Advertisement
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲೀಕುಂಟೆ ಸಮೀಪದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹೈಡ್ರಾಮ ನಡೆದಿದೆ. ವಸತಿ ಶಾಲೆಯಲ್ಲಿ 6 ರಿಂದ 10ತರಗತಿಯಲ್ಲಿ 250 ಜನ ಮಹಿಳಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತೀದ್ದಾರೆ. ಮಹಿಳಾ- 7 ಮತ್ತು ಪುರುಷ-4 ಶಿಕ್ಷಕರಿದ್ದಾರೆ. ಪ್ರತಿವರ್ಷವು ಸಹ ಹುಲೀಕುಂಟೆ ವಸತಿಶಾಲೆಗೆ ಉತ್ತಮ ಫಲಿತಾಂಶವು ಬರುತ್ತೀದೆ.
Related Articles
Advertisement
ಜಂಟಿ ನಿರ್ದೇಶಕಿ ಬೇಟಿ ಪರಿಶೀಲನೆ..ಹುಲೀಕುಂಟೆ ಕಿತ್ತೂರುರಾಣಿ ವಸತಿಶಾಲೆಗೆ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮಾ, ಜಿಲ್ಲಾ ಸಮನ್ವಯ ಅಧಿಕಾರಿ ಕಸ್ತೂರಿಕುಮಾರ್ ಬೇಟಿ ನೀಡಿ ಪ್ರಾಂಶುಪಾಲರು, ವಾರ್ಡನ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಗೆ ಕಲೆಹಾಕಿದ್ದಾರೆ. ಬೈಚಾಪುರ ಮತ್ತು ಹುಲೀಕುಂಟೆ ಎರಡು ಕಡೆಯಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಣೆ ಮಾಡುತ್ತೀರುವ ತಾರಾಗೆ ಎಚ್ಚರಿಕೆ ನೀಡಿ ಘಟನೆ ಮತ್ತೇ ಮರುಕಳಿಸದಂತೆ ಸೂಚನೆ ನೀಡಿದ್ದಾರೆ. ಪ್ರಾಂಶುಪಾಲರು ಮತ್ತು ಶಿಕ್ಷಕರು ನನ್ನ ಮೇಲೆ ವಿನಾಕಾರಣ ಪ್ರತಿನಿತ್ಯ ಮಾನಸಿಕ ಕಿರುಕುಳ ನೀಡುತ್ತೀದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರ ಊಟಕ್ಕೆ ಅವಕಾಶವಿದೆ. ಆದರೇ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಊಟ ನೀಡಬೇಕಂತೆ. ಊಟ ನೀಡದಿದ್ದಕ್ಕೆ ನನ್ನ ಮೇಲೆ ವಿದ್ಯಾರ್ಥಿಗಳ ಮೂಲಕ ಆರೋಪ ಮಾಡಿಸುತ್ತೀದ್ದಾರೆ.
– ತಾರಾ. ವಾರ್ಡನ್. ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ. ಹುಲೀಕುಂಟೆ ವಿದ್ಯಾರ್ಥಿಗಳಿಗೆ ಸಮರ್ಪಕ ಊಟ ನೀಡುವುದು ನಮ್ಮ ಕರ್ತವ್ಯ. ಊಟ ವಿಚಾರದಲ್ಲಿ ವಿದ್ಯಾರ್ಥಿಗಳು ನನಗೆ ದೂರು ನೀಡಿದ್ದಾರೆ. ನಾನು ಈಗಾಗಲೇ ಎರಡು ಸಲ ನೊಟೀಸ್ ಜಾರಿ ಮಾಡಿದ್ದೇನೆ. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೇದರಿಕೆ ಹಾಕಿದ್ದಾರೆ. ತುಮಕೂರು ಜಂಟಿ ನಿರ್ದೇಶಕಿ ಪ್ರೇಮಾ ಈಗಾಗಲೇ ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚಿಸಿದ್ದಾರೆ.
– ಜ್ಯೋತಿ. ಪ್ರಾಂಶುಪಾಲರು. ಕಿತ್ತೂರುರಾಣಿ ಚೆನ್ನಮ್ಮ ವಸತಿಶಾಲೆ. ಹುಲೀಕುಂಟೆ. ವಾರ್ಡನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸುತ್ತೇನೆ. ನಾನೇ ಖುದ್ದು ವಸತಿಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಊಟದ ವಿಚಾರದಲ್ಲಿ ವಿದ್ಯಾರ್ಥಿಗಳು ವಾರ್ಡನ್ ವಿರುದ್ದ ದೂರಿದ್ದಾರೆ. ವಿಷಕಾರದ ಔಷದಿಯುಳ್ಳ ಯಾವುದೇ ವಸ್ತುವನ್ನು ವಸತಿ ಶಾಲೆಯೊಳಗೆ ಶೇಖರಣೆ ಮಾಡುವ ಆಗಿಲ್ಲ. ಸಮರ್ಪಕ ತನಿಖೆಗೆ ಇಲಾಖೆಗೆ ಈಗಾಗಲೇ ಪತ್ರ ಬರೆದಿದ್ದೇನೆ.
– ಪ್ರೇಮಾ. ಜಂಟಿ ನಿರ್ದೇಶಕಿ. ಸಮಾಜ ಕಲ್ಯಾಣ ಇಲಾಖೆ. ತುಮಕೂರು