ಕೊರಟಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ತನ್ನ ಪ್ರೀಯತಮನ ಜೊತೆ ಸೇರಿ 20 ಸಾವಿರಕ್ಕೆ ಬೆಂಗಳೂರು ಮೂಲದ ಯುವಕನಿಗೆ ಸುಫಾರಿ ನೀಡಿ ಮಧುಗಿರಿ ಬೈಪಾಸ್ ರಸ್ತೆಯಲ್ಲಿ ಕೊಲೆ ಮಾಡಿಸಿ ಕೊರಟಗೆರೆ ರೈತನ ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿಸಿರುವ ಘಟನೆ ಸೋಮವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ರೈತ ಕೊಲ್ಲಪ್ಪನ ಜಮೀನಿನಲ್ಲಿ ಘಟನೆ ನಡೆದಿದೆ. ಕೊಲೆಯಾದ ಮೃತದೇಹವನ್ನು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ತಾಲೂಕು ದುರ್ಗದಹಳ್ಳಿಯ ಸುರೇಶ್(36) ಕೊಲೆಯಾದ ದುರ್ದೈವಿ.
ಕೊಲೆಯಾದ ಸುರೇಶ್ನ ಮಡದಿ ವೆಂಕಟಲಕ್ಷ್ಮಮ್ಮ ಜೊತೆ ಬಸವನಹಳ್ಳಿ ಗ್ರಾಮದ ಲೊಕೇಶ್(27) ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಪ್ರೀಯಕರ ಜೊತೆ ಸೇರಿ ಮತ್ತೋರ್ವನಿಗೆ 20 ಸಾವಿರ ಸುಫಾರಿ ಮಾತನಾಡಿ 5 ಸಾವಿರ ಮುಂಗಡ ಪಡೆದು ಕೊಲೆ ಮಾಡಲಾಗಿದೆ.
ಮಧುಗಿರಿ ಬೈಪಾಸ್ ರಸ್ತೆಯಲ್ಲಿ ಎಣ್ಣೆ ಕುಡಿಸಿ ಲೊಕೇಶ್ ಮತ್ತು ಸ್ನೇಹಿತರು ಕೊಲೆ ಮಾಡಿದ್ದಾರೆ. ಕೊಲೆಯ ಸಂಬಂಧ ಬಸವನಹಳ್ಳಿಯ ಲೊಕೇಶ್, ಗೌರಿಬಿದನೂರಿನ ವೆಂಕಟಲಕ್ಷ್ಮಮ್ಮ, ಚಿನ್ನಮ್ಮ ಮತ್ತು ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಕೊರಟಗೆರೆ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತೀದೆ.
Related Articles
ಮಧುಗಿರಿ ಬೈಪಾಸ್ ಬಳಿ ಕೊಲೆ ಮಾಡಿದ ಸುರೇಶನನ್ನು ಕೊರಟಗೆರೆಯ ಬಸವನಹಳ್ಳಿಯ ಬಳಿ ಮುಚ್ಚಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು, ಕೊರಟಗೆರೆ ಸಿಪಿಐ ಸುರೇಶ್, ಪಿಎಸೈ ಚೇನತ್ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.