ಕೊರಟಗೆರೆ: ರೈತರು ಜಮೀನಿನಲ್ಲಿ ಕಸದ ಗುಡ್ಡೆಗೆ ಇಡಲಾದ ಬೆಂಕಿ, ಗಾಳಿ ಜೋರಾಗಿ ಬೀಸಿದ ಪರಿಣಾಮ ಗುಡಿಸಲಿಗೆ ಪ್ರಸರಿಸಿ ಆರು ಗುಡಿಸಲುಗಳು ಹಾಗೂ ಎರಡು ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿ ಹಾಗೂ 3 ಮೇಕೆಗಳು ಸ್ಥಳದಲ್ಲಿಯೇ ಸಜೀವ ದಹನವಾಗಿರುವ ಮನ ಕಲಕುವ ಘಟನೆಯೊಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಬೈಚಾಪುರ ಗ್ರಾ.ಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಸುಶೀಲಮ್ಮ, ಸಣ್ಣಚೆನ್ನಪ್ಪ , ಕರಿಯಣ್ಣ, ವೆಂಕಟರವಣಪ್ಪ, ಶಿವಮ್ಮ ಎಂಬುವರ ಗುಡಿಸಲುಗಳು ಭಸ್ಮವಾದರೆ , ಲಕ್ಷ್ಮಿಪತಿ ಎಂಬವರಿಗೆ ಸೇರಿದ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿದೆ. ವೆಂಕಟಪ್ಪ ಚನ್ನಪ್ಪ ಎಂಬುವರ ನಾಲ್ಕು ಮೇಕೆಗಳು ಸಜೀವ ದಹನವಾಗಿವೆ.
ಭಾನುವಾರ ಮಧ್ಯಾಹ್ನ ಪಕ್ಕದ ರೈತರ ಜಮೀನಿನಲ್ಲಿ ಹುಲ್ಲು ಹಾಯ್ದು ಕಸ ಕಡ್ಡಿಗೆ ಬೆಂಕಿ ಇಡಲಾದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಾಳಿಗೆ ಬೆಂಕಿಯ ಕಿಡಿಗಳು ಗುಡಿಸಲಿಗೆ ತಾಗಿ ಬೆಂಕಿ ಪ್ರಸರಿಸಿದೆ.
ಸಾರ್ವಜನಿಕರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಕೈ ಕಟ್ಟಿ ಕೂರುವಂತಾಯಿತು.
Related Articles
ಅಗ್ನಿಶಾಮಕ ದಳ ಆಗಮಿಸುವ ಹೊತ್ತಿಗೆ ಎಲ್ಲಾವೂ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿ ಬಡ ರೈತಾಪಿ ವರ್ಗದ ಹುಲ್ಲಿನ ಬಣವೆ , ದಿನಸಿ ಸಾಮಗ್ರಿಗಳು ಸೇರಿದಂತೆ ದಿನ ಬಳಕೆ ಬಟ್ಟೆಗಳು ಸಹ ಬೆಂಕಿ ಕೆನ್ನಾಲಿಗಿಗೆ ಸುಟ್ಟು ಭಸ್ಮವಾಗಿದ್ದು, ಬಡ ರೈತಾಪಿ ವರ್ಗ ಚಿಂತಾ ಕ್ರಾಂತರಾಗಿ ಸರ್ಕಾರದ ಮೊರೆ ಹೋಗುವಂತಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ,ಸಿಪಿಐ ಕೆ ಸುರೇಶ್, ಪಿಎಸ್ಐ ಪ್ರದೀಪ್ ಸಿಂಗ್ ಸ್ಥಳಕ್ಕೆ ಆಗಮಿಸಿ ರೈತರ ನಷ್ಟದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅತಿ ಶೀಘ್ರವಾಗಿ ಬಡ ರೈತರಿಗೆ ಸರಕಾರದಿಂದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಶ್ರಮವಿಸುವುದಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Video: ಸಿಗರೇಟ್ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ… ಇಬ್ಬರು ಯುವತಿಯರ ವಿರುದ್ಧ FIR