Advertisement

ಕೊರಟಗೆರೆ : ಸಿಡಿಲಿಗೆ ಒಂದು ಎಮ್ಮೆ,ಆರು ಮೇಕೆ ಸಾವು

09:45 PM May 10, 2022 | Team Udayavani |

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿಎಸ್ ಜಿ ಪಾಳ್ಯದ ರೈತ ಶಿವಲಿಂಗಯ್ಯ ನಿಗೆ ಸೇರಿದ ಆರು ಮೇಕೆಗಳು ಬಿರುಗಾಳಿ , ಭಾರಿ ಮಳೆ ಮತ್ತು ಗುಡುಗು ಸಿಡಿಲಿಗೆ ಬಲಿಯಾಗಿವೆ.

Advertisement

ಇದೇ ರೀತಿ ಮತ್ತೋರ್ವ ಚನ್ನರಾಯನದುರ್ಗ ಹೋಬಳಿಯ ಸೂರೇನಹಳ್ಳಿ ಗ್ರಾಮದ ರೈತ ಚಂದ್ರಶೇಖರ್ ರವರಿಗೆ ಸೇರಿದ ಒಂದು ಎಮ್ಮೆಯು ಮೃತಪಟ್ಟಿದೆ.

ಘಟನಾ ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದನಗೌಡ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ್ದಾರೆ. ಹಾಗೂ ಇಲಾಖೆಯಿಂದ ಬರುವ ಪರಿಹಾರ ಧನಕ್ಕೆ ಜಿಪಿಎಸ್ ಮೂಲಕ ಸರ್ಕಾರಕ್ಕೆ ಕಳುಹಿಸಿದದ್ದಾರೆ.

ಸಂದರ್ಭದಲ್ಲಿ ತಹಶಿಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ ಕಂದಾಯ ಇಲಾಖೆಯಿಂದ ಬರುವ ಪರಿಹಾರ ಧನವನ್ನು ಪ್ರಥಮ ವರ್ತಮಾನ ವರದಿ ಬಂದ ತಕ್ಷಣ ರೈತರಿಗೆ ಪರಿಹಾರ ಧನವನ್ನು ವಿತರಿಸಲಾಗುವುದು ಎಂದರು.

ಇದನ್ನೂ ಓದಿ : ದಾರ್ಶನಿಕರ ಆದರ್ಶಗಳನ್ನು ಸಾರುವುದೇ ಜಯಂತೋತ್ಸವದ ಮೂಲ ಉದ್ದೇಶ: ತಹಶೀಲ್ದಾರ್ ಕೆ.ಚಂದ್ರಮೌಳಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next