Advertisement

ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಕೊರಟಗೆರೆ ವಕೀಲರ ಸಂಘದ ಪ್ರತಿಭಟನೆ

08:41 PM Dec 08, 2022 | Team Udayavani |

ಕೊರಟಗೆರೆ: ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಎಲ್. ನಾಗರಾಜು ತಿಳಿಸಿದರು.

Advertisement

ಪಟ್ಟಣದ ಜೆಎಂಎಫ್‌ಸಿ ನ್ಯಾಯಲಯಾದ ಅವರಣದ ಮುಂಬಾಗದಲ್ಲಿ ವಕೀಲರ ಸಂಘದಿಂದ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಡಿ.3 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಯುವ ವಕೀಲ ಕುಲದೀಪ್ ಶಟ್ಟಿ ಅವರ ಮೇಲೆ ಅಮಾನುಷವಾಗಿ ವರ್ತಸಿ, ವಕೀಲರ ವೃತ್ತಿ ಭಾಂದವರಿಗೆ ಅವಮಾನ ಮಾಡಿದ್ದಾರೆ. ಅವರ ತಾಯಿ ಕಾಡಿಬೇಡಿ ಕೈಮುಗಿದುಕೊಂಡರೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಕೀಲ ಎಂದರೂ ಸಹ ನೀನು ನ್ಯಾಯಲಯದಲ್ಲಿ ವಾದ ಮಾಡು ಎಂದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.

ಹಿರಿಯ ವಕೀಲ ಟಿ.ಕೃಷ್ಣಮೂರ್ತಿ ಮಾತನಾಡಿ, ಮಂಗಳೂರಿನಲ್ಲಿ ಯುವ ವಕೀಲ ಕುಲದೀಪ್ ಶಟ್ಟಿ ಅವರನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಏಕಾಏಕಿ ಅವರ ಮನೆಗೆ ನುಗ್ಗಿ ವಕೀಲ ಅಂತ ನೋಡದೆ ಅವರನ್ನ ಅರೆಬೆತ್ತಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಿಗಳಂತೆ ವರ್ತಿಸಿದ್ದಾರೆ. ಸುಪ್ರಿಂಕೋರ್ಟ್ ಆದೇಶದಂತೆ ಒಬ್ಬ ವಕೀಲರನ್ನು ಬಂಧಿಸಬೇಕಾದರೆ ಸಂಬಂಧಪಟ್ಟ ನ್ಯಾಯದೀಶರ ಮೂಲಕ ಅವರನ್ನ ಬಂಧಿಸಬೇಕು. ಈ ಯಾವುದನ್ನು ಮಾಡದೇ ವಕೀಲ ವೃತ್ತಿಗೆ ಅವಮಾನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಕೀಲರನ್ನು ಬಹಳ ಕೆಟ್ಟ ರೀತಿಯಲ್ಲಿ ನೋಡುತ್ತಿದ್ದು, ಈ ಕೂಡಲೆ ಸರ್ಕಾರ ಪೊಲೀಸರಿಗೆ ಸಾರ್ವಜನಿಕರ ಹಾಗೂ ವಕೀಲರ ಹತ್ತಿರ ಯಾವ ರೀತಿ ನಡೆದುಕೊಳ್ಳಬೇಕು ಎಂದು ತರಬೇತಿ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿ ಹುಸೇನ್ ಪಾಷ, ಖಜಾಂಚಿ ಲಕ್ಷ್ಮೀಸಂತೋಷ್, ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಜಿ.ಎಂ.ಕೃಷ್ಣಮೂರ್ತಿ, ಕೆ.ಸಿ. ನಾಗರಾಜು, ಪುಟ್ಟರಾಜು, ಶಿವರಾಮಯ್ಯ, ಸಂಜೀವರಾಜು, ಎ.ಎಂ.ಕೃಷ್ಣಮೂರ್ತಿ, ತಿಮ್ಮರಾಜು, ಮಧುಸೂಧನ್,ಸಂತೋಷ್, ನರಸಿಂಹರಾಜು, ಕೃಷ್ಣಪ್ಪ, ಮಂಜುನಾಥ್, ವೃಷೇಬೇಂದ್ರಸ್ವಾಮಿ, ರಾಮಚಂದ್ರಯ್ಯ, ಅನೀಲ್‌ಕುಮಾರ್, ಅನಂತರಾಜು, ಕೋಮಲ್ ಗಿರೀಶ್, ಕೆಂಪರಾಜಮ್ಮ, ಬೃಂದಾ, ಅರುಂಧತಿ, ಶಿಲ್ಪ, ಸುನೀಲ್, ತಿಮ್ಮರಾಜು, ಶಿವರಾಜು ಸೇರಿದಂತೆ ಇತರರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next