Advertisement
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತೀರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು.
Related Articles
Advertisement
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ: ಅಯೋಧ್ಯೆ 2031 ಮಾಸ್ಟರ್ ಪ್ಲಾನ್ ಗೆ ಸಿಎಂ ಯೋಗಿ ಆದಿತ್ಯನಾಥ್ ಅನುಮೋದನೆ
ಚಿರತೆ ದಾಳಿಯಿಂದ 4 ಜನರಿಗೆ ಗಾಯ..ಐ.ಕೆ.ಕಾಲೋನಿಯ ಬಳಿಯ ಬಸ್‌ನಿಲ್ದಾಣದ ಸಮೀಪ ಶ್ರೀನಿವಾಸ್(60), ರಾಜು(47) ಮೇಲೆ ಚಿರತೆ ದಾಳಿ ನಡೆಸಿದೆ. ನಂತರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತೀದ್ದ ಧನುಷ್(13), ಚೇತನ್(15) ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ವಾರದಿಂದ ನಾಲ್ಕೈದು ಸಲ ಚಿರತೆಯು ಕಾಣಿಸಿಕೊಂಡು ರೈತರನ್ನು ಭಯಗೊಳಿಸಿದೆ. ಹಾಲು ಕರೆಯುತ್ತೀದ್ದ ನನ್ನ ಮಕ್ಕಳ ಮೇಲೆ ಚಿರತೆಯು ದಾಳಿ ನಡೆಸಿದೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆ ರವಾನಿಸಲು ತುರ್ತುವಾಹನಕ್ಕೆ ಅರ್ಧಗಂಟೆ ಕಾದರೂ ಬರಲಿಲ್ಲ. ಆಸ್ಪತ್ರೆಯ ಮುಂದೆ ೩ತುರ್ತುವಾಹನ ವ್ಯರ್ಥವಾಗಿ ನಿಂತಿವೆ. ನಾನು ಪ್ರಶ್ನಿಸಿದರೇ ನಮಗೆ ಆದೇಶ ಬರಬೇಕು ಅಂತಾರೇ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಹಿಡಿಯಬೇಕಿದೆ. – ಕೆಂಪರಾಜು. ರೈತ. ಐ.ಕೆ.ಕಾಲೋನಿ ಕೊರಟಗೆರೆಯಲ್ಲಿ ತುರ್ತುವಾಹನ ಸೌಲಭ್ಯವಿದ್ದರೂ ನಿರ್ವಹಣೆ ವಿಫಲ ಆಗಿದೆ. ಚಿರತೆ ದಾಳಿಯಿಂದ ಗಾಯಗೊಂಡ ೪ ಜನರಿಗೆ ತುರ್ತುವಾಹನ ಸೌಲಭ್ಯ ದೊರೆಯುತ್ತಿಲ್ಲ. ತುರ್ತುವಾಹನ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅರಣ್ಯ ಇಲಾಖೆ ತಕ್ಷಣ ಚಿರತೆಯನ್ನು ಸೆರೆಹಿಡಿದು ರೈತರಿಗೆ ಅನುಕೂಲ ಕಲ್ಪಿಸಬೇಕಿದೆ. – ಪಿ.ಆರ್. ಸುಧಾಕರಲಾಲ್. ಮಾಜಿ ಶಾಸಕ. ಕೊರಟಗೆರೆ