತ್ತಿರ ಹೋದಾಗ ಕೆಲ ಡಾಕ್ಟರ್ ಗಳು ಮೊಬೈಲ್ ಬಳಕೆಯಲ್ಲಿ ಬ್ಯುಸಿಯಾಗಿ ಹರಟೆಯಲ್ಲಿ ನಿರತರಾಗಿದ್ದರು.ಆದರೆ ಈ ವೈದ್ಯರಿಗೆ ಬಡರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಸರಕಾರದ ಕೆಲಸ ಸಮಯ ವ್ಯರ್ಥ ಮಾಡುತ್ತಿದ್ದರು. ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ಹದಗೆಟ್ಟಿದ್ದು ಅಂಬ್ಯುಲೆನ್ಸ್ ಗಳಿಗೂ ಒಳಬರಲು ಜಾಗವಿಲ್ಲದೆ ವಾಹಗಳ ದಟ್ಟನೆ ಹೆಚ್ಚಾಗಿದೆ.
– ದಾದಪೀರ್, ಸಾರ್ವಜನಿಕ

ನಮ್ಮ ಆಸ್ಪತ್ರೆಯ ಕುಂದು ಕೊರತೆಯವ ಸಭೆಯ ಕಾರಣ ತೊಂದರೆಯಾಗಿದೆ. ಮಕ್ಕಳ ಡಾಕ್ಟರ್ ರಜೆಯಲ್ಲಿದ್ದರು. ಕೆಲ ಡಾಕ್ಟರ್ ಆಪರೇಷನ್ ಕೊಠಡಿಯಲ್ಲಿರುವ ಕಾರಣ ಇಬ್ಬರು ಡ್ಯೂಟಿ ಡಾಕ್ಟರ್ ಚಿಕಿತ್ಸೆ ನೀಡುತ್ತಾರೆ. ಡಾಕ್ಟರ್ ಇಲ್ಲದ ಸಮಸ್ಯೆ ಇದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡಿ ಇಲ್ಲವಾದರೆ ಕರೆ ಮಾಡಿ ನಿಮಗೆ ನಾನು ಸ್ಪಂದಿಸುತ್ತೇನೆ.
– ಡಾ. ಪುಷ್ಪಲತಾ ಆಡಳಿತಾಧಿಕಾರಿ

ನಮ್ಮ ಮಾವನವರು ತುಂಬಾ ಕಿವಿ ನೋವು ಎಂದು ಬಳಲುತ್ತಿದ್ದರು. ಬೆಳಗ್ಗೆ 11ಗಂಟೆಗೆ ಆಸ್ಪತ್ರೆಗೆ ಬಂದರೂ ಡಾಕ್ಟರ್‌ ಇರಲ್ಲಿಲ್ಲ ಅಲ್ಲಿದ್ದವರಿಗೆ ವಿಚಾರಿಸಿದಾಗ ನನ್ನಂತೆಯೇ ಸುಮಾರು ಜನ ಕಾಯ್ದು ಕುಳಿತಿದ್ದರು. ಕಿವಿನೋವು ಜಾಸ್ತಿಯಾಗಿ ಅವರಿಗೆ ಜ್ವರವೇ ಬಂದಿತ್ತು, ನಂತರ 4ಗಂಟೆಗೆ ಬಂದ ಡಾಕ್ಟರ್ ಚಿಕಿತ್ಸೆ ನೀಡಿ ಕೆಲವೊಂದು ಔಷಧಿ ಅಲ್ಲಿಯೇ ನೀಡಿದ್ದರು ಇನ್ನೂಳಿದ ಔಷಧಿಯನ್ನು ಹೊರಗಡೆ ತಗೆದುಕೊಳ್ಳಿ ಎಂದರು. ಇಲ್ಲಿನ ಜನರ ಸಮಸ್ಯೆಗಳ ಕೇಳೋರು ಇಲ್ಲ, ಹೇಳೋರು ಇಲ್ಲ
– ಭೀಮರಾಜು, ರೋಗಿಯ ಸಂಬಂಧಿ.

Advertisement

Udayavani is now on Telegram. Click here to join our channel and stay updated with the latest news.

Next