Advertisement

ಕೊರಟಗೆರೆ : ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲು ತಹಶಿಲ್ದಾರ್ ಸೂಚನೆ

07:35 PM Jan 19, 2022 | Team Udayavani |

ಕೊರಟಗೆರೆ : ಜನವರಿ 26 ರಂದು ನಡೆಯುವ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ದಿನಾಚರಣೆಯನ್ನು ಕೋವಿಡ್ 19ರ ಕಟ್ಟುನಿಟ್ಟಿನ ನಿಯಮದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದು ತಹಶಿಲ್ದಾರ್ ನಾಹೀದಾ ಜಮ್ ಜಮ್ ತಿಳಿಸಿದರು.

Advertisement

ಅವರು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಎಲ್ಲಾ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸುವಾಗ ಸರ್ಕಾರದ ಕೋವಿಡ್19 ನಿಯಮದಂತೆ ವೇದಿಕೆಯನ್ನು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸುವುದರೊಂದಿಗೆ ಶಾಸಕರರೊಂದಿಗೆ ಆಹ್ವಾನಿತರಿಗೆ ಮಾತ್ರ ಅವಕಾಶವನ್ನು ನೀಡಲಾಗುವುದು. ವೇದಿಕೆ ಮತ್ತು ಸಮಾರಂಭದಲ್ಲಿ ಆಸನ ವ್ಯವಸ್ಥೆ ಮಾಡಲಾಗುತ್ತದೆ.ಕೋವಿಡ್ ಹೆಚ್ಚುವುದರಿಂದ ಶಾಲಾ ಮಕ್ಕಳಿಗೆ ಈ ದಿನಾಚರಣೆಯಲ್ಲಿ ಭಾವಹಿಸುವುದು ಬೇಡವೆಂದು ಹಾಗೂ ಸರಳವಾಗಿ ಆಚರಿಸಲು ತಿರ್ಮಾನಿಸಿದೆ. ಅದರೆ ರಾಷ್ಟ್ರೀಯ ಹಬ್ಬಗಳಿಗೆ ಕೇವಲ ಇಲಾಖಾ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಿದ್ದು ಇಲಾಖೆಗೆ ಸಂಭಂದಿಸಿದ ಸಿಬ್ಬಂದಿಗಳು, ಅಧಿಕಾರಿಗಳು ,ಶಿಕ್ಷಕರು, ಗೈರು ಹಾಜರಾಗುತ್ತಿರುವ ದೂರು ಬಂದ ಹಿನ್ನಲೆಯಲ್ಲಿ ಅಯಾ ಇಲಾಖೆಗಳಿಗೆ ಸಿಬ್ಬಂದಿಯೊಂದಿಗೆ ಹಾಜರಾಗುವಂತೆ ಆದೇಶಿಸಲಾಗಿದೆ ಎಂದರು.

ಕೋವಿಡ್ ತಡೆಯಲು ಕ್ರಮ : ಈಗಾಗಲೇ ಕೋವಿಡ್ ಮೂರನೇ ಅಲೆ ಪ್ರಾರಂಭವಾಗಿದ್ದುಸಭೆ, ಸಮಾರಂಭ, ಜಾತ್ರೆ, ಉರುಸ್ ಸೇರಿದಂತೆ ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಕೊರೊನಾ ಸೋಂಕಿತರನ್ನು ಅವರ ಮನೆಗಳಲ್ಲಿ ಐಸೋಲೇಷನ್ ಮಾಡಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಮಕ್ಕಳಿಗೂ ಹೆಚ್ಚು ಬರುತ್ತಿರುವುದರಿಂದ ಶಾಲೆಗಳಿಗೆ ಹೆಚ್ಚು ಜಾಗರೂಕತೆ ತೆಗೆದುಕೊಳ್ಳುಲು ತಿಳಿಸಲಾಗಿದೆ.15 ರಿಂದ17 ವರ್ಷದ ಮಕ್ಕಳಿಗೆ ಲಸಿಕಾಅಭಿಯಾನ ಚುರುಕುಗೊಳಿಸಲಾಗಿದೆ.

ಪಟ್ಟಣ,ಸೇರಿದಂತೆ ಹೋಬಳಿ ಕೇಂದ್ರಗಳಲ್ಲಿ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ, ವ್ಯಾಪಾರಿಗಳು ,ಗ್ರಾಹಕರು, ಮಾಸ್ಕ್ ಧರಿಸದೇ ಇರುವುದು ಕಂಡು ಬಂದಿದ್ದು ಹಾಗೂ ಸಾರ್ವಜನಿಕ ವಲಯದಲ್ಲಿ ದೂರುಗಳು ಬರುತ್ತಿವೆ.ಮುಂಬರುವ ದಿನಗಳಲ್ಲಿ ಕಂದಾಯ, ಪೋಲಿಸ್ ಇಲಾಖೆ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ಜೊತೆಗೂಡಿ ಮೊದಲು ವ್ಯಾಪಾರ, ವಾಣಿಜ್ಯ,ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸುವ ಕೆಲಸ ಪ್ರಾರಂಭಿಸಲಾಗುವುದು.ಸಾರ್ವಜನಿಕರು ಅದಕ್ಕೆ ಅಸ್ಪದ ನೀಡದೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next